ತಮ್ಮ ಗೆಳೆಯಗೂ ಸಚಿವ ಸ್ಥಾನದ ಬೇಡಿಕೆ ಇಟ್ಟರಾ ರಮೇಶ್ ಜಾರಕಿಹೊಳಿ?

Kannadaprabha News   | Asianet News
Published : Sep 21, 2020, 06:57 AM IST
ತಮ್ಮ ಗೆಳೆಯಗೂ ಸಚಿವ ಸ್ಥಾನದ ಬೇಡಿಕೆ ಇಟ್ಟರಾ ರಮೇಶ್ ಜಾರಕಿಹೊಳಿ?

ಸಾರಾಂಶ

ಒಂದು ವೇಳೆ ತಮ್ಮ ಗೆಳೆಯ ಸಚಿವ ಸ್ಥಾನ ಪಡೆದರೆ ನನಗೆ ಸಂತೋಷದ ವಿಚಾರ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್‌ (ಸೆ.21): ಸಚಿವ ಸ್ಥಾನ ಆಕಾಂಕ್ಷಿಯಾದ ಎಲ್ಲರಿಗೂ ಸಚಿವ ಸ್ಥಾನ ಸಿಗಲಿ ಹಾಗೂ ಉಮೇಶ್‌ ಕತ್ತಿಯವರು ನನ್ನ ಹಳೆಯ ಗೆಳೆಯ. ಅವರಿಗೆ ಸಚಿವ ಸ್ಥಾನ ಸಿಕ್ಕರೆ ನಾನು ಖುಷಿಪಡುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು. 

ಬೆಳಗಾವಿ ಜಿಲ್ಲೆಯ ಗೋಕಾಕ್‌ ನಗರದ ಅಡಿಬಟ್ಟಿಕಾಲೋನಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿದ್ದು ಮಹದಾಯಿ ವಿಷಯ ಕುರಿತು ಚರ್ಚಿಸಲೆಂದು.

 ಸಚಿವನಾದ ಮೇಲೆ ಹೈಕಮಾಂಡ್‌ ನಾಯಕರ ಭೇಟಿ ಆಗಿರಲಿಲ್ಲ, ಅವರಿಗೆ ಧನ್ಯವಾದ ತಿಳಿಸಲು ಹೊಗಿದ್ದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ದೇವೇಂದ್ರ ಫಡ್ನವೀಸ್‌ ಪಾತ್ರ ಪ್ರಮುಖ. ಹೀಗಾಗಿ ದೆಹಲಿಯಿಂದ ವಾಪಾಸ್ಸಾಗುವಾಗ ಮುಂಬೈನಲ್ಲಿ ಫಡ್ನವೀಸ್‌ ಭೇಟಿ ಮಾಡಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ಸಂಪುಟ ವಿಸ್ತರಣೆ ಚರ್ಚೆಗಳು ಜೋರಾಗಿವೆ. ಇದೇ ವೇಳೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

PREV
click me!

Recommended Stories

New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