ಹನಿ​ಟ್ರ್ಯಾಪ್‌ಗೆ ಒಳ​ಗಾದ ಪತ್ರ​ಕ​ರ್ತ : ಇಬ್ಬರು ಅರೆಸ್ಟ್

By Kannadaprabha News  |  First Published Sep 15, 2019, 8:01 AM IST

ಪತ್ರಕರ್ತರೋರ್ವರು ಹನಿಟ್ರ್ಯಾಪ್ ಗೆ ಒಳಗಾದ ಘಟನೆ ರಾಮನಗರದಲ್ಲಿ ನಡೆದಿದೆ. 


ರಾಮನಗರ [ಸೆ.15]: ಆರ್‌ಟಿಐ ಕಾರ್ಯಕರ್ತರಾಗಿರುವ ಹವ್ಯಾಸಿ ಪತ್ರಕರ್ತರೊಬ್ಬರು ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಪ್ರಕರಣ ತಡ​ವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಸಾಮಾಜಿಕ ತಾಣಗಳ ಮೂಲಕ ಜೆ.ಸಿ.ರಂಜಿತಾ ಎಂಬಾಕೆ ಟಿ.ವಿ. ವರದಿಗಾರ್ತಿ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಾಳೆ. ಈ ನಡುವೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಹವ್ಯಾಸಿ ಪತ್ರಕರ್ತರನ್ನು ಆ.25ರಂದು ಬೆಂಗಳೂರು ದಕ್ಷಿಣದಲ್ಲಿರುವ ಕಗ್ಗ​ಲೀಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಗೊಲ್ಲ​ಹ​ಳ್ಳಿ​ಯ ಸಿಯಾನ್‌ ರೆಸ್ಟೋ ಕೆಫೆಗೆ ಕರೆಸಿಕೊಂಡಿದ್ದಾಳೆ. ಕೆಫೆಯ ಕೊಠಡಿಯಲ್ಲಿ ರಂಜಿತಾ ಹಾಗೂ ಹವ್ಯಾಸಿ ಪತ್ರಕರ್ತ ಮಾತನಾಡುತ್ತಿದ್ದಾಗ ರಾಜ್ಯ ಕಾರ್ಮಿಕ ಸೇವಾ ಸಂಘದ ಅಧ್ಯಕ್ಷ ಸುರೇಶ್‌, ಶ್ರೀನಿ​ವಾಸ್‌ ಹಾಗೂ ಇತರೆ ಐದಾರು ಮಂದಿ ಹವ್ಯಾಸಿ ಪತ್ರಕರ್ತನ ಮೇಲೆ ಹಲ್ಲೆ ನಡೆ​ಸಿ​ದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ ಅವ​ರನ್ನು ಹೆದ​ರಿಸಿ ತಮಗೆ ಬೇಕಾ​ದಂತೆ ಮೊಬೈಲ್‌ನಲ್ಲಿ ವೀಡಿಯೋ ಮಾಡಿ​ದ್ದಾರೆ. ನಂತರ ಅವ​ರನ್ನು ಬೆಂಗ​ಳೂ​ರಿನ ಗೋವಿಂದ​ರಾ​ಜ​ ನ​ಗರದಲ್ಲಿರುವ ಆರೋಪಿ ಶ್ರೀನಿ​ವಾಸ್‌ಗೆ ಸೇರಿದ ಕಚೇ​ರಿಗೆ ಕರೆದೊಯ್ದು 25 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿ​ದ್ದಾರೆ. ಅಂತಿ​ಮ​ವಾಗಿ ದೈಹಿಕ ಮತ್ತು ಮಾನ​ಸಿ​ಕ​ವಾಗಿ ಹಿಂಸೆ ನೀಡಿ ಅವ​ರಿಂದ 9 ಸಾವಿರ ರು. ನಗದು ಕಸಿ​ದು​ಕೊಂಡಿ​ದ್ದಾರೆ.

click me!