ನಂಗಿನ್ನೂ ವಯಸ್ಸಾಗಿಲ್ಲ; ಹಾಸನ ನಂ.1 ಮಾಡೇ ಮಾಡ್ತೀನಿ: ರೇವಣ್ಣ

By Kannadaprabha NewsFirst Published Aug 30, 2019, 3:06 PM IST
Highlights

ನನಗೆ ವಯಸ್ಸಾಗಿಲ್ಲ. ಇಂದಲ್ಲ, ನಾಳೆ ಹಾಸನ ಜಿಲ್ಲೆಯನ್ನು ನಂ.1 ಮಾಡಿಯೇ ತೀರುತ್ತೇನೆ ಎಂದು ಮಾಜಿ ಸಚಿವ ಎಚ್‌. ಡಿ. ರೇವಣ್ಣ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೆರೆ ಪರಿಹಾರ ಸಿಗಲು ಎನ್‌ಡಿಆರ್‌ಎಫ್‌ ನಿಯಮ ಸಡಿಲಗೊಳಿಸಲು ರಾಜ್ಯ ಸರ್ಕಾರ, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು.

ಹಾಸನ(ಆ.30): ಜಿಲ್ಲೆಗೆ ಮಾಡಿರುವ ಕೆಲಸದ ಬಗ್ಗೆ ಬೆಟ್ಟದಷ್ಟುಹೇಳಬಲ್ಲೇ. ಕೆಲವರು ರಾಜಕೀಯ ದುರುದ್ದೇಶದಿಂದ ನಾನು ಹಾಸನಕ್ಕೆ ಮಾತ್ರ ಸೀಮಿತವಾಗಿದ್ದೇನೆ ಎಂದು ಅಪಪ್ರಚಾರ ಮಾಡುತ್ತಾರೆ. ಆದರೆ, ನಾನು ಕೇವಲ ಹಾಸನಕ್ಕೆ ಮಾತ್ರ. ಇನ್ನೂ ನನಗೆ ವಯಸ್ಸಾಗಿಲ್ಲ. ಇಂದಲ್ಲ, ನಾಳೆ ಹಾಸನ ಜಿಲ್ಲೆಯನ್ನು ನಂ.1 ಮಾಡಿಯೇ ತೀರುತ್ತೇನೆ ಎಂದು ಮಾಜಿ ಸಚಿವ ಎಚ್‌. ಡಿ. ರೇವಣ್ಣ ಶಪಥ ಮಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಮಳೆ, ಪ್ರವಾಹದಿಂದ ಬೆಳೆ ಸೇರಿದಂತೆ .594 ಕೋಟಿ ಅಷ್ಟುಆಸ್ತಿಪಾಸ್ತಿ ನಷ್ಟವಾಗಿದೆ. ಆದರೆ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಪ್ರಕಾರ 9 ಕೋಟಿ ಮಾತ್ರ ಸಿಗುತ್ತದೆ. ಆದ್ದರಿಂದ ಕೂಡಲೇ NDRF ನಿಯಮ ಸಡಿಲಗೊಳಿಸಲು ರಾಜ್ಯ ಸರ್ಕಾರ, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಆಗ್ರಹಿಸಿದರು.

ರಾಜ್ಯ ಸರ್ಕಾರ ಹಾನಿಯಾಗಿರುವ ಬಗ್ಗೆ ವಸ್ತುನಿಷ್ಠ ವರದಿ ತರಿಸಿಕೊಂಡು ಪರಿಹಾರ ನೀಡಬೇಕು. NDRFನಿಂದ ಅಗತ್ಯದಷ್ಟುಪರಿಹಾರ ನೀಡದಿದ್ದರೇ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೇರವಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ನಾನು, ಸಿದ್ದು ಬೇರೆಯಲ್ಲ - ನಾವಿಬ್ಬರೂ ಒಂದೇ: ರೇವಣ್ಣ

ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟುಮನೆಗಳು, ಆಸ್ತಿಪಾಸ್ತಿ, ಕೃಷಿ, ತೋಟಗಾರಿಕೆ, ರಸ್ತೆ, ಶಾಲಾ ಮತ್ತು ಅಂಗನವಾಡಿ ಕಟ್ಟಡಗಳಿಗೆ ಹಾನಿ ಉಂಟಾಗಿದ್ದು, ತಕ್ಷಣವೇ ಹೆಚ್ಚಿನ ಪರಿಹಾರವನ್ನು ಬಿಡುಗಡೆ ಮಾಡಬೇಕಿದೆ ಎಂದರು. ಈ ವೇಳೆ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಎಂಎಲ್‌ಸಿ ಪಟೇಲ್‌ ಶಿವರಾಂ ಹಾಜರಿದ್ದರು.

click me!