ಹೆಣ್ಣುಮಕ್ಕಳಿಗೆ ರಾಜ್ಯ ಸೇಫಾ? ಹುಬ್ಬಳ್ಳಿಯ ನೇಹಾ, ಅಂಜಲಿ ಕೊಲೆ ಬಳಿಕ ಬೀದರ್‌ನಲ್ಲಿ ಭಾಗ್ಯಶ್ರೀಯ ಭೀಕರ ಮರ್ಡರ್‌!

Published : Sep 06, 2024, 12:34 PM IST
ಹೆಣ್ಣುಮಕ್ಕಳಿಗೆ ರಾಜ್ಯ ಸೇಫಾ? ಹುಬ್ಬಳ್ಳಿಯ ನೇಹಾ, ಅಂಜಲಿ ಕೊಲೆ ಬಳಿಕ ಬೀದರ್‌ನಲ್ಲಿ ಭಾಗ್ಯಶ್ರೀಯ ಭೀಕರ ಮರ್ಡರ್‌!

ಸಾರಾಂಶ

ಬೀದರ್ ಮತ್ತು ಬಸವಕಲ್ಯಾಣದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಯುವತಿಯರು ಕೊಲೆಯಾದ ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಒಂದು ಪ್ರೀತಿ ವಂಚನೆಯಿಂದ ಕೊನೆಗೊಂಡರೆ, ಮತ್ತೊಂದು ಅತ್ಯಾಚಾರ ಮತ್ತು ಕೊಲೆಯಲ್ಲಿ ಪರಿಣಮಿಸಿದೆ.

ಬೀದರ್‌ (ಸೆ.6): ಕರ್ನಾಟಕ ಹೆಣ್ಣುಮಕ್ಕಳಿಗೆ ಸೇಫಾ? ಇಂಥದ್ದೊಂದು ಪ್ರಶ್ನೆಯನ್ನು ರಾಜ್ಯದ ಹೆಣ್ಣುಮಕ್ಕಳಲು ಸರ್ಕಾರಕ್ಕೆ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್‌ಗೆ ಕೇಳುತ್ತಿದ್ದಾರೆ. ಆದರೆ, ಅವರು ಮಾತ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಡಹಗಲೇ ಹುಬ್ಬಳ್ಳಿಯಲ್ಲಿ ನೇಹಾ ಹೀರೇಮಠ ಕೊಲೆಯಾಗಿತ್ತು. ಇದರ ಬೆನ್ನಲ್ಲಿಯೇ ಅಂಜಲಿ ಅಂಬಿಗೇರ ಎನ್ನುವ ಹುಡುಗಿಯ ಕೊಲೆಯಾಗಿತ್ತು. ಈ ಎರಡೂ ಕೇಸ್‌ಗಳು ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರ ತಂದಿದ್ದವು. ಈ ಘಟನೆಯ ಬಳಿಕ ರಾಜ್ಯ ಸರ್ಕಾರ ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಬಿಗಿ ಕ್ರಮ ಕೈಗೊಳ್ಳಬಹುದು ಎನ್ನವ ನಿರೀಕ್ಷೆ ಸುಳ್ಳಾಗಿದೆ.  ಬೀದರ್‌ನಲ್ಲಿ ಪ್ರೀತಿ - ಪ್ರೇಮ ಅಂತ ಯುವಕನನ್ನು ನಂಬಿ ಹೋಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಬಸವಕಲ್ಯಾಣದಲ್ಲಿ 18 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆಗಳು ತೀವ್ರವಾಗಿದೆ.

