ರಸ್ತೆಯಲ್ಲಿ ಕಸ ಎಸೆದ್ರೆ ಹುಷಾರ್, ಕ್ಲಿನ್ ನಿಮ್ಮ ಕೈಯಲ್ಲೇ ಮಾಡಿಸ್ತಾರೆ ಹು-ಧಾ ಪಾಲಿಕೆ

By Suvarna NewsFirst Published Nov 17, 2022, 10:34 PM IST
Highlights

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ 47ರ ವ್ಯಾಪ್ತಿಯ ಪಾನ್ ಶಾಪ್ ಅಂಗಡಿಯವರು ರಸ್ತೆಬದಿಯಲ್ಲಿ ಕಸ ಚೆಲ್ಲುವ ಮೂಲಕ ಅವ್ಯವಸ್ಥೆ ಹುಟ್ಟು ಹಾಕಿದ್ದರು. ಅವ್ಯವಸ್ಥೆ ಅರಿತ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಸವನ್ನು  ಅಂಗಡಿ ಮಾಲಕರಿಂದಲೇ ಸ್ವಚ್ಚಗೊಳಿಸುವ ಮೂಲಕ ಮತ್ತೆ ಕಸ ಎಸೆಯದಂತೆ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ (ನ.17): ನೋಡ್ರಪ್ಪೋ ನೋಡ್ರಿ ಇನ್ನುಮುಂದೆ ರಸ್ತೆಯಲ್ಲಿ ಬೇಕಾಬಿಟ್ಟಿ ಕಸ‌ ಎಸೆದು ಹೊದ್ರೆ, ಅದನ್ನು ನಿಮ್ಮ ಕೈಯಾರೆ ಕ್ಲಿನ್ ಮಾಡುವ ಪಜೀತಿ ತಪ್ಪಿದ್ದಲ್ಲ, ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ಜನರಿಗೆ ರಸ್ತೆಯಲ್ಲಿ ಕಸ ಎಸೆಯಬೇಡಿ ಅಂತ ಎಷ್ಟೇ ತಿಳಿ ಹೇಳಿದ್ರು ನಮ್ಮ ಅವಳಿ‌ನಗರದ ಜನರು, ಅದರಲ್ಲೂ ಮಾರುಕಟ್ಟೆ ಪ್ರದೇಶದ ಅಂಗಡಿಕಾರರು, ವ್ಯಾಪಾರಿಗಳು ಎಲ್ಲೆಂದರಲ್ಲಿ ಕಸ ಎಸೆದು ಇಡೀ ನಗರವನ್ನು ಕಸದ ತೊಟ್ಟಿ ಮಾಡ್ತಾರೆ.. ಇದರಿಂದ ಬೇಸತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸ್ವಚ್ಚತಾ ಸಿಬ್ಬಂದಿ ಜನರಿಗೆ ಬಿಸಿ ಮುಟ್ಟಿಸಲು‌ ಮುಂದಾಗಿದ್ದಾರೆ.  ಹುಬ್ಬಳ್ಳಿ ಧಾರವಾಡ ಅವಳಿ ನಗರವನ್ನು ಸ್ಮಾರ್ಟ್ ಮಾಡಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಕಷ್ಟು ಶ್ರಮವಹಿಸುತ್ತಿದೆ. ಈ ನಿಟ್ಟಿನಲ್ಲಿ ಅದೆಷ್ಟೋ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಲೇ ಇದೆ. ಇದಕ್ಕೆ ಸಾರ್ವಜನಿಕರು ಹಾಗೂ ಅಂಗಡಿಕಾರರು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ತೋರುವ ಅಂಗಡಿಕಾರರಿಗೆ ಪಾಲಿಕೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

 

Latest Videos

 ಟೆಂಪೋ ಏರಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ ಉಡುಪಿ ಜಿ.ಪಂ ಸಿಇಒ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ 47ರ ವ್ಯಾಪ್ತಿಯ ಪಾನ್ ಶಾಪ್ ಅಂಗಡಿಯವರು ರಸ್ತೆಬದಿಯಲ್ಲಿ ಕಸ ಚೆಲ್ಲುವ ಮೂಲಕ ಅವ್ಯವಸ್ಥೆ ಹುಟ್ಟು ಹಾಕಿದ್ದರು. ಅವ್ಯವಸ್ಥೆ ಅರಿತ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಸವನ್ನು  ಅಂಗಡಿ ಮಾಲಕರಿಂದಲೇ ಸ್ವಚ್ಚಗೊಳಿಸುವ ಮೂಲಕ ಮತ್ತೆ ಕಸ ಎಸೆಯದಂತೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಅದನ್ನು ವಿಡಿಯೋ ಮಾಡಿ ಅದನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ‌ ಫೇಸ್ಬುಕ್ ಪೇಜ್ ನಲ್ಲಿ‌ಹಾಕಿದ್ದಾರೆ. 

ಬೆಂಗಳೂರಿನ ತ್ಯಾಜ್ಯ ಸುರಿಯಲು ಬಿಬಿಎಂಪಿಗೆ ಜಾಗವೇ ಸಿಗುತ್ತಿಲ್ಲ..!

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾಡ೯ ನಂ: 47ರ ವ್ಯಾಫ್ತಿಯ ಪಾನ್-ಶಾಪ್ ಅಂಗಡಿ ದವರು ರಸ್ತೆಬದಿಯಲ್ಲಿ ಕಸ ಚೆಲ್ಲಿದ್ದರಿಂದ ಕಸವನ್ನು ಅಂಗಡಿ ಮಾಲಕರಿಂದಲೇ ತೆಗೆಸಲಾಯಿತು ಹಾಗೂ ಮತ್ತೆ ಕಸ ಎಸೆಯದಂತೆ ಎಚ್ಚರಿಕೆ ನೀಡಿಲಾಯಿತು. pic.twitter.com/ox7hWTADBI

— Hubballi-Dharwad Municipal Corporation (@HdmcHubliDwd)

ಇದುವರೆಗೆ ದಂಡದ ಮೂಲಕ ಬಿಸಿ ಮುಟ್ಟಿಸುತ್ತಿದ್ದ ಅಧಿಕಾರಿಗಳು ಈಗ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನಾದರೂ ಜನರು ಎಚ್ಚೇತ್ತುಕೊಂಡು ತಮ್ಮ ಮನೆಯಂತೆ ಸಾರ್ವಜನಿಕ ಸ್ಥಳಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ಎಲ್ಲೆಂದರಲ್ಲಿ ಕಸ‌ ಚೆಲ್ಲಿ ನಗರವನ್ನು ಕಸದ ತೊಟ್ಟ ಮಾಡಬೇಡಿ ಅನ್ನೊದು ನಮ್ಮ‌ ಆಶಯ.

click me!