ಜನರ ಸೇವೆ ಮೂಲಕ ತಂದೆ ಹೆಸರು ಉಳಿಸಿಕೊಳ್ಳುತ್ತೇನೆ ಎಂದು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ಮೈಸೂರು : ಜನರ ಸೇವೆ ಮೂಲಕ ತಂದೆ ಹೆಸರು ಉಳಿಸಿಕೊಳ್ಳುತ್ತೇನೆ ಎಂದು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಶುಕ್ರವಾರ ದಲಿತ ವೇದಿಕೆ ಆಂಯೋಜಿಸಿದ್ದ ವåಾಜಿ ಸಂಸದ ಆರ್.ಧ್ರುವನಾರಾಯಣ ಅವರ ನುಡಿ ನಮನ ಕಾಂåÜುರ್‍ಕ್ರಮದಲ್ಲಿ ಅವರು ವåಾತನಾಡಿದರು.
undefined
ಬುದ್ಧ, ಬಸವ, ಅಂಬೇಡ್ಕರ್ ತತ್ವಸಿದ್ಧಾಂತ ಅಳವಡಿಸಿಕೊಂಡು, ಜನರ ಸೇವೆ ಮಾಡುತ್ತೇನೆ. ನಾಯಕರು ಹಾಗೂ ತಾವು ಹಾಕಿಕೊಟ್ಟಮಾರ್ಗದಲ್ಲಿ ಮುನ್ನಡೆಯುತ್ತೇನೆ. ತಂದೆಯ ಅಕಾಲಿಕ ನಿಧನದಿಂದ ನೋವು ಅನುಭವಿಸಿದ್ದೇನೆ. ರಾಜ್ಯಾದ್ಯಂತ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ಸಾಂತ್ವನ ಹೇಳಿ ನಮಗೆ ಶಕ್ತಿ ತುಂಬಿದ್ದಾರೆ. ಎಲ್ಲರಿಗೂ ನಾವು ಅಭಾರಿಯಾಗಿರುವೆ ಎಂದರು.
ವåಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಆರ್. ಧ್ರುವನಾರಯಣ ಐದು ವರ್ಷಗಳ ಕಾಲ ಶಾಸಕರಾಗಿ, ಸಂಸದರಾಗಿ 10 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಕಾರಣ ಚಾಮರಾಜನಗರ ಜಿಲ್ಲೆಯ ಚಿತ್ರಣ ಬದಲಾಗಿದೆ. ನಮ್ಮ ಸಮುದಾಯದಲ್ಲಿ ಆರ್. ಧ್ರುವನಾರಾಯಣ ದೊಡ್ಡ ನಾಯಕರಾಗುವ ಎಲ್ಲಾ ಭರವಸೆ ಮೂಡಿಸಿದ್ದರು.ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಕೆಲಸ ವåಾಡಿದರು. ಎರಡು ಬಾರಿ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದರು. ಗೆದ್ದ ಕ್ಷೇತ್ರ ಯಾವ ರೀತಿ ಅಭಿವೃದ್ಧಿ ವåಾಡಬೇಕು.ಯಾವುದೇ ಧರ್ಮ, ಜಾತಿಗಳಿಗೂ ಅನ್ಗಯಾವಾಗಬಾರದು ಎಂದು ನೋಡಿಕೊಂಡಿದ್ದಾಗಿ ತಿಳಿಸಿದರು.
