ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ಯಡಿಯೂರಪ್ಪ ಇದ್ದಾಗ ಮಾತ್ರ ಸಾಧ್ಯ| ಮುಂದೆ ಯಾರೂ ನಮಗೆ ಮೀಸಲಾತಿ ಕೊಡಲ್ಲ| ಯಡಿಯೂರಪ್ಪನವರಿಗಾಗಿ ನಮ್ಮ ಜನ ತ್ಯಾಗ ಮಾಡಿದ್ದಾರೆ. ಮತ ಕೊಟ್ಟಿದ್ದಾರೆ| ಯಡಿಯೂರಪ್ಪ ಮಂತ್ರಿ ಸ್ಥಾನ,ನಿಗಮ ಮಂಡಳಿ ಸ್ಥಾನ ಕೊಟ್ರೆ ಆಗಲ್ಲ. ನಮಗೆ ಮೀಸಲಾತಿ ಬೇಕು ಎಂದ ಅಗ್ರಹಿಸಿದ ಸ್ವಾಮೀಜಿ|
ಕೊಪ್ಪಳ(ಜ.16): ಬಿಜೆಪಿ ಸರ್ಕಾರ ರಚನೆ ಆಗಲು ಮಠಾಧೀಶರ ಪಾತ್ರ ದೊಡ್ಡದಿದೆ. ಅದರಲ್ಲೂ ಪಂಚಮಸಾಲಿ ಮಠಾಧೀಶರ ಪಾತ್ರ ದೊಡ್ಡದಿದೆ ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಆಗ್ರಹಿಸಿ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿದ್ದಾರೆ. ಹುನಗುಂದದಿಂದ ಕುಷ್ಟಗಿ ತಾಲೂಕಿಗೆ ಪಾದಯಾತ್ರೆ ಆಗಮಿಸಿದೆ. ಹೀಗಾಗಿ ಇಂದು(ಶನಿವಾರ) ಜಿಲ್ಲೆಯ ಕುಷ್ಟಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ಯಡಿಯೂರಪ್ಪ ಇದ್ದಾಗ ಮಾತ್ರ ಸಾಧ್ಯ. ಮುಂದೆ ಯಾರೂ ನಮಗೆ ಮೀಸಲಾತಿ ಕೊಡಲ್ಲ. ಯಡಿಯೂರಪ್ಪನವರಿಗಾಗಿ ನಮ್ಮ ಜನ ತ್ಯಾಗ ಮಾಡಿದ್ದಾರೆ. ಮತ ಕೊಟ್ಟಿದ್ದಾರೆ. ಯಡಿಯೂರಪ್ಪ ಮಂತ್ರಿ ಸ್ಥಾನ,ನಿಗಮ ಮಂಡಳಿ ಸ್ಥಾನ ಕೊಟ್ರೆ ಆಗಲ್ಲ. ನಮಗೆ ಮೀಸಲಾತಿ ಬೇಕು ಎಂದ ಸ್ವಾಮೀಜಿ ಅಗ್ರಹಿಸಿದ್ದಾರೆ.
'ಸಿಡಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಯಾಕೆ ವೀಕ್ ಆಗಿದ್ದಾರೆ ಗೊತ್ತಿಲ್ಲ'
ಯಡಿಯೂರಪ್ಪ ಈ ಆಕ್ರಂದನವನ್ನ ಅರ್ಥ ಮಾಡಿಕೊಳ್ಳಬೇಕು. ಪಾದಯಾತ್ರೆ ಬೆಂಗಳೂರು ಮುಟ್ಟೋದರೊಳಗೆ ಮೀಸಲಾತಿ ನೀಡಬೇಕು. ನಾಳೆ ಅಮಿತ್ ಶಾ ನಿರಾಣಿಯವರ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡುತ್ತಿದ್ದಾರೆ. ನಿರಾಣಿ ಶಾಲು ಹಾಕಿ ಸನ್ಮಾನ ಮಾಡಿದ್ರೆ ಸಾಲದು. ಅಮಿತ್ ಶಾಗೆ ನಿರಾಣಿ ಮನವರಿಕೆ ಮಾಡಿಕೊಡಬೇಕೆಂದ ಸ್ವಾಮೀಜಿ ಆಗ್ರಹಿಸಿದ್ದಾರೆ.