ಶವಸಂಸ್ಕಾರದ ವೇಳೆ ಹೆಜ್ಜೇನು ದಾಳಿ, ಶವ ಬಿಟ್ಟು ಪರಾರಿ: 40 ಜನಕ್ಕೆ ಗಾಯ

By Kannadaprabha NewsFirst Published Nov 3, 2022, 8:30 AM IST
Highlights

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಹಾರೋಹಳ್ಳಿ ಹೊರವಲಯದಲ್ಲಿ ನಡೆದ ಘಟನೆ 

ಪಾಂಡವಪುರ(ನ.03):  ಶವಸಂಸ್ಕಾರ ಮಾಡುವ ವೇಳೆ ಸುಮಾರು 40ಕ್ಕೂ ಅಧಿಕ ಮಂದಿ ಮೇಲೆ ಹೆಜ್ಜೇನು ದಾಳಿ ನಡೆಸಿ ಗಾಯಗೊಂಡಿರುವ ಘಟನೆ ಪಟ್ಟಣದ ಹಾರೋಹಳ್ಳಿ ಹೊರವಲಯದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಹೆಜ್ಜೇನು ದಾಳಿಗೆ ಒಳಗಾದ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಹಾರೋಹಳ್ಳಿ ಗ್ರಾಮದಲ್ಲಿ ಧರ್ಮರಾಜು ಎಂಬುವರು ಸಾವನ್ನಪ್ಪಿದ್ದರು. ಗ್ರಾಮದ ಹೊರವಲಯದ ರುದ್ರಭೂಮಿಗೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡುವ ವೇಳೆ ಧೂಪ, ಗಂಧದ ಕಡ್ಡಿ ಹೊಗೆಗೆ ಮರದಲ್ಲಿ ಕಟ್ಟಿದ್ದ ಹೆಜ್ಜೇನು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರ ಮೇಲೆ ದಾಳಿ ನಡೆಸಿದೆ.

ಹೆಜ್ಜೇನು ದಾಳಿ ಮಾಡುತ್ತಿದ್ದಂತೆಯೇ ಸಾರ್ವಜನಿಕರು ಶವವನ್ನು ಬಿಟ್ಟು ಓಡಿಹೋಗಿದ್ದಾರೆ. ಹೆಜ್ಜೇನು ದಾಳಿಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ 40ಕ್ಕೂ ಅಧಿಕ ಮಂದಿಗೆ ಗಾಯಕ್ಕೆ ಒಳಗಾಗಿದ್ದಾರೆ. ಹೆಜ್ಜೇನು ದಾಳಿಯಿಂದ ಗಾಯಗೊಂಡ ಸಾರ್ವಜನಿಕರು ತಕ್ಷಣವೇ ಸ್ಥಳೀಯರು ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

MANDYA: ಹೈಕೋರ್ಟ್‌ ಅಂಗಳಕ್ಕೆ ಜಾಮೀಯಾ ಮಸೀದಿ ವಿವಾದ

ದಾಳಿಗೆ ಒಳಗಾದ ಎಲ್ಲಾ ಸಾರ್ವಜನಿಕರಿಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಲಾಗಿದೆ. ಅದೃಷ್ಟವಸಾತ್‌ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲ್ಲಾ ಸಾರ್ವಜನಿಕರು, ಮಹಿಳೆಯರು, ಮಕ್ಕಳಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಕೊಡಿಸಿ ಮನೆಗೆ ಕಳುಹಿಸಲಾಗಿದೆ.

ಹೆಜ್ಜೇನು ದಾಳಿಯಲ್ಲಿ ಹಾರೋಹಳ್ಳಿ ಗ್ರಾಮದ ರಮೇಶ್‌, ಸತ್ಯನಾರಾಯಣ್‌, ಲಕ್ಷ್ಮೇಗೌಡ, ವೀಣಾ, ವರುಣ್‌, ಆನಂದ್‌, ಪ್ರಜ್ವಲ…, ನೂತನ್‌ ಸೇರಿದಂತೆ ಹಲವು ಮಂದಿ ಗಾಯಗೊಂಡು ಚಿಕಿತ್ಸೆಪಡೆದು ವಾಪಸ್ಸಾಗಿದ್ದಾರೆ. ಹೆಜ್ಜೇನು ಮತ್ತೆ ಗೂಡಿಗೆ ಸೇರಿದ ನಂತರ ಕೆಲ ಸಂಬಂಧಿಕರು ಹಾಗೂ ಗ್ರಾಮಸ್ಥರು ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
 

click me!