ಧ್ರುವನಾರಾಯಣ್ ಅವರು ಕೇವಲ ರಾಜಕಾರಣಿಯಾಗದೇ, ಜವಾಬ್ದಾರಿಯುತ ನಾಯಕರಾಗಿದ್ದರು. ಸವåಾಜ ಸೇವೆಯೊಂದಿಗೆ ಪ್ರಾಮಾಣಿಕತೆ, ಹೃದಯವಂತಿಕೆ ಅವರಿಗೆ ಇತ್ತು. ಭ್ರಷ್ಟಾಚಾರ ರಹಿತರಾಗಿ ಜನ ಸೇವೆ ಮಾಡಿದರು. ಎರಡು ಬಾರಿ ಸೋಲು, ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಸೋತ ಬಳಿಕವೇ ಬಹಳಷ್ಟುಎತ್ತರಕ್ಕೆ ಬೆಳೆದರು. ಅವರ ಪುತ್ರ ದರ್ಶನ್‌ಗೆ ನಾವೆಲ್ಲರೂ ಪ್ರಾವåಾಣಿಕವಾಗಿ ಬೆಂಬಲ ನೀಡಬೇಕು ಎಂದು ಅವರು ಮನವಿ ವåಾಡಿದರು.
ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಮುಖಂಡರಾದ ಚಿಕ್ಕ ಜವರಪ್ಪ, ಡಾ. ಕೃಷ್ಣಮೂರ್ತಿ ಚಮರಂ, ಅಮ್ಮ ರಾಮಚಂದ್ರ, ಸೋಮು ಹಿನಕಲ್ ಮೊದಲಾದವರು ಇದ್ದರು
ದರ್ಶನ್ ಬೆಳೆಸಲು ಸಹಕಾರ
ಎಚ್.ಡಿ. ಕೋಟೆ : ದಿ. ಆರ್. ಧ್ರುವನಾರಾಯಣ್ ಅವರು ಪಕ್ಷದ ಸಿದ್ದಾಂತ ಒಪ್ಪಿ ವಿದ್ಯಾರ್ಥಿ ದೆಸೆಯಿಂದಲೂ ಪಕ್ಷದ ಚಟುವಟಿಕೆಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಿದ್ದರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ… ಅವರ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ಭಾಗದಲ್ಲಿ ಎಚ್.ಎಸ್. ಮಹದೇವ ಪ್ರಸಾದ್ ನಂತರ ಆರ್. ಧ್ರುವನಾರಾಯಣ… ಪಕ್ಷ ಬೆಳಸಿದರು. ಇದರಿಂದ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಿತ್ತು. ಅವರ ನಿಧನದಿಂದ ದೊಡ್ಡ ಶಕ್ತಿ ಕಡಿಮೆ ಆಗಿದೆ. ಧ್ರುವನಾರಾಯಣ…ಗೆ ಅವರ ಜಾಗ ತುಂಬಲು ಅವರ ಮಗನಿಗೆ ಎಲ್ಲ ಸಹಕಾರ ನೀಡಿ ಪ್ರಯತ್ನ ಮಾಡುತ್ತೇವೆ ಎಂದರು.
ಅವರಲ್ಲಿ ದೂರ ದೃಷ್ಟಿ, ಬಡವರ ಬಗ್ಗೆ ಕಾಳಜಿ, ಜಾತ್ಯತೀತವಾಗಿ ಎಲ್ಲ ವರ್ಗದವರನ್ನು ಜೊತೆಯಾಗಿ ತೆಗೆದುಕೊಂಡು ಹೋಗುತ್ತಿದ್ದರು. ಎಚ್.