ಸಾರಾ ಮಹೇಶ್‌ಗಿರುವಷ್ಟು ಬುದ್ಧಿ ನನಗಿಲ್ಲ: ಜಿಟಿಡಿ

Kannadaprabha News   | Asianet News
Published : May 22, 2020, 02:33 PM IST
ಸಾರಾ ಮಹೇಶ್‌ಗಿರುವಷ್ಟು ಬುದ್ಧಿ ನನಗಿಲ್ಲ: ಜಿಟಿಡಿ

ಸಾರಾಂಶ

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮೈಮುಲ್‌) ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಾ.ರಾ. ಮಹೇಶ್‌ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಜಿ.ಟಿ. ದೇವೇಗೌಡರು, ಅವನಿಗೆ ಎಲ್ಲ ಗೊತ್ತು. ಅವನಿಗಿರುವಷ್ಟುಬುದ್ದಿವಂತಿಕೆ ನನಗೆ ಇಲ್ಲ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು.

ಮೈಸೂರು(ಮೇ 22): ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮೈಮುಲ್‌) ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಾ.ರಾ. ಮಹೇಶ್‌ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಜಿ.ಟಿ. ದೇವೇಗೌಡರು, ಅವನಿಗೆ ಎಲ್ಲ ಗೊತ್ತು. ಅವನಿಗಿರುವಷ್ಟುಬುದ್ದಿವಂತಿಕೆ ನನಗೆ ಇಲ್ಲ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು.

ಗ್ರಾಪಂ, ತಾಪಂ, ಜಿಪಂ ಸದಸ್ಯರಿಗೆ ಅವರವರ ಕೆಲಸ ಮಾಡುವುದಕ್ಕೆ ನಾನು ಬಿಡುತ್ತೇನೆ. ಆದರೆ ನಾನೇ ಎಲ್ಲವನ್ನೂ ಮಾಡಬೇಕು ಎನ್ನುವುದು ಸಾ.ರಾ. ಮಹೇಶ್‌ ಬುದ್ಧಿ. ಅವನಿಗೆ ಗೊತ್ತು ಎಲ್ಲಿ ಏನಾಗಿದೆ ಎಂದು ತಿಳಿದಿದೆ. ಸಾ.ರಾ. ಮಹೇಶ್‌ ಏನು ಕೆಲಸ ಮಾಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತು. ಮೈಮುಲ್, ಡಿಸಿಸಿ ಬ್ಯಾಂಕ್‌ ಮುಂತಾದವು ಸ್ವಾಯತ್ತ ಸಂಸ್ಥೆಗಳು. ಅದನ್ನು ನಿರ್ವಹಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಕಿವಿಮಾತು ಹೇಳಿದರು.

ಕಾವೇರಿ ನದಿ ಬಳಿ ಕಾಮಗಾರಿ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ

ಎಲ್ಲವನ್ನೂ ನಾನೇಕೆ ಮಾಡಲಿ. ನನಗ ಮಾಡೋದಕ್ಕೆ ಬೇರೆ ಕೆಲಸ ಇಲ್ವಾ..? ಎಲ್ಲ ವಿಚಾರದಲ್ಲೂ ಮೂಗು ತೂರಿಸುವುದಕ್ಕೆ ನಾನು ಸಾ.ರಾ. ಮಹೇಶ್‌ ಅಲ್ಲ ಎಂದು ಟೀಕಿಸಿದರು.

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!