ಚಂದ್ರಗ್ರಹಣ: ಬನಶಂಕರಿ ದೇಗುಲದಲ್ಲಿ ದೇವಿಗೆ ಜಲಾಭಿಷೇಕ

By Web DeskFirst Published Jul 16, 2019, 7:53 PM IST
Highlights

ಚಂದ್ರಗ್ರಹಣ ಹಿನ್ನೆಲೆ ಬನಶಂಕರಿ ದೇವಿಗೆ ಜಲಾಭಿಷೇಕ| ಎಂದಿನಂತೆ ಮುಂದುವರೆದ ಭಕ್ತರ ದರ್ಶನ|  ಚಂದ್ರ ಗ್ರಹಣಕ್ಕೆ ಬೆಳಗಿನ 1.35 ಸ್ಪರ್ಶಕಾಲ, 4.31 ಮೋಕ್ಷಕಾಲ|  ಗ್ರಹಣದ ವೇಳೆ ದೇವಿಗೆ ವಿಶೇಷ ಪೂಜೆಗಳಿಲ್ಲ ಎಂದ ಅಚ೯ಕರು|
 

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಜು.16): ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಾಡಿನ ಅನೇಕ ದೇವಾಲಯಗಳಲ್ಲಿ ಧಾಮಿ೯ಕ ಕಾಯ೯ಕ್ರಮಗಳಲ್ಲಿ ಕೆಲವು  ಬದಲಾವಣೆ ಕಂಡುಬರುತ್ತಿದೆ. 

ಈ ಮಧ್ಯೆ ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರುವ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿಯ ಬನಶಂಕರಿ ದೇಗುಲದಲ್ಲಿ ಗ್ರಹಣದ ವೇಳೆ ದೇವಿಗೆ ಜಲಾಭಿಷೇಕ ಮಾತ್ರ ನಡೆಯಲಿದೆ.

"

ಚಂದ್ರ ಗ್ರಹಣಕ್ಕೆ ಬೆಳಗಿನ 1.35 ಸ್ಪರ್ಷಕಾಲವಾಗಿದ್ದರೆ ಇತ್ತ  4.31 ಮೋಕ್ಷ ಕಾಲವಾಗಿದೆ. ಇನ್ನು ಗ್ರಹಣದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜಾ ಕೈಂಕಯ೯ಗಳು ಇರದೇ ದೇವಿಗೆ  ಜಲಾಭಿಷೇಕ ಮಾತ್ರ ನಡೆಯಲಿದೆ. 

ಇನ್ನು ಗ್ರಹಣದ ವೇಳೆ ಭಕ್ತರಿಗೆ ಗರ್ಭಗೃಹ ಪ್ರವೇಶ ಮಾತ್ರ ನಿಷಿದ್ದವಿದ್ದು, ಎಂದಿನಂತೆ ಭಕ್ತರಿಗೆ ದಶ೯ನ ಕ್ಕೆ ಮಾತ್ರ ಯಾವುದೇ ತೊಂದರೆ ಇಲ್ಲ. ಗ್ರಹಣದ ಬಳಿಕ ಎಂದಿನಂತೆ ಪೂಜಾ ಕೈಂಕಯ೯ಗಳು ನಡೆಯಲಿದೆ. 

ಇನ್ನು ಗ್ರಹಣದ ಮುನ್ನಾ ದಿನ ಅಂದ್ರೆ ಗುರುಪೂರ್ಣಿಮೆ ದಿನವಾದ ಇಂದು ಐತಿಹಾಸಿಕ ಬಾದಾಮಿಯ  ಬನಶಂಕರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬಂದಿತ್ತು.

"

ಈ ಮಧ್ಯೆ ಭಕ್ತರು ದೇವಿ ದಶ೯ನ ಪಡೆದು, ಪ್ರಸಾದ ಸ್ವೀಕರಿಸಿ ಕೃತಾಥ೯ರಾಗಿದ್ದು ಕಂಡು ಬಂದಿತು.

click me!