ಡಿ. ಕೋಟೆ ಅವರಿಗೆ ಹೆಚ್ಚು ಇಷ್ಟ, ಅನಿಲ… ಕಂಡರೆ ಪ್ರೀತಿ ಜಾಸ್ತಿ, ಅನಿಲ…ಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದರು. ಅನಿಲ… ಚಿಕ್ಕಮಾದು ಪ್ರತಿಪಕ್ಷದ ಶಾಸಕರಾಗಿದ್ದರು ಸಹ ತಾಲೂಕಿನಲ್ಲಿ ಜನಪರ ಕೆಲಸಗಳನ್ನ ಮಾಡಿದ್ದಾರೆ, ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಅನಿಲ… ಈ ತಾಲೂಕಿನ ಶಾಸಕರಾಗಿದ್ದರೆ, ತಾಲೂಕಿನ ಅಭಿವೃದ್ಧಿಗಾಗಿ ಅವರು ಬೇಡಿಕೆ ಇಟ್ಟಹಣವನ್ನು ಸಂಪೂರ್ಣ ಮಂಜೂರು ಮಾಡಿಕೊಡಲಾಗುತ್ತಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ, ತಾಲೂಕಿನ ಜನತೆ ಈ ಬಾರಿಯೂ ಸಹ ಅನಿಲ… ಚಿಕ್ಕಮಾದು ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವುದರಿಂದ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ನಮ್ಮ ತಂದೆಯಂತೆ ನನ್ನ ಮೇಲೂ ನಂಬಿಕೆಯಿಡಿ ಉಳಿಸಿಕೊಳ್ಳುತ್ತೇನೆ: ದರ್ಶನ್ ಧ್ರುವನಾರಾಯಣ
ಧ್ರುವನಾರಾಯಣ… ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಾಣಿಸಿಕೊಂಡಂತಹ ವ್ಯಕ್ತಿಯಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಅವರಿಗೆ ಕೆಲಸ ಇಲ್ಲದ ದಿನವೇ ಇರಲಿಲ್ಲ. ಅದು ಕಳೆದ ಚುನಾವಣೆಯಲ್ಲಿ ಅನಿಲ… ಸೂಚಿಸಿದ ವ್ಯಕ್ತಿ ಅವರೆ, ಮುಂದೆ ಶಾಸಕರಾಗಿ ಆಯ್ಕೆ ಆಗುವ ಕನಸು ಇತ್ತು. ದರ್ಶನ್ ದುಃಖದಲ್ಲಿ ಇದ್ದರು ಚುನಾವಣೆಗೆ ನಿಲ್ಲಲು ನಾನೇ ಹೇಳಿದ್ದೇನೆ. ಧ್ರುವನಾರಾಯಣ… ಆಸೆ ಏನು ಇತ್ತು ಅದನ್ನು ನಾವು ಈಡೇರಿಸುವ ಕನಸು ನನಸು ಮಾಡಬೇಕು. ಹುಟ್ಟು ಸಾವು ನಡುವೆ ಜೀವನ ಸಾರ್ಥಕ ಗೊಳಿಸುವ ಕೆಲಸ ಮಾಡಬೇಕು. ಸಮಾಜ ಮುಖಿಯಾಗಿ ಕೆಲಸ ಮಾಡಬೇಕು, ರಾಜಕಾರಣದಲ್ಲಿ ಈ ರೀತಿ ವ್ಯಕ್ತಿ ಸರಳ, ಅಪರೂಪದ ರಾಜಕಾರಣಿ, ರಾಜಕೀಯ ಇತಿಹಾಸದಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಪ್ರತಿದಿನ ಮಾಡುತ್ತಿದ್ದರು. ಕೊಟ್ಟಜವಬ್ದಾರಿಯನ್ನು ಕೆಲಸ ಮಾಡುತ್ತಿದ್ದರು. ನಿತ್ಯ ಪ್ರವಾಸ ದಲ್ಲಿ ಇರುತ್ತಿದ್ದರು. ನನ್ನ ಜೊತೆ ಯಾವಾಗಲು ನಿಕಟವಾದ ಸಂಪರ್ಕ ಹೊಂದಿದ್ದರು. ಮನೆ ಕೆಲಸ ಬದಿಗಿಟ್ಟು ಪಕ್ಷದ ಮತ್ತು ಜನರ ಕೆಲಸ ದೇವರ ಕೆಲಸ ಎಂದು ಮಾಡುತ್ತಿದ್ದರು. ಸಮಾಜಕ್ಕೆ, ಕಾಂಗ್ರೆಸ್‌ಗೆ ಅವರ ಸಾವಿನಿಂದ ನಷ್ಟಆಗಿದೆ ಎಂದು ಅವರು ಹೇಳಿದರು.