ಕ್ವಾರೆಂಟೈನ್ ಕ್ಯಾನ್ಸಲ್, ಮಹಾರಾಷ್ಟ್ರದಿಂದ ಬಂದವರ ಮನೆಯೇ ಸೀಲ್‌ಡೌನ್: ಹೀಗಿದೆ ಹೊಸ ರೂಲ್ಸ್

By Suvarna NewsFirst Published Jun 9, 2020, 1:48 PM IST
Highlights

ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ನೀಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಪಡಿಸಿ, ಪ್ರತಿ ವ್ಯಕ್ತಿಗೂ ಅವರವರ ಮನೆಯಲ್ಲಿಯೇ ಕ್ವಾರೆಂಟೈನ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ.

ಉಡುಪಿ(ಜೂ.09): ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ನೀಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಪಡಿಸಿ, ಪ್ರತಿ ವ್ಯಕ್ತಿಗೂ ಅವರವರ ಮನೆಯಲ್ಲಿಯೇ ಕ್ವಾರೆಂಟೈನ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿ ಅವರು, ವ್ಯಕ್ತಿಯ ಮನೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡುತ್ತೇವೆ. ಸೀಲ್ ಮಾಡಿದ ಮೇಲೆ ಆತ ಮನೆಯಲ್ಲೇ ಇರಬೇಕು. ಹೊರಬಂದರೆ ಕೇಸ್ ಹಾಕುವ ತೀರ್ಮಾನ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

'ಕೊರೋನಾ ಸಮರದಲ್ಲಿ ನಾವು ಕೊಂಚ ಎಡವಿರಬಹುದು, ಆದ್ರೆ ವಿಪಕ್ಷಗಳೇನು ಮಾಡಿದೆ?'

ಜಿಲ್ಲಾಧಿಕಾರಿಗೆ ಜಿಲ್ಲೆಯ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಸೀಲ್ ಡೌನ್ ಇದ್ದವರು ಹೊರಗೆ ಬಂದರೆ ಕೇಸ್ ಹಾಕಲಾಗುತ್ತದೆ. ಪೊಲೀಸ್, ಹೋಂ ಗಾರ್ಡ್ ಗಳನ್ನು ನೇಮಿಸಲಾಗುತ್ತದೆ. ಅದರೊಂದಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರೂ ನಿಗಾ ವಹಿಸಲಿದ್ದಾರೆ.

"

ಹೊರಬಂದ್ರೆ ಸುತ್ತಮುತ್ತಲ ಮನೆಯವರು ಮಾಹಿತಿಕೊಡಬೇಕು. ತುಂಬಾ ಬಡವರಿದ್ದರೆ, ದೇವಸ್ಥಾನದ ಮೂಲಕ ಆ ಮನೆಗೆ ಕಿಟ್ ನೀಡಲಾಗುತ್ತದೆ. ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡುತ್ತೇವೆ. ಅಪಾರ್ಟ್ ಮೆಂಟ್ ಸೀಲ್ ಮಾಡಲ್ಲ. ಒಂದು ಮನೆಯನ್ನು ಮಾತ್ರ ಸೀಲ್ ಮಾಡಲಾಗುವುದು ಎಂದು ಹೇಳಿದ್ದಾರೆ.

click me!