ಮಾಜಿ ನಕ್ಸಲ್‌ ಭೇಟಿ ಮಾಡಿದ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್

By Web Desk  |  First Published Nov 27, 2019, 1:00 PM IST

ಕೇಂದ್ರದ ನೀತಿಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದರೂ ಕೇಂದ್ರ ಸರಕಾರ ತಲೆ ಕೆಡಿಸಿಕೊಂಡಿಲ್ಲ| ಕೇಂದ್ರ ಈ ಬಗ್ಗೆ ತಜ್ಞರಿಂದ ವ್ಯಕ್ತವಾದ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳಬೇಕು| ನಾನು ಮೊದಲಿನಿಂದಲೂ ಗ್ರೌಂಡ ಲೆವೆಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ| ನಾನು ಯಾವುದೇ ರಾಜಕಾರಣಕ್ಕೆ ಹೋಗಲ್ಲ| ಈಗಿನ ಸರ್ಕಾರ ಹಿಂದಿನ 70 ವರ್ಷದ ಇತಿಹಾಸ ಹಾಳು ಮಾಡಿದೆ| ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಸಿಕಾಂತ ಸೆಂಥಿಲ್|


ರಾಯಚೂರು(ನ.27): ಮಾಜಿ ನಕ್ಸಲ್‌ ನರಸಿಂಹಮೂರ್ತಿ ನನ್ನ ಕ್ಲೋಜ್ ಗೆಳೆಯನಾಗಿದ್ದಾನೆ. 20 ವರ್ಷಗಳಿಂದ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಮಿಸ್ ಐಡೆಂಟಿಟಿಯಲ್ಲಿ ನರಸಿಂಹಮೂರ್ತಿ ಬಂಧನವಾಗಿದೆ. ಹೀಗಾಗಿ ಅವರನ್ನು ನೋಡಲು ರಾಯಚೂರಿಗೆ ಬಂದಿದ್ದೇನೆ ಎಂದು ಎಂದು ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಅವರು ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜನರ ಜೊತೆಗೆ ಇರುತ್ತೇನೆ, ಸರ್ಕಾರದ ಹಿಡನ್ ಅಜೆಂಡಾಗಳ ಕುರಿತು ಜನರಿಗೆ ಮಾಹಿತಿ ನೀಡುತ್ತೇನೆ. ನಾನು ಅಧಿಕಾರದಲ್ಲಿ ಇದ್ದಾಗ ಹಲವು ನಕ್ಸಲ್ ರನ್ನು ಹೊರಗೆ ತರಲು ಕೆಲಸ ಮಾಡಿದ್ದೇನೆ. ನಕ್ಸಲ್ ರು ಬಡವರ ಪರವಾಗಿ ಕೆಲಸ ಮಾಡಿರುವರಾಗಿದ್ದಾರೆ. ಇವತ್ತು ಕೂಡ ನಕ್ಸಲ್ ರು ಜನರ ಸಮಸ್ಯೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ನಕ್ಸಲ್ ರಿಗೆ ಸ್ವಂತ ಕುಟುಂಬವೂ ಇಲ್ಲ. ತಳಮಟ್ಟದಿಂದ ಕೆಲಸ ಮಾಡುವರಿಗೆ ನನ್ನ ಬೆಂಬಲ ಇರುತ್ತದೆ. ನರಸಿಂಹಮೂರ್ತಿ ಇಂದಲ್ಲ ನಾಳೆ ಹೊರಗೆ ಬರುತ್ತಾರೆ ಎಂದು ಹೇಳಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಶಿಕ್ಷಣ ನೀತಿಗಳು ಸರಿಯಿಲ್ಲ. ಈಗ ಜಾರಿಗೆ ತರಲು ಹೊರಟಿರುವ ನೀತಿಯು ಕೂಡ ಕೇಂದ್ರಿಕೃತ ಯೋಜನೆಯಾಗಿದೆ. ಸಾರ್ವಜನಿಕ ಶಿಕ್ಷಣ ನೀತಿಯಲ್ಲಿ ಅನುದಾನಕ್ಕೆ ಹೆಚ್ಚು ಒತ್ತು ನೀಡುತ್ತಿಲ್ಲ. ಸರಕಾರಗಳು ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಈಗ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಆರ್ಥಿಕ ಹಿಂಜರಿತಕ್ಕೆ ಕೇಂದ್ರ ಸರಕಾರದಿಂದ ಯಾವುದೇ ಕ್ರಮವಿಲ್ಲ 

ಬುಧವಾರ ನಗರದಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ನೀತಿಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದರೂ ಕೇಂದ್ರ ಸರಕಾರ ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ ಈ ಬಗ್ಗೆ ತಜ್ಞರಿಂದ ವ್ಯಕ್ತವಾದ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳಬೇಕು. ನಾನು ಮೊದಲಿನಿಂದಲೂ ಗ್ರೌಂಡ ಲೆವೆಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಯಾವುದೇ ರಾಜಕಾರಣಕ್ಕೆ ಹೋಗಲ್ಲ. ಈಗಿನ ಸರ್ಕಾರ ಹಿಂದಿನ 70 ವರ್ಷದ ಇತಿಹಾಸ ಹಾಳು ಮಾಡಿದೆ, ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ನಾನು ಅಧಿಕಾರಿಯಾಗಿ ಸರಕಾರದ ಕಾನೂನು ವಿರೋಧಿಸುವುದು ತಪ್ಪಾಗುತ್ತಿತ್ತು, ಹೀಗಾಗಿ ನಾನು ಅಧಿಕಾರದಿಂದ ಹೊರ ಬಂದಿದ್ದೇನೆ. ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡುತ್ತಿದ್ದಾರೆ. ಆರ್ ಬಿಐ ಸೇರಿದಂತೆ ಇತರೆ ಸಂಸ್ಥೆಗಳ ಪರಿಸ್ಥಿತಿ ನೋಡಿ ಹೇಗಾಗಿದೆ ಅಂತ, ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಿಲ್ಲ. ಮೂರು ಸರಕಾರಗಳ ಕೆಳಗೆ ಕೆಲಸ ಮಾಡಿದ್ದೇನೆ. ನಾನು ದೇಶದಲ್ಲಿ ಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಹೊರಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. 

ರಾಜೀನಾಮೆ ಅಂಗೀಕರಿಸುವುದು ಅದು ಸರಕಾರದ ನಿರ್ಧಾರವಾಗಿದೆ. ನಾನು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದ್ದೇನೆ. ರಾಜೀನಾಮೆ ವಾಪಸ್ಸು ತೆಗೆದುಕೊಳ್ಳುವ ಕುರಿತ ಯಾವುದೇ ಮಾತುಕತೆಯಾಗಿಲ್ಲ ಎಂದು ಹೇಳಿದ್ದಾರೆ. 
 

click me!