Breaking News ಐಪಿಎಲ್ ಕ್ರಿಕೆಟ್ ಮೇಲೆ ಮತ್ತೆ ಬೆಟ್ಟಿಂಗ್ ಭೂತ,ಬೆಳಗಾವಿ ಕುಖ್ಯಾತ ಬುಕ್ಕಿ ಅರೆಸ್ಟ್

Published : May 03, 2026, 08:11 AM IST
IPL Betting

ಸಾರಾಂಶ

Breaking News ಐಪಿಎಲ್ ಕ್ರಿಕೆಟ್ ಮೇಲೆ ಮತ್ತೆ ಬೆಟ್ಟಿಂಗ್ ಭೂತ,ಬೆಳಗಾವಿ ಕುಖ್ಯಾತ ಬುಕ್ಕಿ ಅರೆಸ್ಟ್ ಆಗಿದ್ದಾನೆ. ರಾಜಸ್ಥಾನ ರಾಯಲ್ಸ್ ಹಾಗೂ ಡಿಸಿ ಪಂದ್ಯದ ನಡುವೆ ಬೆಟ್ಟಿಂಗ್ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. 

ಬೆಳಗಾವಿ (ಮೇ.03) ಐಪಿಎಲ್ ಕ್ರಿಕೆಟ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಯಾರು ಪ್ಲೇ ಆಫ್ ಪ್ರವೇಶಿಸುತ್ತಾರೆ, ಯಾರಿಗೆ ಅವಕಾಶವಿದೆ ಅನ್ನೋ ಲೆಕ್ಕಾಚಾರ ಜೋರಾಗಿದೆ. ಇದೇ ವೇಳೆ ಹಲೆವೆಡೆ ಐಪಿಎಲ್ ಕ್ರಿಕೆಟ್ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. ಈ ಪೈಕಿ ಬೆಳಗಾವಿಯಲ್ಲಿ ಕುಖ್ಯಾತ ಬುಕ್ಕಿ ಅರೆಸ್ಟ್ ಆಗಿದ್ದಾನೆ. ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ವೇಳೆ ಪೊಲೀಸರು ಬೆಳಗಾವಿಯ ಶಾಸ್ತ್ರಿ ನಗರದ ನಿವಾಸಿ ಶಾಹೀಲ್ ಪಾಟೀಲ್ ಬಂಧಿಸಿದ್ದಾರೆ.

ಪೊಲೀಸರಿಂದ ದಿಢೀರ್ ದಾಳಿ

23 ವರ್ಷದ ಶಾಹೀಲ್ ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ. ಹಲವರನ್ನು ತನ್ನ ಜಾಲದಲ್ಲಿ ಸಿಲುಕಿಸಿ ಬೆಟ್ಟಿಂಗ್ ನಡೆಸುತ್ತಿದ್ದ. ಮಾಹಿತಿ ಪಡೆದ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ದಾಳಿ ನಡೆಸಿದ್ದಾರೆ. ಆರ್‌ಆರ್ ಹಾಗೂ ಡಿಸಿ ಪಂದ್ಯದ ನಡುವೆ ಬೆಟ್ಟಿಂಗ್ ಮಾಡಿ ಹಣ ಪಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಧಿತ ಶಾಹೀಲ್ ಪಾಟಿಲ್‌ನಿಂದ ಮೊಬೈಲ್, 12900 ಹಣ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ. ಇದೇ ವೇಳೆ ಸಾರ್ವಜನಿಕರಿಗೆ ಪೊಲೀಸರು ಎಚ್ಚಿರಿಕೆ ಸಂದೇಶ ರವಾನಿಸಿದ್ದಾರೆ. ಅಕ್ರಮ ಬೆಟ್ಟಿಂಗ್ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಪ್ರತಿ ಎಸೆತದ ಮೇಲೆ ಬೆಟ್ಟಿಂಗ್

ಮೊಬೈಲ್ ಮೂಲಕ ಲೈವ್ ಸ್ಕೋರ್ ಕಾರ್ಡ್, ಲೈವ್ ಮ್ಯಾಚ್ ನೋಡುತ್ತಾ ಬೆಟ್ಟಿಂಗ್ ನಡೆಸುತ್ತಿದ್ದ. ಈತನ ಬೆಟ್ಟಿಂಗ್ ಜಾಲದಲ್ಲಿ ಸಿಲುಕಿ ಹಲವರು ಹಣ ಕಳೆದುಕೊಂಡಿದ್ದಾರೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗಳು ಹೆಚ್ಚಾಗುತ್ತಿದೆ ಅನ್ನೋ ಆರೋಪದ ನಡುವೆ ಪೊಲೀಸರು ಕಾರ್ಯಾಚರಣೆ ನಡೆಸಿ ಶಾಹೀಲ್‌ನ ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

PREV
Read more Articles on
click me!

Recommended Stories

ಇಂದು ಸಿಂಧನೂರು ಪಟ್ಟಣಕ್ಕೆ ಡಿಕೆಶಿ ಭೇಟಿ, ಬೃಹತ್ ಸಮಾರಂಭಕ್ಕೆ ಗಣ್ಯರ ದಂಡು, ಕಾರ್ಯಕ್ರಮಕ್ಕೆ ಬರುವ ಜನರಿಗೆ ಭರ್ಜರಿ ಭೋಜನ!
Karnataka News Live: Breaking News ಐಪಿಎಲ್ ಕ್ರಿಕೆಟ್ ಮೇಲೆ ಮತ್ತೆ ಬೆಟ್ಟಿಂಗ್ ಭೂತ,ಬೆಳಗಾವಿ ಕುಖ್ಯಾತ ಬುಕ್ಕಿ ಅರೆಸ್ಟ್