ಟ್ರಾಫಿಕ್ ಫೈನ್‌ ಬಾಕಿ ಇದರೆ ಮನೆಗೆ ಬರ್ತಾರೆ ಪೊಲೀಸರು: ಏನಿದು ಹೊಸ ರೂಲ್ಸ್‌?

By Govindaraj SFirst Published Feb 10, 2024, 7:23 AM IST
Highlights

ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ 50 ಸಾವಿರಕ್ಕೂ ಅಧಿಕ ದಂಡ ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ಮನೆಗೆ ನಗರ ಸಂಚಾರ ಪೊಲೀಸರು ಭೇಟಿ ನೀಡಿ ಬಾಕಿ ದಂಡ ವಸೂಲಿಗೆ ಮುಂದಾಗಿದ್ದಾರೆ.

ಬೆಂಗಳೂರು (ಫೆ.10): ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ 50 ಸಾವಿರಕ್ಕೂ ಅಧಿಕ ದಂಡ ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ಮನೆಗೆ ನಗರ ಸಂಚಾರ ಪೊಲೀಸರು ಭೇಟಿ ನೀಡಿ ಬಾಕಿ ದಂಡ ವಸೂಲಿಗೆ ಮುಂದಾಗಿದ್ದಾರೆ. ನಗರದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸಿ, 50 ಸಾವಿರಕ್ಕೂ ಅಧಿಕ ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ವಾಹನಗಳ ಪಟ್ಟಿ ಮಾಡಲಾಗಿದೆ. ಸದ್ಯಕ್ಕೆ ನಗರದಲ್ಲಿ 2,681 ವಾಹನಗಳ ಮಾಲೀಕರು 50 ಸಾವಿರಕ್ಕೂ ಅಧಿಕ ದಂಡ ಬಾಕಿ ಉಳಿಸಿಕೊಂಡಿರುವುದು ಪತ್ತೆಯಾಗಿದೆ. 

ಕಳೆದ 10 ದಿನಗಳಲ್ಲಿ 120 ಮಂದಿ ವಾಹನ ಮಾಲೀಕರ ವಿಳಾಸ ಪತ್ತೆ ಹಚ್ಚಿ ಬಾಕಿ ದಂಡ ವಸೂಲಿ ಮಾಡಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದರು. ಕೆಲ ವಾಹನ ಸವಾರರು ಬೇರೆ ವ್ಯಕ್ತಿಗ ಳಿಗೆ ವಾಹನಗಳನ್ನು ಮಾರಾಟ ಮಾಡಿ ದ್ದಾರೆ. ಅಂತವರಿಗೆ ಬಾಕಿ ದಂಡ ಪಾವತಿ ಸಲು ನೋಟಿಸ್ ನೀಡಿ ಕಾಲಾವಕಾಶ ನೀಡಲಾಗಿದೆ. ನೋಟಿಸ್ ನೀಡಿಯೂ ದಂಡ ಪಾವತಿಸದಿದ್ದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗು ವುದು. ಬಳಿಕ ನ್ಯಾಯಾಲಯದಲ್ಲಿ ವಿಚಾ ರಣೆ ಎದುರಿಬೇಕಾಗುತ್ತದೆ ಎಂದು
ಹೇಳಿದರು.

ಬೊಮ್ಮಾಯಿಯದು ದೇಶ ಕಂಡ ಅತಿಭ್ರಷ್ಟ ಸರ್ಕಾರ: ಸಚಿವ ರಾಮಲಿಂಗಾರೆಡ್ಡಿ

6 ವರ್ಷದ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ: 6 ವರ್ಷದ ಮೇಲ್ಪಟ್ಟ ಮಕ್ಕಳನ್ನು ಬೈಕಲ್ಲಿ ಕರೆದೊಯ್ಯುವಾಗ ಹೆಲ್ಮೆಟ್ ಕಡ್ಡಾಯ. ಆಟೋ, ಆಮ್ನಿ ವಾಹನಗಳಲ್ಲಿ ನಿಗದಿತ ಮಿತಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಸರಿಯಲ್ಲ. ಅಂತಹ ವಾಹನಗಳ ವಿರುದ್ದವೂ ನಗರದಲ್ಲಿ ವಿಶೇಷ ಕಾರ್ಯಾಆಚರಣೆ ನಡೆಯಲಿದೆ ಎಂದು ಅನುಚೇತ್ ತಿಳಿಸಿದರು.

click me!