ಪಂಚಮಸಾಲಿ 2ಎ ಮೀಸಲಾತಿ: ನಮ್ಮ ಸಮಾಜದ ಶಾಸಕರಿಗೂ ಇಚ್ಛಾಶಕ್ತಿ ಕೊರತೆ ಎದ್ದು ಕಾಣ್ತಿದೆ, ಕೂಡಲ ಶ್ರೀ

By Girish Goudar  |  First Published Aug 28, 2024, 9:34 PM IST

ಸೆ. 22ಕ್ಕೆ ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್ ಸಮಾವೇಶ ಮಾಡಲಿದ್ದೇವೆ. ಬೆಳಗಾವಿಯಲ್ಲಿ ಈ ಸಮಾವೇಶ ನಡೆಯಲಿದೆ. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ವಕೀಲರು ಪಾಲ್ಗೊಳ್ಳುತ್ತಿದ್ದಾರೆ. ಐದು ಸಾವಿರದಷ್ಟು ವಕೀಲರು ಸೇರಲಿದ್ದಾರೆ. ಅವತ್ತು ಕೆಲವು ಕಠಿಣವಾದ ನಿರ್ಣಯಗಳನ್ನು ಅಂಗೀಕರಿಸಲಿದ್ದೇವೆ. ಅಂದಿನ ಸಭೆಯಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸ ವಕೀಲರ ಮೂಲಕ‌ ಮಾಡುತ್ತೇವೆ: ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ


ಧಾರವಾಡ(ಆ.28):  ಕಾನೂನಾತ್ಮಕ ಬೆಂಬಲ ಪಡೆಯಲು ವಕೀಲರ ಸಂಘಟನೆ ಮಾಡುತ್ತಿದ್ದೇವೆ. ಎಲ್ಲ ಕಡೆ ನೂತನ ಜಿಲ್ಲಾ ಘಟಕಗಳನ್ನು ಮಾಡುತ್ತಿದ್ದೇವೆ. ಹಿರಿಯ ವಕೀಲರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಿದ್ದೇವೆ. ಮೂರೂವರೆ ವರ್ಷದಿಂದ ಮೀಸಲಾತಿಗಾಗಿ ನಿರಂತರ ಹೋರಾಟ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ರೀತಿಯ ಸ್ಪಂದನೆ ಮಾಡಿಲ್ಲ. 7ನೇ ಹಂತದ ಹೋರಾಟ ಆರಂಭಿಸಿದ್ದೇವೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. 

ಇಂದು(ಬುಧವಾರ) ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಸಭೆ ನಡೆದಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶ್ರೀಗಳು, ಅಧಿಕಾರಕ್ಕೆ ಬಂದ ಮೇಲೆ ನಮ್ಮ ಸಮಾಜದ ಶಾಸಕರು ಮಾತನಾಡಿಲ್ಲ. ನಾವು ಇದಕ್ಕಾಗಿಯೇ ಶಾಸಕರಿಗೆ ಪತ್ರ ಕೊಟ್ಟು ಚಳವಳಿ ಮಾಡಿದ್ವಿ. ಶಾಸಕಾಂಗ ಸಹ ನಮ್ಮ ಮೀಸಲಾತಿಗಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ವಕೀಲರ ಸಂಘಟನೆ ಮಾಡುತ್ತಿದ್ದೇವೆ. ಸೆ. 22ಕ್ಕೆ ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್ ಸಮಾವೇಶ ಮಾಡಲಿದ್ದೇವೆ. ಬೆಳಗಾವಿಯಲ್ಲಿ ಈ ಸಮಾವೇಶ ನಡೆಯಲಿದೆ. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ವಕೀಲರು ಪಾಲ್ಗೊಳ್ಳುತ್ತಿದ್ದಾರೆ. ಐದು ಸಾವಿರದಷ್ಟು ವಕೀಲರು ಸೇರಲಿದ್ದಾರೆ. ಅವತ್ತು ಕೆಲವು ಕಠಿಣವಾದ ನಿರ್ಣಯಗಳನ್ನು ಅಂಗೀಕರಿಸಲಿದ್ದೇವೆ. ಅಂದಿನ ಸಭೆಯಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸ ವಕೀಲರ ಮೂಲಕ‌ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

Latest Videos

undefined

ಧಾರವಾಡ: ಮಿಷನ್ ವಿದ್ಯಾಕಾಶಿ, SSLC ಮಾದರಿಯ ಬೇಸ್‍ಲೈನ್ ಪರೀಕ್ಷೆಗೆ ಸಚಿವ ಲಾಡ್‌ ಮೆಚ್ಚುಗೆ

ಸ್ಪೀಕರ್‌ ನಮ್ಮ ಸಮಾಜದ ಶಾಸಕರಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಆದರೂ ನಮ್ಮ ಶಾಸಕರು ಧ್ವನಿ ಎತ್ತಿಲ್ಲ. ನಮ್ಮ ಸಮಾಜದ ಶಾಸಕರಿಗೂ ಇಚ್ಛಾಸಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ತಿಳಿಸಿದ್ದಾರೆ. 

click me!