ಯಡಿಯೂರಪ್ಪನೇ ಏನು ಮಾಡೋಕಾಗಲಿಲ್ಲ, ಮಗ ವಿಜಯೇಂದ್ರ ಏನು ಮಾಡ್ತಾನೆ?: ಕಾಶಪ್ಪನವರ ಕಿಡಿ

Published : Nov 23, 2023, 09:00 AM IST
ಯಡಿಯೂರಪ್ಪನೇ ಏನು ಮಾಡೋಕಾಗಲಿಲ್ಲ, ಮಗ ವಿಜಯೇಂದ್ರ ಏನು ಮಾಡ್ತಾನೆ?: ಕಾಶಪ್ಪನವರ ಕಿಡಿ

ಸಾರಾಂಶ

ಅವ್ರಪ್ಪ ಯಡಿಯೂರಪ್ಪ ಇದ್ದಾಗಲೇ ಏನೂ ಆಗಲಿಲ್ಲ, ಮಗ ವಿಜಯೇಂದ್ರ ಏನು ಮಾಡ್ತಾನೆ?. ನಾನು ವಿಜಯೇಂದ್ರನ ಇತಿಹಾಸ ಬರೆಯುತ್ತೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅರ್ಹನೇ ಅಲ್ಲ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ 

ಬಾಗಲಕೋಟೆ(ನ.23):  ಅವ್ರಪ್ಪ ಯಡಿಯೂರಪ್ಪನೇ ಏನು ಮಾಡೋಕಾಗಲಿಲ್ಲ, ಮಗ ವಿಜಯೇಂದ್ರ ಏನು ಮಾಡ್ತಾನೆ? ಅಂತ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ. 

ಲಿಂಗಾಯತ ಮತ ಸೆಳೆಯಲು ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದಾರಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ, ಅವ್ರಪ್ಪ ಯಡಿಯೂರಪ್ಪ ಇದ್ದಾಗಲೇ ಏನೂ ಆಗಲಿಲ್ಲ, ಮಗ ವಿಜಯೇಂದ್ರ ಏನು ಮಾಡ್ತಾನೆ?. ನಾನು ವಿಜಯೇಂದ್ರನ ಇತಿಹಾಸ ಬರೆಯುತ್ತೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅರ್ಹನೇ ಅಲ್ಲ ಅಂತ ಕಿಡಿಕಾರಿದ್ದಾರೆ. 

ಸದಾಶಿವ ಆಯೋಗದ ವರದಿ ಜಾರಿ ಮಾಡೇ ಮಾಡ್ತೀವಿ: ಸಚಿವ ಪರಮೇಶ್ವರ್ ಅಭಯ

ಲಿಂಗಾಯತರು ಯಾರಿಗೆ ವೋಟ್ ಹಾಕಿದ್ರು ಈ ಸಾರಿ?. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 135 ಸೀಟ್ ಬರೋಕೆ ಕಾರಣ ಯಾರು?. ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಲಿಂಗಾಯತರು ಇರುವ ಮತಕ್ಷೇತ್ರಗಳಿವೆ. ಲಿಂಗಾಯತರು ಸಂಪೂರ್ಣವಾಗಿ ನಮ್ಮ ಪಕ್ಷಕ್ಕೆ ಬೆಂಬಲ ಮಾಡಿದ್ದಾರೆ. ಯಾಕಂದ್ರೆ ಬಿಜೆಪಿ ಪಕ್ಷದಿಂದ ಬೇಸತ್ತಿದ್ದಾರೆ. ಅವರ ಮುಖ ನೋಡಿ ಏನ್ಮಾಡ್ತಾರೆ. ಈಗಾಗಲೇ ಅವರ ಹಣೆಬರಹ ಹಿಂದಿನ ಸರ್ಕಾರದಲ್ಲಿ ಬರೆದಿದ್ದಾರೆ. ಈ ಸರ್ಕಾರದಲ್ಲಿ ಏನೂ ಬರೆಯುವುದು ಉಳಿದಿದೆ. ಅವನಿಂದ ಏನೂ ಆಗಲ್ಲ ಅಂತ ವಿಜಯೇಂದ್ರನ ವಿರುದ್ಧ ಕಾಶಪ್ಪನವರ ವಾಗ್ದಾಳಿ ನಡೆಸಿದ್ದಾರೆ.  

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