ಶಿಗ್ಗಾವಿ ಜನರು ದೈವಭಕ್ತರು, ಸಜ್ಜನರು: ಸಿಎಂ ಬಸವರಾಜ ಬೊಮ್ಮಾಯಿ

By Ravi Janekal  |  First Published Feb 27, 2023, 11:07 PM IST

ಶಿಗ್ಗಾವಿಗೆ ಮುಂದಿನ ದಿನಗಳಲ್ಲಿ ಭವ್ಯ ಭವಿಷ್ಯವಿದೆ, ದೇವಿ ಸಾಕ್ಷಿಯಾಗಿ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ತವರು ಕ್ಷೇತ್ರವಾದ ಶಿಗ್ಗಾಂವಿಯ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.


ಶಿಗ್ಗಾವಿ (ಫೆ.27) : ಶಿಗ್ಗಾವಿಗೆ ಮುಂದಿನ ದಿನಗಳಲ್ಲಿ ಭವ್ಯ ಭವಿಷ್ಯವಿದೆ, ದೇವಿ ಸಾಕ್ಷಿಯಾಗಿ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ತವರು ಕ್ಷೇತ್ರವಾದ ಶಿಗ್ಗಾಂವಿಯ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ(Sri Dyamavva Devi Jatra Mahotsava)ದಲ್ಲಿ ಪಾಲ್ಗೊಂಡು ಮಾತನಾಡಿದರು.

Latest Videos

undefined

ಈ ಭಾಗದ ಜನರು ದೈವಿಭಕ್ತರುಮ ಪ್ರಾಮಾಣಿಕರು. ಸಜ್ಜನರ ಸಮೂಹ ಎಲ್ಲಾದರು ಇದ್ರೆ ಅದು ಶಿಗ್ಗಾವಿಯಲ್ಲಿ. ಭಕ್ತಿ ಭಾವದಿಂದ ಹಿಂದಿನಿಂದಲೂ ಶ್ರೀ ದ್ಯಾಮವ್ವನ ಜಾತ್ರೆ ಆಚರಣೆ ಮಾಡಿಕೊಂಡು ಬಂದಿದ್ದಿರಿ. ನಾನು ನಿತ್ಯ ಪೂಜೆಯಲ್ಲಿ ತಾಯಿ ದ್ಯಾಮವ್ವದೇವಿ ಯನ್ನ ನೆನೆಸುತ್ತೇನೆ. ದ್ಯಾಮವ್ವ ಗಂಭಿರ ಸ್ವರೂಪ ಇರುವ ದೇವಿ. ಶಿಗ್ಗಾವಿ ದ್ಯಾಮವ್ವ ಪ್ರಸನ್ನ ಸ್ವರೂಪಿ. ದೇವಿಯನ್ನ ಆರಾಧಿಸುವವರಿಗೆ ಆಶೀರ್ವಾದ ಮಾಡ್ತಾಳೆ. ನನಗೆ ನೀವೆಲ್ಲರೂ ಆ ದೇವತೆಯ ಸ್ವರೂಪ ಎಂದರು. ನಿಮ್ಮ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ. ಜೀವನದ ಕೊನೆ ಉಸಿರು ಇರುವವರೆಗೆ ನಿಮ್ಮ ಸೇವೆ ಮಾಡುತ್ತೇನೆ ಮಹಿಳಾ ಸಮಾವೇಶದದಲ್ಲಿ ನಾವು ಬಂದಿರುವುದು ಶಿವಪೂಜೆಯಲ್ಲಿ ಕರಡಿ ಬಿಟ್ಟಂಗಾಗಿದೆ ಎಂದರು. 

