ಸಿಎಂ ಇಬ್ರಾಹಿಂರಿಂದಲೇ ಜೆಡಿಎಸ್‌ ಅವನತಿ

By Kannadaprabha NewsFirst Published Jan 12, 2023, 5:37 AM IST
Highlights

ಇಬ್ರಾಹಿಂ ಅವರಿಗೆ ನಾಲಿಗೆ ಮೇಲೆ ಹತೋಟಿ ಇಲ್ಲ. ಹುಚ್ಚು ಬಂದಂತೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಅವನತಿಗೆ ಅವರೇ ಕಾರಣರಾಗಲಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಎಚ್ಚರಿಸಿದರು.

 ಮಂಡ್ಯ (ಜ. 12): ಇಬ್ರಾಹಿಂ ಅವರಿಗೆ ನಾಲಿಗೆ ಮೇಲೆ ಹತೋಟಿ ಇಲ್ಲ. ಹುಚ್ಚು ಬಂದಂತೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಅವನತಿಗೆ ಅವರೇ ಕಾರಣರಾಗಲಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಎಚ್ಚರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದೂ ಗೊತ್ತಿರುವ ವಿಚಾರವೇ. ಇಬ್ರಾಹಿಂ ಅದೇ ಪಕ್ಷದ ಅಧ್ಯಕ್ಷರು. ಅವರು ಪಂಚೆ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರು, ಕುಮಾರಸ್ವಾಮಿ, ನಾವು ಹಾಕೋದು ಪಂಚೆಯನ್ನೇ. ಯೋಗಿ ಆದಿತ್ಯನಾಥ್‌ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ನಮಗೆಲ್ಲರಿಗೂ ತೀವ್ರ ನೋವುಂಟುಮಾಡಿದೆ ಎಂದರು.

Latest Videos

ಧರ್ಮದಲ್ಲಿ ಗುರುಗಳಿಗೆ, ಪೂಜ್ಯರಿಗೆ ಬಹಳ ಗೌರವವನ್ನು ಕೊಡುತ್ತೇವೆ. ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಲವ್‌ಜಿಹಾದ್‌ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವುದು. ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ಹೇಳಿಕೆ ನೀಡುವಂತಹದ್ದನ್ನು ಖಂಡಿಸುತ್ತೇನೆ. ಕುಮಾರಸ್ವಾಮಿ ಅವರಿಗೆ ಈ ವಿಚಾರ ಗೊತ್ತಿದ್ದರೂ ರಾಜ್ಯಾಧ್ಯಕ್ಷರ ಹೇಳಿಕೆ ಖಂಡಿಸದೆ ಮೌನ ವಹಿಸಿರುವುದು ಅವರ ಉದ್ಧಟತನವನ್ನು ತೋರಿಸುತ್ತದೆ. ಇಬ್ರಾಹಿಂ ವರ್ತನೆ ಹಿಂದೂ ವಿರೋಧಿಯಾಗಿದೆ. ತಕ್ಷಣವೇ ಕುಮಾರಸ್ವಾಮಿ ಮತ್ತು ಇಬ್ರಾಹಿಂ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಸ್ಯಾಂಟ್ರೋ ರವಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಸ್ಯಾಂಟ್ರೋ ರವಿ ಯಾರೆನ್ನುವುದೇ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದರು. ಕಾಂಗ್ರೆಸ್‌ ಬಸ್‌ ಯಾತ್ರೆ ಆರಂಭ ಕುರಿತಂತೆ, ಕಾಂಗ್ರೆಸ್‌ನವರು ಎಲ್ಲಾ ರೀತಿಯ ಯಾತ್ರೆ ಮಾಡುತ್ತಾರೆ. ಚುನಾವಣೆ ಹತ್ತಿರ ಬರುತ್ತಿದೆ ಎಂದು ಯಾತ್ರೆ ಮಾಡುತ್ತಿದ್ದಾರೆ. ಭಾರತ್‌ ಜೋಡೋ ಯಾತ್ರೆ ಮಾಡಿದ ಬಳಿಕ ಬಸ್‌ ಯಾತ್ರೆ ಬೇಕಿತ್ತಾ? ಎರಡೂ ಬಸ್‌ ಬಿಟ್ಟಿದ್ದಾರೆ. ಶಿವಕುಮಾರ್‌ ಒಂದು ಬಸ್‌, ಸಿದ್ದರಾಮಯ್ಯರದ್ದು ಮತ್ತೊಂದು ಬಸ್‌. ಈ ಬಸ್‌ಗಳು ಯಾವಾಗ ಎಲ್ಲಿ ಪಂಚರ್‌ ಆಗ್ತವೋ ನೋಡೋಣ. ಈಗ ಜೊತೆಯಲ್ಲಿ ಹೋಗುತ್ತಾರೆ. ಆಮೇಲೆ ಇಬ್ಬಾಗ ಆಗುತ್ತಾರೆ. ಇಬ್ಬರ ಕಿತ್ತಾಟ ಯಾವ ದಿಕ್ಕಿಗೆ ಹೋಗುವುದೋ ಕಾದುನೋಡಬೇಕು ಎಂದರು.

ತಾಕತ್ತಿದ್ದರೆ ಪುತ್ರನನ್ನು ಗೆಲ್ಲಿಸಲಿ :  

 ಹುಮನಾಬಾದ್‌ :  ಸಿಎಂ ಇಬ್ರಾಹಿಂಗೆ ತಾಕತ್ತು ಇದ್ರೆ ಚುನಾವಣೆ ಎದುರಿಸುವ ಮೂಲಕ ತನ್ನ ಮಗನನ್ನು ಗೆಲ್ಲಿಸಲಿ. ಹೊರತಾಗಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಶಾಸಕ ರಾಜಶೇಖರ ಪಾಟೀಲ್‌ ಸವಾಲೆಸೆದರು.

