ಕೋಲಾರದಿಂದ ಸಿದ್ದು ಸ್ಪರ್ಧಿಸಿದರೆ ಗೆಲುವು ಖಚಿತ

By Kannadaprabha News  |  First Published Oct 30, 2022, 5:48 AM IST

ರಾಜ್ಯದ 36 ಮೀಸಲಾತಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲು ಆರ್ಹರಾಗಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿದರೆ ತಾವು ಸ್ವಾಗತಿಸುವುದಾಗಿ ಎಐಸಿಸಿ ವರ್ಕಿಂಗ್‌ ಸಮಿತಿ ಸದಸ್ಯ ಕೆ.ಎಚ್‌.ಮುನಿಯಪ್ಪ ತಿಳಿಸಿದರು.


 ಕೋಲಾರ (ಅ.30):  ರಾಜ್ಯದ 36 ಮೀಸಲಾತಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲು ಆರ್ಹರಾಗಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿದರೆ ತಾವು ಸ್ವಾಗತಿಸುವುದಾಗಿ ಎಐಸಿಸಿ ವರ್ಕಿಂಗ್‌ ಸಮಿತಿ ಸದಸ್ಯ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, Siddaramaiah) (Kolar)  ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಅಧಿಕೃತವಾಗಿ ಚರ್ಚೆಯಾಗಿಲ್ಲ. ಹಾಗಾಗಿ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಗೆಲ್ಲುವುದರಲ್ಲಿ ಎರಡನೇ ಮಾತಿಲ್ಲ ಎಂದು ಹೇಳಿದರು,

Latest Videos

undefined

ಘಟಬಂಧನ್‌ ವಿಚಾರ ಮರೆತ್ತಿದ್ದೇನೆ

ಘಟಬಂಧನ್‌ ವಿಚಾರ ನಾನು ಮರೆತಿದ್ದೇನೆ. ಕಳೆದ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಶಕುನಿಯನ್ನು ನೋಡಿಕೊಳ್ಳುವೆ ಎಂಬ ವಿಚಾರ ಬಿಟ್ಟು ಬಿಟ್ಟಿದ್ದೇನೆ. ನಾನು ಕಾಂಗ್ರೆಸ್‌ ಬಿಡುವ ಪ್ರಶ್ನೆಯೇ ಇಲ್ಲ. ನಾನು ಹೈಕಮಾಂಡ್‌ ಆದೇಶಗಳಿಗೆ ಬದ್ದನಾಗಿರುತ್ತೇನೆ. ರಮೇಶ್‌ ಕುಮಾರ್‌ ಮತ್ತು ನನಗೆ ಜಿಲ್ಲೆಯಲ್ಲಿ ಒಟ್ಟಾಗಿ ಕೆಲಸ ನಿರ್ವಹಿಸಿ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿಯುವಂತೆ ಶ್ರಮಿಸಬೇಕೆಂದು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌ ತಿಳಿಸಿದ್ದಾರೆ ಎಂದರು.

ನನಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಘಟಿಸುವ ಉನ್ನತವಾದ ಹೆಚ್ಚಿನ ಜವಾಬ್ದಾರಿಯುತ ಕೆಲಸಗಳಿಗೆ ನಿಯೋಜಿಸಲಾಗುವುದಾಗಿ ಎ.ಐ.ಸಿ.ಸಿ. ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚಿಸಿ ನನ್ನನ್ನು ವರ್ಕಿಂಗ್‌ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ನ .6ರಂದು ರಾಜ್ಯಕ್ಕೆ ಖರ್ಗೆ ಭೇಟಿ

ಮಲ್ಲಿಕಾರ್ಜುನ ಖರ್ಗೆ ನ.6 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಾಕುವ ಮೂಲಕ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಕಳೆದ 25 ವರ್ಷಗಳ ನಂತರ ನಡೆದಿದೆ. ಪ್ರಥಮವಾಗಿ ನಿಜಲಿಂಗಪ್ಪರ ಆಯ್ಕೆ ನಂತರ ಮಲ್ಲಿಕಾರ್ಜುನಖರ್ಗೆ ಬಹುಮತದಿಂದ ಎರಡನೇ ಅಧ್ಯಕ್ಷರಾಗಿದ್ದಾರೆ. ಮಲ್ಲಿಕಾರ್ಜುನ್‌ ಖರ್ಗೆ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಹೊಸ ಬೆಳವಣಿಗೆ ಕಂಡು ಬಂದಿದ್ದು, ಎಲ್ಲರೂ ಸಂಘಟಿತರಾಗಿ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದರು.