ನಮ್ಮದು ಜನಪರ ಬಜೆಟ್‌: ಸಿಎಂ ಬೊಮ್ಮಾಯಿ

94 ಕೋಟಿ ರೂ. ಬೆಳೆವಿಮೆ ಶಿಗ್ಗಾವಿ ಸವಣೂರು ಭಾಗದ ರೈತರಿಗೆ ಇವತ್ತು ಬಿಡುಗಡೆಯಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆವಿಮೆ ಬಂದಿದ್ದು ಇದೆ ಮೊದಲು. ಶಿಗ್ಗಾವಿ ಮಹಿಳೆಯರು ನನಗೆ ಆಶೀರ್ವಾದ ಮಾಡಿದ್ದರಿಂದ ಸಾಧ್ಯವಾಗಿದೆ ಮುಖ್ಯಮಂತ್ರಿಯಾಗಿ ನಿಮ್ಮ ಮತಕ್ಕೆ ಗೌರವ ತಂದಿದ್ದೇನೆ, ಚ್ಯುತಿ ತರುವ ಕೇಲಸ ಮಾಡಿಲ್ಲ. ಮುಂದಿನ ದಿನಗಳಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ಇದರ ಎರಡು ಪಟ್ಟು ಅಭಿವೃದ್ಧಿ ಮಾಡುತ್ತೇನೆ ದೇವಿಯ ಸಮಕ್ಷಮದಲ್ಲಿ ಹೇಳುತ್ತೇನೆ ಎಂದು ಭರವಸೆ ನೀಡಿದರು.

ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದೇನೆ. ರಾಜ್ಯದಲ್ಲಿ 3 ಲಕ್ಷ ಮಹಿಳೆಯರಿಗೆ ಉದ್ಯೋಗ ಕೊಡುವ 500 ಕೋಟಿ ಯೋಜನೆ ಮಾಡಿದ್ದೇವೆ. ಶಾಲಾ ಮಕ್ಕಳಿಗೆ ಪ್ರೀ ಬಸ್ ಪಾಸ್ ಕೊಡುವ ಯೋಜನೆ ಮಾಡಿದ್ದೇವೆ ರಾಜ್ಯದ ಮಹಿಳೆಯರಿಗೆ ಅನುಕೂಲ ಮಾಡುವ ಕೆಲಸ ಮಾಡಿದ್ದೇನೆ ಎಂದು ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತು ತಿಳಿಸಿದರು.

ಸುಳ್ಳಿನ ಸುಳಿಯಲ್ಲಿ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ ಲೇವಡಿ

ಮುಂದಿನ ಮೂರು ವರ್ಷದಲ್ಲಿ ಭಾರತ ಟಾಪ್-3 ದೇಶಗಳಲ್ಲಿ ಒಂದಾಗಲಿದೆ: ಪ್ರಲ್ಹಾದ್ ಜೋಶಿ 

ಚರಾಚರ ವಸ್ತುವಿನಲ್ಲಿ ದೇವಿಯನ್ನು ಕಾಣುವಂತಹದ್ದು ಭಾರತೀಯ ಸಂಸ್ಕೃತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. 

ನಾವು ಬ್ರಿಟಿಷ್‌ ಶಿಕ್ಷಣ ಪಡೆದು ಅಕ್ಷರಾಭ್ಯಾಸ ಕಲಿತಿದ್ದೇವೆ. ಆದರೆ, ಸುಸಂಸ್ಕೃತರಾಗಲಿಲ್ಲ. ಶಾಲಾ-ಕಾಲೇಜುಗಳಲ್ಲಿ ಸಂಸ್ಕಾರ ಸಿಗುತ್ತಿಲ್ಲ. ಬದಲಾಗಿ ಸೈಡ್ ಎಫೆಕ್ಟ್ ಆಗಿದೆ. ಮನೆಯಲ್ಲಿ ತಾಯಂದಿರು, ಹೊರಗಡೆ ಜಾತ್ರೆ ಆಚರಣೆಗಳಿಂದ ಸಂಸ್ಕಾರ ಸಿಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಎಸ್‌. ನಿಜಲಿಂಗಪ್ಪನವರ ನಂತರ ದೊಡ್ಡ ನಾಯಕರಾಗಿ ಸಿಎಂ ಬಸವರಾಜ ಬೊಮ್ಮಾಯಿ ಬೆಳೆಯುತ್ತಿದ್ದಾರೆ. ನಿಮ್ಮ ಬೆಂಬಲದಿಂದಾಗಿ ಇಂದು  ಶಿಗ್ಗಾವಿಗೆ ಅಭಿವೃದ್ಧಿ ಕಾಮಗಾರಿಳು ಸಾಕಷ್ಟು ಆಗಿವೆ. ಮುಂದಿನ ದಿನಗಳಲ್ಲಿ ಎಲ್ಲ ವಲಯದಲ್ಲೂ ಅಭಿವೃದ್ಧಿಯಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತದ ಟಾಪ್ ತ್ರೀ ದೇಶಗಳಲ್ಲಿ ಒಂದಾಗಲಿದೆ ಎಂದರು

click me!