ಪಟ್ಟಣದ ಥೇರ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 4ನೇ ಹಂತದ ಅಮೃತ್‌ ನಗರೋತ್ಥಾನ ಯೋಜನೆ ಅಡಿಯಲ್ಲಿನ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ 5.7ಕೋಟಿ ರು.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜೆಡಿಎಸ್‌ ಪಂಚರತ್ನ ರಥ ಯಾತ್ರೆ ವೇಳೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ನನ್ನ ಮಗನಿಗಾಗಿ ಶಾಸಕ ರಾಜಶೇಖರ ಪಾಟೀಲ್‌ ಕ್ಷೇತ್ರ ತ್ಯಜಿಸಲಿ ಎಂದು ಹೇಳಿಕೆ ನೀಡಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಅನಗತ್ಯ ಹೇಳಿಕೆ ನೀಡುವದನ್ನು ನಿಲ್ಲಿಸಲಿ, ನಮ್ಮ ತಂದೆ ಬಸವರಾಜ ಪಾಟೀಲ್‌ ಅವರು ಮೊದಲ ಬಾರಿ ಶಾಸಕರಾದಾಗ ನಾನು 13 ವರ್ಷದವನಿದ್ದೆ ಎಂಬುವದನ್ನು ಸಿ.ಎಂ ಇಬ್ರಾಹಿಂ ಅರಿಯಲಿ ಎಂದರು. ಇನ್ನು ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿಯನ್ನು ಜನ ಅರಿತಿದ್ದಾರೆ. ಜನಪರವಾದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿದ್ದು ನನಗೆ ಹೆಮ್ಮೆಯಿದೆ. ಚುನಾವಣೆ ಮಾತ್ರಕ್ಕೆ ಕ್ಷೇತ್ರಕ್ಕೆ ಬರುವ ಜನರನ್ನು ನಂಬಬೇಡಿ ಎಂದು ಮತದಾರರಿಗೆ ಕರೆ ನೀಡಿದರು.

ಅವರು ಕಾಮಗಾರಿಗಳನ್ನು ಗುಣಮಟ್ಟದ್ದಾಗಿ ಹಾಗೂ ಪಾರದರ್ಶಕವಾಗಿಯೂ ನೋಡಿಕೊಳ್ಳುವ ಜವಾಬ್ದಾರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪಾತ್ರವೂ ಮುಖ್ಯವಾಗಿದೆ ಹಾಗೆಯೇ ಕಾಮಗಾರಿಗಳ ಕುರಿತು ನಾಮ ಫಲಕ ಕಡ್ಡಾಯ ಅಳವಡಿಸುವಂತೆ ಸೂಚಿಸಿದರು. ಈಗಾಗಲೇ ಕ್ಷೇತ್ರದ ಸವಾಂರ್‍ಗೀಣ ಪ್ರಗತಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ಹುಮನಾಬಾದ್‌, ಚಿಟ್ಟಗುಪ್ಪ ಹಾಗೂ ಹಳ್ಳಿಖೇಡ (ಬಿ) ಸೌಂದರ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ, ಜ. 13ರಂದು ಘಾಟಬೋರಳ ಗ್ರಾಮದಲ್ಲಿ ನಿರ್ಮಿಸಿರುವ 26 ಕೋಟಿ ರು, ವೆಚ್ಚದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಹಳ್ಳಿಖೇಡ (ಬಿ) ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪುರಸಭೆ ಕಾರ್ಯಾಲಯ ಉದ್ಘಾಟಿಸಲಿದ್ದೇವೆ ಹಾಗೆಯೇ ಶೀಘ್ರದಲ್ಲಿಯೇ ಪ್ರವಾಸಿ ಮಂದಿರದ ನೂತನ ಕಟ್ಟದ ಸಹಿತ ಉದ್ಘಾಟಿಸಲಾಗುವುದು ಎಂದರು.

ಬೀದರ್‌ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟು ಇನ್ನೂ ಹೆಚ್ಚಿನ ಅನುದಾನ ಪಡೆಯಲಾಗಿದೆ ಅಲ್ಲದೆ ಶೀಘ್ರದಲ್ಲಿಯೇ ಬಿಎಸ್‌ಎಸ್‌ಕೆ ಕಾರ್ಖಾನೆಗೆ ಶಾಶ್ವತ ಪರಿಹಾರ ಕಲ್ಪಿಸುವದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಟಿಎಪಿಸಿಎಂಎಸ್‌ ಅಧ್ಯಕ್ಷ ಅಭಿಷೇಕ ಪಾಟೀಲ್‌, ಪುರಸಭೆ ಅಧ್ಯಕ್ಷ ನೀತು ಶರ್ಮಾ, ಉಪಾಧ್ಯಕ್ಷೆ ಸತ್ಯವತಿ ಮಠಪತಿ, ಹಳ್ಳಿಖೇಡ ಪುರಸಭೆ ಅಧ್ಯಕ್ಷ ನಾಗರಾಜ ಹಿಬಾರೆ, ಮುಖ್ಯಾಧಿಕಾರಿ ಶಿವರಾಜ ರಾಠೋಡ, ಸದಸ್ಯರಾದ ಅಫ್ಸರಮಿಯ್ಯ, ಗೋರೆಮಿಯ್ಯ, ಕಾಳಪ್ಪ (ಸುನಿಲ) ಪಾಟೀಲ್‌ ಸೇರಿದಂತೆ ಮತ್ತಿತರರು ಇದ್ದರು.

click me!