ಬಿಜೆಪಿ ಕೋಮುವಾದ ಆಡಳಿತ

ಭಾರತ್‌ ಜೋಡೋ ಯಾತ್ರೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೈ ಜೋಡಿಸುವ ಮೂಲಕ ಸಹಕಾರ ನೀಡುತ್ತಿದ್ದಾರೆ. ಶಾಂತಿ, ಸುವ್ಯವಸ್ಥೆ ಐಕ್ಯತೆ, ಏಕತೆ, ಸಾಮರಸ್ಯದ ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಮನ್ನಣೆ ನೀಡಲಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ದೇಶದಲ್ಲಿ ಆಶಾಂತಿ, ಅವ್ಯವಸ್ಥೆಗಳು, ಗಲಭೆ, ಘರ್ಷಣೆ, ಆಹಾರದ ಭದ್ರತೆ ಇಲ್ಲ. ಕೋಮು ಗಲಭೆಗಳು, ಸರ್ವಾಧಿಕಾರದ ಧೋರಣೆ, ದೌರ್ಜನ್ಯ, ನಿರುದ್ಯೋಗ ತಾಂಡವಾಡುತ್ತಿದೆ. ಸಾರ್ವಜನಿಕರು, ಅಲ್ಪಸಂಖ್ಯಾತರು, ಹಿಂದುಳಿದ ದಲಿತ ವರ್ಗಗಳಿಗೆ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ದೂರಿದರು.

ದೇಶದಲ್ಲಿ ಕಾಂಗ್ರೆಸ್‌ ತ್ಯಾಗ ಬಲಿದಾನ ಮಾಡಿ 1947ರಲ್ಲಿ ಸ್ವಾತಂತ್ರ್ಯ ತಂದು ಕೊಟ್ಟಿದೆ. ಗಾಂಧಿ, ನೆಹರು, ಅಂಬೇಡ್ಕರ್‌ ತತ್ವ ಸಿದ್ದಾಂತಗಳ ಮಾರ್ಗದರ್ಶನ ಪಾಲಿಸುವ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವ ಜಾರಿ ಮಾಡಿ ವಿಶ್ವದಲ್ಲೇ ಮಾದರಿಯಾಗಿಸಿತ್ತು, ಆದರೆ ಬಿಜೆಪಿ ಆಡಳಿತದಲ್ಲಿ ಭಾರತದಲ್ಲಿ ಇಂದು ಜಾತ್ಯತೀತ ಎಂಬುವುದು ಅರ್ಥ ಕಳೆದು ಕೊಳ್ಳುವಂತಾಗಿದೆ ಎಂದು ವಿಷಾಧಿಸಿದರು.

ನಗರಬ್ಲಾಕ್‌ ಅಧ್ಯಕ್ಷ ಪ್ರಸಾದ್‌ಬಾಬು, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ವಿ.ಬಿ.ಉದಯಶಂಕರ್‌, ಎಸ್‌.ಸಿ. ಘಟಕದ ಅಧ್ಯಕ್ಷ ಜಯದೇವ್‌, ಜಿಲ್ಲಾ ಖಜಾಂಜಿ ರಾಮಪ್ರಸಾದ್‌, ಜಿ.ಪಂ. ಮಾಜಿ ಸದಸ್ಯ ರಾಮಲಿಂಗಾರೆಡ್ಡಿ, ಕಿಸಾನ್‌ ಸೆಲ್‌ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌, ಒಬಿಸಿ ಅಧ್ಯಕ್ಷ ಮಂಜುನಾಥ್‌. ಎಸ್‌.ಟಿ.ಘಟಕದ ಅಧ್ಯಕ್ಷ ನಾಗರಾಜ್‌, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯಕ್ಬಾಲ್‌ ಆಹಮದ್‌, ಜಿಲ್ಲಾ ಉಪಾಧ್ಯಕ್ಷ ಲಾಲ್‌ ಬಹುದ್ದೂರ್‌ ಶಾಸ್ತಿ್ರ ಇದ್ದರು.

click me!