ಕೊಟ್ಟೂರು ತಾಲೂಕಿನಲ್ಲಿ ಶುಕ್ರವಾರದಿಂದಲೇ ಇಂಟರ್‌ನೆಟ್ ಸೇವೆ ಸ್ಥಗಿತ| ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಬಿಎಸ್‌ಎನ್‌ಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ| ಸೋಮವಾರದವರೆಗೆ ಇಂತಹ ತೊಂದರೆ ಅನುಭವಿಸಬೇಕು ಎಂದು ಪುಕ್ಕಟೆ ಸೂಚನೆ ನೀಡಿ ಗ್ರಾಹಕರನ್ನು ಸಾಗ ಹಾಕಿದ ಸಿಬ್ಬಂದಿ|
ಕೊಟ್ಟೂರು(ಜೂ.07): ಪಟ್ಟಣದಲ್ಲಿ ಶನಿವಾರ ಇಡೀ ದಿನ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾದ ಕಾರಣ ಅಧಿಕಾರಿಗಳು ದಿನವಿಡೀ ಕೆಲಸವಿಲ್ಲದೆ ಪರದಾಡಿದರು.
ಕೊಟ್ಟೂರು ತಾಲೂಕಿನಲ್ಲಿ ಶುಕ್ರವಾರದಿಂದಲೇ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದ್ದರೂ ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಬಿಎಸ್‌ಎನ್‌ಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರದ ವರೆಗೆ ಇಂತಹ ತೊಂದರೆ ಅನುಭವಿಸಬೇಕು ಎಂದು ಪುಕ್ಕಟೆ ಸೂಚನೆ ನೀಡಿ ಗ್ರಾಹಕರನ್ನು ಸಾಗ ಹಾಕಿದರು.
ಬಳ್ಳಾರಿ: ಜಿಂದಾಲ್‌ನ ಮೂವರು ಸೇರಿ ಆರು ಜನರಿಗೆ ಕೊರೋನಾ ಪಾಸಿಟಿವ್
ಬಿಎಸ್‌ಎನ್‌ಎಲ್ ಇಂಟರನೆಟ್ ಸೇವೆ ಕೊಟ್ಟೂರು ಭಾಗದಲ್ಲಿ ಪದೇ ಪದೇ ಸ್ಥಗಿತವಾಗುತ್ತಿದ್ದರೂ ಅಧಿಕಾರಿಗಳು ಇದನ್ನು ಸರಿಪಡಿಸುವ ಗೋಜಿಗೆ ಹೋಗದೆ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಪ್ ಮಾಡಿಕೊಂಡು ಗ್ರಾಹಕರಿಗೆ ಉತ್ತರ ನೀಡದೆ ವಂಚಿಸುತ್ತಿದ್ದಾರೆ. ತಾಲೂಕಿನಾದ್ಯಂತ ಶನಿವಾರ ನೆಟ್ ಇಲ್ಲದೆ ಎಲ್ಲ ಕಚೇರಿಗಳ ಸಿಬ್ಬಂದಿ ಕೆಲಸವಿಲ್ಲದೆ ಕಾಲಹರಣ ಮಾಡಿದರು.