ಮೂರು ದಿನಗಳ ನಂತರ ಶವ ಪತ್ತೆಯಾಗಿದ್ದು, ಟೋಕರಿ ಕೋಳಿ ಸಮಾಜದಿಂದ ಬೃಹತ್ ಹೋರಾಟ ಮುಂದುವರಿದಿದೆ. ಕೃತ್ಯ ಎಸಗಿದ ಪಾಪಗಳಿಗೆ ಕಠಿಣ ಶಿಕ್ಷ ವಿಧಿಸಲು ಒತ್ತಾಯಿಸಲಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಗುಣರ್ತಿರ್ಥವಾಡಿ ಗ್ರಾಮದ ಬಳಿ ಘಟನೆ ನಡೆದಿದ್ದು.  ಗುಂಡೂರ್ ಗ್ರಾಮದ ಭಾಗ್ಯಶ್ರೀ(18)  ಭೀಕರವಾಗಿ ಕೊಲೆಯಾಗಿದ್ದಾಳೆ. ಆಕೆಯನ್ನು ಕೊಲೆ ಮಾಡಿದ ಪಾಪಿಗಳು ಶವವನ್ನು ಮುಳ್ಳುಕಂಟಿಯಲ್ಲಿ ಎಸೆದು ಹೋಗಿದ್ದಾರೆ.

ಕಳೆದ  ಐದು ದಿನಗಳ ಹಿಂದೆ ರಾತ್ರಿ ವೇಳೆ ಈಕೆ ಮನೆಯಿಂದ ನಾಪತ್ತೆಯಾಗಿದ್ದಳು. ಬಳಿಕ ಮರುದಿನ  ಬೆಳಗ್ಗೆ 11ರ ಸುಮಾರಿಗೆ ಗ್ರಾಮದ ಸರ್ಕಾರಿ ಶಾಲೆ ಪಕ್ಕದ ಮುಳ್ಳಿನ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿ ಶವ ಬಹುತೇಕ ವಿವಸ್ತ್ರವಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಲೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ. ಅತ್ಯಾಚಾರ ಎಸಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರಬಹುದು ಎನ್ನುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

 

ಹುಬ್ಬಳ್ಳಿ ನೇಹಾ ಮರ್ಡರ್ ಮಾದರಿಯಲ್ಲೇ, ಅಂಜಲಿಗೂ ಚಾಕು ಚುಚ್ಚಿ ಕೊಲೆಗೈದ ಪಾಗಲ್ ಪ್ರೇಮಿ!

ಪೊಲೀಸರಿಂದ ಮುಖ್ಯ ಆರೋಪಿ ಸೇರಿದಂತೆ ಮೂವರ ಬಂಧನವಾಗದೆ. ಗುಂಡೂರ್ ಗ್ರಾಮದ ರಾಜೇಶ್ ಸೇರಿ ಮೂವರು ಆರೋಪಿಗಳ ಬಂಧನವಾಗಿದೆ. ಕೃತ್ಯ ಸಂಬಂಧ ಹೋರಾಟ ಜೋರಾಗುತ್ತಿದ್ದಂತೆ ಪಪಲೀಸ್‌ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಕೃತ್ಯ ಎಸಗಿದ ಮೂವರು ಆರೋಪಿಗಳ ಅರೆಸ್ಟ್‌ ಮಾಡಿ ತನಿಖೆ ಮುಂದುವರಿಸಿದ್ದಾರೆ. ಇನ್ನೊಂದೆಡೆ ಕೋಳಿ ಸಮಾಜದಿಂದ ಹೋರಾಟ ಕೂಡ ತೀವ್ರಗೊಂಡಿದೆ. ಬಸವಕಲ್ಯಾಣದಲ್ಲಿ ಟೋಕರಿ ಕೋಳಿ ಸಮಾಜದಿಂದ ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ನ್ಯಾಯಕ್ಕಾಗಿ ಬಿಜೆಪಿ ಪಕ್ಷದ ಮುಖಂಡರು ಹೋರಾಟ ನಡೆಸುವ ಮೂಲಕ ಭಾಗ್ಯಶ್ರೀ ಕೊಲೆ ಮಾಡಿದ ಆರೋಪಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ನೇಹಾ ಕೊಲೆ ಆರೋಪಿ ಫಯಾಜ್ ಸಿಐಡಿ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಸಿಐಡಿ

PREV
Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು