ಕೊರೋನಾದಿಂದಾಗಿ ಕಠಿಣ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಭಾರತ ವಿಶ್ವಕ್ಕೆ ಹೇಳಿಕೊಟ್ಟಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಡಾ.ಎ.ಎಸ್. ಕಿರಣ್‌ಕುಮಾರ್ ಹೇಳಿದರು.
ಮೈಸೂರು : ಕೊರೋನಾದಿಂದಾಗಿ ಕಠಿಣ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಭಾರತ ವಿಶ್ವಕ್ಕೆ ಹೇಳಿಕೊಟ್ಟಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಡಾ.ಎ.ಎಸ್. ಕಿರಣ್‌ಕುಮಾರ್ ಹೇಳಿದರು.
ನಗರದ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ವೈ.ಟಿ. ಮತ್ತು ಮಾಧುರಿ ತಾತಾಚಾರಿಯವರ ಭ್ರಮರ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
undefined
ಪ್ರಪಂಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ವೇಗವಾಗಿದೆ. ಹಾಗೆಯೇ ಇದೇ ಬೆಳವಣಿಗೆ ಜೀವನವನ್ನು ಕೂಡ ಅಸ್ತವ್ಯಸ್ಥವಾಗಿಸಿದೆ. ಕೊರೋನಾ ಇದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರು.
ಕೊರೋನಾದಿಂದಾಗಿ ನಮ್ಮ ಪ್ರಾಚೀನ ಭಾರತದ ಸಂಸ್ಕೃತಿ ಪುನರಾವಲೋಕನ ಆಯಿತು. ಕೈ ಕುಲುಕುತ್ತಿದ್ದವರು, ಈಗ ಕೈ ಮುಗಿದು ಶುಭ ಕೋರುತ್ತಿದ್ದಾರೆ. ಅಲ್ಲದೆ ಕಠಿಣ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ವಿಶ್ವಕ್ಕೆ ಭಾರತ ಹೇಳಿಕೊಟ್ಟಿದೆ. ಈ ವೇಳೆ ಭಾರತದ ಪರಂಪರೆಯನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದರು.
ಇಂತಹ ಕಠಿಣ ಪರಿಸ್ಥಿತಿಯನ್ನು ಸುಲಲಿತವಗಿ ಎದುರಿಸುವ ಸಾಮರ್ಥ್ಯವನ್ನು ನಾವು ಗಳಿಸಿಕೊಂಡಿದ್ದೇವೆ. ನಮ್ಮ ದೇಶ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸರ್ಥವಾಗಿ ಅಳವಡಿಸಿಕೊಂಡಿತು. ಕೊರೋನಾ ಬಂದ ಮೇಲೆ ದೇಶದ ಎಲ್ಲಾ ವ್ಯವಸ್ಥೆಯು ಮರುಸ್ಥಾಪನೆ ಆಗಿದೆ. ಆದರೆ ಇಡೀ ಪ್ರಪಂಚಕ್ಕೆ ಅನುಕೂಲಕರ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಅವರು ತಿಳಿಸಿದರು.
ದೇಶದ ಪ್ರಮುಖ ಬೆಳವಣಿಗೆಯಲ್ಲಿ ಕೋವ್ಯಾಕ್ಸಿನ್ ಕಂಡು ಹಿಡಿದದ್ದು ಪ್ರಮುಖವಾದದ್ದು. ವೈಯಕ್ತಿಕ ಸ್ವಾರ್ಥಕ್ಕಾಗಿ ಇಲ್ಲದೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದಿರುವ ದೇಶದ ನಮ್ಮದು. ಅಂತಹ ಮನಸ್ಥಿತಿ ಉಳ್ಳವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ ಎಂದು ಅವರು ಹೇಳಿದರು.
ಭಾರತ ಸರ್ಕಾರದ ವಿಶ್ರಾಂತ ವೈಜ್ಞಾನಿಕ ಸಲಹೆಗಾರ ಪದ್ಮಶ್ರೀ ಕೆ. ವಿಜಯರಾಘವನ್ ಮಾತನಾಡಿ, ಮನುಷ್ಯನ ಆರೋಗ್ಯ ವೃದ್ಧಿಗೆ ಔಷಧದ ಅಗತ್ಯವಿತ್ತು. ಕೋವ್ಯಾಕ್ಸಿನ್ ಜೀವ ಉಳಿಸವ ಔಷಧವಾಯಿತು ಮತ್ತು ಉತ್ತಮ ಫಲಿತಾಂಶ ಅದರಿಂದ ದೊರಕಿತು. ಔಷಧ ತಯಾರಿಕೆ ವೇಳೆ ಜನಸಂಖ್ಯೆಗೆ ಅನುಗುಣವಾಗಿ ಔಷಧ ತಯಾರಿಸುವುದು ದೊಡ್ಡ ಸವಾಲಾಗಿತ್ತು. ಔಷಧಿಯಲ್ಲಿ ಗುಣಮಟ್ಟಕಾಯ್ದುಕೊಂಡು ಕೊರೋನಾದಿಂದ ಪಾರಾಗಲು ಅನುಕೂಲವಾಯಿತು ಎಂದರು.
ವೈ.ಟಿ. ಮತ್ತು ಮಾಧುರಿ ತಾತಾಚಾರಿಯವರ ಭ್ರಮರ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋವ್ಯಾಕ್ಸಿನ್ ಕಂಡುಹಿಡಿದ ಭಾರತ್ ಬಯೋಟೆಕ್‌ಗೆ ಭ್ರಮರ ಟ್ರಸ್ಟಿನ ಜೀವಮಾನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಸ್ಥೆ ಸಹ ಸಂಸ್ಥಾಪಕ ಡಾ. ಕೃಷ್ಣ ಎಲ್ಲ ಪ್ರಶಸ್ತಿ ಸ್ವೀಕರಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜಒಡೆಯರ್, ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಪ್ರೊ.ಕೆ.ಎಸ್. ರಂಗಪ್ಪ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮ ಕುಲಾಧಿಪತಿ ಡಾ. ಸುರೇಶ್ ಭೋಜರಾಜ್, ಮಾದುರಿ ತಾತಾಚಾರಿ, ಡೆ.ಕೆ. ಸುರೇಶ್ ಮೊದಲಾದವರು ಇದ್ದರು.