ಜನರ ಋುಣ ತೀರಿಸಲು ಪ್ರಾಮಾಣಿಕ ಪ್ರಯತ್ನ: ಲಕ್ಷ್ಮಣ ಸವದಿ

By Kannadaprabha News  |  First Published Jun 4, 2023, 12:09 PM IST

ಕ್ಷೇತ್ರದ ಮತದಾರರ ಋುಣ ನನ್ನ ಮೇಲೆ ಬಹಳಷ್ಟು ಇರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಮತಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿಗಳನ್ನು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಪೂರ್ಣಗೊಳಿಸುತ್ತೇನೆ: ಶಾಸಕ ಲಕ್ಷ್ಮಣ ಸವದಿ 


ಅಥಣಿ(ಜೂ.04):  ಮಹತಪಸ್ವಿ ಮುರುಗೇಂದ್ರ ಶಿವಯೋಗಿಗಳ ಆಶೀರ್ವಾದ ಮತ್ತು ಅನೇಕ ಮಠಮಾನ್ಯಗಳ ಆಶೀರ್ವಾದದ ಫಲವಾಗಿ ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ. ಮತಕ್ಷೇತ್ರದ ಜನರ ಋುಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಶೆಟ್ಟರ ಮಠದಲ್ಲಿ ಶನಿವಾರ ಮರುಳಸಿದ್ಧ ಸ್ವಾಮೀಜಿ ಹಾಗೂ ಶ್ರೀಮಠದ ಸದ್ಭಕ್ತರಿಂದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ಮತದಾರರ ಋುಣ ನನ್ನ ಮೇಲೆ ಬಹಳಷ್ಟು ಇರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಮತಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿಗಳನ್ನು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಪೂರ್ಣಗೊಳಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಆಡಳಿತ ಪಕ್ಷದ ಶಾಸಕನಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮೆಲ್ಲರ ಸಹಾಯ ಸಹಕಾರ ಯಾವತ್ತು ನನ್ನ ಮೇಲೆ ಇರಲಿ ಎಂದರು.ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಲಕ್ಷ್ಮಣ ಸವದಿ ಅವರು ಸ್ವಾಭಿಮಾನಿ ರಾಜಕಾರಣಿಯಾಗಿದ್ದಾರೆ. ಬದಲಾದ ಕಾಲದಲ್ಲಿ ಪಕ್ಷ ತೊರೆದು ಬೇರೆ ಪಕ್ಷದಿಂದ ಸ್ಪರ್ಧಿಸುವ ಕಾಲದಲ್ಲಿ ಯಾವುದೇ ಶರತ್ತು ಹಾಕದೇ ನನ್ನ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಎಲ್ಲ ಸಹಕಾರ ನೀಡಬೇಕು ಅಂತಾ ಅಷ್ಟೆಹೇಳಿದ್ದು ವಿಶೇಷ. ಈಗ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಮುಂದಿನ ದಿನಮಾನಗಳಲ್ಲಿ ಅವರ ಶಕ್ತಿಯನ್ನು ಪಕ್ಷ ಬಳಸಿಕೊಂಡು ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

Latest Videos

undefined

ರಾಜಕಾರಣದಲ್ಲಿ ತಾಳ್ಮೆ ಮುಖ್ಯ, ಡಿಕೆಶಿ ಜತೆ ಸೌಜನ್ಯಯುತ ಭೇಟಿ: ಲಕ್ಷ್ಮಣ ಸವದಿ

ಈ ವೇಳೆ ಶ್ರೀಮಠದ ಸದ್ಭಕ್ತರಾದ ಶಿವಾನಂದ ದಿವಾನಮಳ, ಮುರಗೇಪ್ಪ ಮಮದಾಪುರ, ಈರಗೌಡ ಪಾಟೀಲ, ಪ್ರಕಾಶ ಮಹಾಜನ, ಶಂಭು ಮಮದಾಪೂರ, ಐ.ಜಿ.ಜಗದಾಳಮಠ, ಸುರೇಶ ಮಾಯಣ್ಣವರ, ಸಂಜಯ ತೆಲಸಂಗ, ಶಿವು ಗಜ್ಜಿ, ಸಂತೋಷ ಸಾವಡಕರ, ಶಿವಕುಮಾರ ತೆಲಸಂಗ, ಅಶೋಕ ಅಳ್ಳಿಮಟ್ಟಿ, ಮುರಗೇಶ ಬಾನೆ, ವಿಜಯ ಮಂಗಸೂಳಿ, ಅಕ್ಷಯ ಬುರ್ಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕ್ಷೇತ್ರದ ಮತದಾರರ ಋುಣ ನನ್ನ ಮೇಲೆ ಬಹಳಷ್ಟುಇರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಮತಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿಗಳನ್ನು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಪೂರ್ಣಗೊಳಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಆಡಳಿತ ಪಕ್ಷದ ಶಾಸಕನಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮೆಲ್ಲರ ಸಹಾಯ ಸಹಕಾರ ಯಾವತ್ತು ನನ್ನ ಮೇಲೆ ಇರಲಿ ಅಂತ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.  

click me!