ಕಪಿಲಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಸ್ಥಳ ಪರಿಶೀಲಿಸಿದ ಡಾ. ಯತೀಂದ್ರ

By Kannadaprabha News  |  First Published Nov 25, 2023, 8:59 AM IST

ನಂಜನಗೂಡು ತಾಲೂಕಿನ ಹದಿನಾರು ಮತ್ತು ನಗರ್ಲೆ ಸಮೀಪ ಕಪಿಲಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಸಲುವಾಗಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಥಳ ಪರಿಶೀಲಿಸಿದರು.


  ಸುತ್ತೂರು :  ನಂಜನಗೂಡು ತಾಲೂಕಿನ ಹದಿನಾರು ಮತ್ತು ನಗರ್ಲೆ ಸಮೀಪ ಕಪಿಲಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಸಲುವಾಗಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಥಳ ಪರಿಶೀಲಿಸಿದರು.

ನಂತರ ಅವರು ಮಾತನಾಡಿ, ಹದಿನಾರು ಮತ್ತು ನಗರ್ಲೆ ಗ್ರಾಮದಿಂದ ಟಿ. ನರಸೀಪುರ ಮತ್ತು ನಂಜನಗೂಡು ತಾಲೂಕು ಕೇಂದ್ರವನ್ನು ಹಾಗೂ ಚಾಮರಾಜನಗರ ಜಿಲ್ಲೆಯನ್ನು ಸಂಪರ್ಕಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

Latest Videos

undefined

ಗ್ರಾಮೀಣ ಭಾಗದ ಜನರು ಪಟ್ಟಣಗಳಿಗೆ ಸಂಪರ್ಕ ಪಡೆದುಕೊಳ್ಳಲು ಈ ಸೇತುವೆ ಬಹಳ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇದನ್ನು ಗಮನಿಸಿ ಈ ಸೇತುವೆ ನಿರ್ಮಾಣಕ್ಕೆ 30 ಕೋಟಿ ರು. ಅನುದಾನವನ್ನು ಒದಗಿಸಲು ಅನುಮೋದನೆ ನೀಡಿದ್ದು, ಶೀಘ್ರದಲ್ಲೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎನ್. ನಂಜಪ್ಪ, ಗ್ರಾಪಂ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜು ಇದ್ದರು.

ನದಿಗೆ ಹಾರಿ ಬದುಕಿ ಬಂದ ವ್ಯಕ್ತಿ

ಮೈಸೂರು[ಆ.13]: ಕಪಿಲಾ ನದಿಯಲ್ಲಿ ಈಜುವ ಸಾಹಸದಿಂದ ಶನಿವಾರ ಇಲ್ಲಿನ ರೈಲ್ವೆ ಸೇತುವೆ ಮೇಲಿನಿಂದ ಬಿದ್ದು ಕಣ್ಮರೆಯಾಗಿದ್ದ ವೆಂಕಟೇಶ್‌ ಪೂಜಾರಿ ಸೋಮವಾರ ಸುಮಾರು ಅರ್ಧ ಕಿ.ಮೀ ದೂರದ ಹೆಜ್ಜಿಗೆ ಸೇತುವೆ ಬಳಿ ಪ್ರತ್ಯಕ್ಷರಾಗಿದ್ದಾರೆ.

ಸ್ನೇಹಿತರೊಂದಿಗೆ ಬೆಟ್ಟಿಂಗ್‌ ಕಟ್ಟಿನದಿಯಲ್ಲಿ ಈಜಲು ನದಿಗೆ ಹಾರಿದೆ, ನದಿಯ ಸೆಳೆತದಿಂದ ಹೆಜ್ಜಿಗೆ ಸೇತುವೆಯ ಪಿಲ್ಲರ್‌ ನಡುವಿನ ಜಾಗದಲ್ಲಿ ತೂರಿಕೊಂಡು ಕುಳಿತಿದ್ದೆ, ಹೆಚ್ಚಿನ ನೀರಿನ ಸೆಳೆತದಿಂದ ಭಾನುವಾರವೂ ಕೂಡ ಹೊರ ಬರಲು ಸಾಧ್ಯವಾಗಲಿಲ್ಲ, ಸೋಮವಾರ ನೀರು ಕಡಿಮೆಯಾದೊಡನೆ ನಾನು ನದಿಯಲ್ಲಿ ಈಜಿ ದಡ ಸೇರಿದೆ, ಆದರೆ ಮಾಧ್ಯಮಗಳು ನನಗೆ ಸಾವು ತರಿಸಿದವು ಎಂದು ಬೇಸರ ವ್ಯಕ್ತಪಡಿಸಿದರು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಈಜುವ ಸಾಹಸದಿಂದ ಸ್ನೇಹಿತರಿಗೆ ವೀಡಿಯೋ ಮಾಡುವಂತೆ ತಿಳಿಸಿ ಶನಿವಾರ ಬೆಳಗ್ಗೆ 9ರ ವೇಳೆಯಲ್ಲಿ ವೆಂಕಟೇಶ್‌ ಪೂಜಾರಿ ರೈಲ್ವೆ ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದರು. ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕುಟುಂಬಸ್ಥರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಸ್ನೇಹಿತರೊಂದಿಗೆ ಬೆಟ್ಟು ಕಟ್ಟಿದ್ದ ವೆಂಕಟೇಶ್‌ ಪೂಜಾರಿ ನದಿಗೆ ಹಾರಿದ ಬಳಿಕ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು ಎಂದು ಭಾವಿಸಲಾಗಿತ್ತು.

click me!