ವಿದ್ಯಾರ್ಥಿಗಳಲ್ಲಿ ಅಪಾರವಾದ ರಚನಾತ್ಮಕತೆ ಮತ್ತು ಸೃಜನಶೀಲತೆ ಅಂತರ್ಗತವಾಗಿರುತ್ತದೆ. ಇಂತಹ ಮಕ್ಕಳಲ್ಲಿರುವ ಬಹು ಅಮೂಲ್ಯ ಮಾನವೀಯ ಸಂಪನ್ಮೂಲಗಳನ್ನು ಜಾಗೃತಗೊಳಿಸುವುದು ಶಿಕ್ಷಕರ ಜವಾಬ್ದಾರಿ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಶಿಕ್ಷಣ ತಜ್ಞ ಡಾ.ಪಿ.ಎಚ್. ಮಹೇಂದ್ರಪ್ಪ ಹೇಳಿದರು.
ಶಿರಾ : ವಿದ್ಯಾರ್ಥಿಗಳಲ್ಲಿ ಅಪಾರವಾದ ರಚನಾತ್ಮಕತೆ ಮತ್ತು ಸೃಜನಶೀಲತೆ ಅಂತರ್ಗತವಾಗಿರುತ್ತದೆ. ಇಂತಹ ಮಕ್ಕಳಲ್ಲಿರುವ ಬಹು ಅಮೂಲ್ಯ ಮಾನವೀಯ ಸಂಪನ್ಮೂಲಗಳನ್ನು ಜಾಗೃತಗೊಳಿಸುವುದು ಶಿಕ್ಷಕರ ಜವಾಬ್ದಾರಿ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಶಿಕ್ಷಣ ತಜ್ಞ ಡಾ.ಪಿ.ಎಚ್. ಮಹೇಂದ್ರಪ್ಪ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಾಮಾನುಜನ್ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಗಣಿತ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಯ ಮಕ್ಕಳು ಸಮರ್ಥರು ಪ್ರತಿಭಾವಂತರು ಮತ್ತು ಉತ್ತಮ ವ್ಯಕ್ತಿತ್ವ ಉಳ್ಳವರಾಗಿದ್ದು, ಈ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಮೂಲಭೂತ ಸೌಲಭ್ಯಗಳು, ವೈಜ್ಞಾನಿಕವಾಗಿ ಮತ್ತು ನಿರ್ಮಾಣಾತ್ಮಕವಾಗಿ ಆಲೋಚಿಸುವ ರೀತಿಯನ್ನು ಕಲಿಸಿ ಕೊಟ್ಟರೆ ಉನ್ನತವಾದುದನ್ನು ಸಾಧಿಸುತ್ತಾರೆ. ಮಕ್ಕಳ ದೃಷ್ಟಿಕೋನ ಅವರ ಆಲೋಚಿಸುವ ರೀತಿ ಅವರಲ್ಲಿರುವ ವಿವೇಕ ವಿವೇಚನೆ ಶಿಕ್ಷಕರ ಪ್ರೇರಣೆಯ ಮೂಲಕ ಜಾಗೃತಗೊಂಡಾಗ ಮಕ್ಕಳು ವಿಶ್ವವಿಖ್ಯಾತ ವ್ಯಕ್ತಿತ್ವ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದರು.
undefined
ಈ ನಿಟ್ಟಿನಲ್ಲಿ ಶಿರಾ ಬಾಲಕಿಯರ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಬಹು ಅಮೂಲ್ಯ ಚಟುವಟಿಕೆಗಳನ್ನು ಮಾಡುತ್ತಿರುವುದು ಸಂತೋಷವನ್ನುಂಟು ಮಾಡಿದೆ ನಾವು ಮಕ್ಕಳನ್ನು ಭವಿಷ್ಯದ ನಾಗರಿಕರನ್ನುತ್ತೇವೆ ಆದರೆ ಅವರನ್ನು ಪ್ರತಿಭಾವಂತ ನಾಗರೀಕರನಾಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರೌಢಶಾಲಾ ಶಿಕ್ಷಕರು ಮಕ್ಕಳಿಗೆ ಬಹು ಅಮೂಲ್ಯ ಪ್ರೇರಣೆ ನೀಡುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಗಣಿತ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿನಿಯರು ಹಲವಾರು ವೈಜ್ಞಾನಿಕ ಉಪಕರಣಗಳ ಗಣಿತದ ಪ್ರಾತ್ಯಕ್ಷಿಕೆಯನ್ನು ವಿವರಿಸಿದರು. ಗಣಿತ ಆಧಾರಿತ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಅಣ್ಣೇಶ್, ವಿಜ್ಞಾನ ಶಿಕ್ಷಕರಾದ ಮಂಜುನಾಥ್ಮ ರಾಜಣ್ಣ, ಪಾರ್ವತಿ, ಬಸವರಾಜ್, ಗೋವಿಂದಪ್ಪ ಸೇರಿದಂತೆ ಹಲವರು ಹಾಜರಿದ್ದರು.