ಸಾಮಾನ್ಯವಾಗಿ ರೈತರು ಲಾಭದ ದೃಷ್ಟಿಯಿಂದ ಟೊಮೆಟೊ ಬೆಳೆ ಬೆಳೆದಿರುತ್ತಾರೆ. ಆದರೆ ಅದೇ ಟೊಮೆಟೊ ಬೆಳೆಯ ಬೆಲೆ ಕಡಿಮೆ ಆದರೆ ಪಾಪ ರೈತ ಏನು ಮಾಡಬೇಕು ಹೇಳಿ. ಅಂತಹದ್ದೆ ಒಂದು ಸಮಸ್ಯೆಯನ್ನ ಇದೀಗ ರೈತರು ಅನುಭವಿಸುತ್ತಿದ್ದಾರೆ.
ಕೊಪ್ಪಳ (ಆ.05): ಸಾಮಾನ್ಯವಾಗಿ ರೈತರು ಲಾಭದ ದೃಷ್ಟಿಯಿಂದ ಟೊಮೆಟೊ ಬೆಳೆ ಬೆಳೆದಿರುತ್ತಾರೆ. ಆದರೆ ಅದೇ ಟೊಮೆಟೊ ಬೆಳೆಯ ಬೆಲೆ ಕಡಿಮೆ ಆದರೆ ಪಾಪ ರೈತ ಏನು ಮಾಡಬೇಕು ಹೇಳಿ. ಅಂತಹದ್ದೆ ಒಂದು ಸಮಸ್ಯೆಯನ್ನ ಇದೀಗ ರೈತರು ಅನುಭವಿಸುತ್ತಿದ್ದಾರೆ.
ಎಲ್ಲಿ ಟೊಮೆಟೊ ಬೆಳೆಯ ಬೆಲೆ ಕಡಿಮೆ ಆಗಿರೋದು: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಅಂದರೆ ಸಾಕು ನಮಗೆ ನೆನಪಿಗೆ ಬರುವುದು ಭತ್ತದ ನಾಡು ಗಂಗಾವತಿ ಎಂದು. ಆದರೆ ಈ ಬಾರಿ ಗಂಗಾವತಿ ಬೇರೆಯದ್ದೆ ವಿಷಯಕ್ಕೆ ಪ್ರಚಾರಕ್ಕೆ ಬಂದಿದೆ. ಈ ಬಾರಿ ಗಂಗಾವತಿ ಪ್ರಚಾರಕ್ಕೆ ಬಂದಿರುವ ವಿಷಯ ಟೊಮೆಟೊ ಬೆಳೆಯ ಬೆಲೆ ಕಡಿಮೆ ಆಗಿರುವುದು.
Koppal: ಹೆತ್ತ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ಮಗ
ಟೊಮೆಟೊ ಬೆಲೆ ಎಷ್ಟಾಗಿದೆ: ಇನ್ನು ಎಲ್ಲ ಕಾಲದಲ್ಲಿಯೂ ಟೊಮೆಟೊ ಬೆಲೆ ಸರಾಸರಿ ಇದ್ದೆ ಇರುತ್ತದ. ಆದರೆ ಈ ಬಾರಿ ಮಾತ್ರ ಟೊಮೆಟೊ ಬೆಲೆ ಮಾತ್ರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದೆ. 20 ಕೆಜಿ ಟೊಮ್ಯಾಟೊ ಬಾಕ್ಸ್‌ಗೆ ಬೇರೆ ಸಂದರ್ಭದಲ್ಲಿ 500 ರಿಂದ 600 ರೂಪಾಯಿ ಇರುತ್ತಿತ್ತು. ಆದರೆ ಸದ್ಯ 20 ಕೆಜಿ ಟೊಮೆಟೊ ಬಾಕ್ಸ್‌ನ ಬೆಲೆ ಕೇವಲ ಐದರಿಂದ ಹತ್ತು ರೂಪಾಯಿ ಆಗಿದೆ. ಇದರಿಂದಾಗಿ ರೈತರು ಪಡಬಾರದ ಕಷ್ಟಪಡುತ್ತಿದ್ದಾರೆ.
ರಸ್ತೆಗೆ ಟೊಮೆಟೊ ಸುರಿದು ರೈತರ ಆಕ್ರೋಶ: ಇನ್ನು ಪ್ರತಿದಿನದಂತೆ ರೈತರು ಟೊಮೆಟೊ ಅನ್ನು ಮಾರುಕಟ್ಟೆಗೆ ತೆಗೆದುಕೊಂಡು ಬಂದಿದ್ದರು. ಆದರೆ ಅವರಿಗೆಲ್ಲ ಮಾರುಕಟ್ಟೆಗೆ ಬಂದ ಮೇಲೆ ಶಾಕ್ ಕಾದಿತ್ತು. ಟೊಮ್ಯಾಟೊ ಬೆಲೆಯಲ್ಲಿ ಭಾರೀ ಕುಸಿತವಾದ ಹಿನ್ನಲೆಯಲ್ಲಿ ಟೊಮೆಟೊ ರಸ್ತೆಗೆ ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ರೈತರು ಟೊಮೆಟೊವನ್ನು ಜಾನುವಾರುಗಳಿಗೆ ಹಾಕಿದರು.
ಟೊಮ್ಯಾಟೊಗೆ ಬೆಲೆ ಸಿಗದ ಹಿನ್ನಲೆ ಮಾರಾಟ ಮಾಡಲು ತಂದ ಟೊಮೆಟೊ ರಸ್ತೆಗೆ ಸುರಿದ ರೈತರು ಖಾಲಿ ಕೈಯಲ್ಲಿ ಮರಳಿ ಮನೆಗೆ ಹಿಂದುರಿಗಿದರು. ಒಂದು ಕಡೆ ಮಳೆಗೆ ಕಂಗಾಲಾದ ರೈತ, ಮತ್ತೊಂದು ಕಡೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇನ್ನಾದರೂ ಸರಕಾರ ಈ ಕೂಡಲೇ ಟೊಮೆಟೊ ಬೆಳೆದ ರೈತರ ನೆರವಿಗೆ ಧಾವಿಸಬೇಕಿದೆ.
ಟೊಮೆಟೋಗೆ ಬೆಂಬಲ ಬೆಲೆ ನೀಡಲು ಒತ್ತಾಯ: ಜಿಲ್ಲೆಯಲ್ಲಿನ ರೈತರು ಹಾಗೂ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ರಸಾಯನಿಕ ಗೊಬ್ಬರ ಬಳಸಿ ಬೆಳೆದ ಟೊಮೆಟೋ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ಕುಸಿದ ಕಾರಣದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್‌ಗೆ ಟೊಮೆಟೋ ನೀಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಟೊಮೆಟೋಗೆ ಬೆಂಬಲ ಬೆಲೆ ನೀಡಬೇಕೆಂದರು. ಜಿಲ್ಲೆಯಲ್ಲಿ ಎಚ್ ಎಂ ವ್ಯಾಲಿ ಮತ್ತು ಕೆ ಸಿ ವ್ಯಾಲಿ ನೀರು ಮೊದಲನೆಯ ಹಂತದಲ್ಲಿ ಕೆರೆಗಳು ತುಂಬಿವೆ. ಆದರೆ ಎರಡನೇ ಹಂತದ ಕೆರೆಗಳನ್ನು ತುಂಬಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ
ಪಿ ನಂಬರ್ ತೆಗೆಯಲು ಮನವಿ: ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳ ಕುಂದುಕೊರತೆಗಳು ಮತ್ತು ಪಹಣಿಯಲ್ಲಿ ಪಿ ನಂಬರ್ ತೆರವು ಮಾಡುವುದರ ಬಗ್ಗೆ ಮತ್ತು ಬಗರು ಹುಕುಂ ಸಾಗುವಳಿ ಕಮಿಟಿ ಬಗ್ಗೆ ಒತ್ತು ನೀಡಬೇಕು ಹಾಗೂ ಕೊಟ್ಟು ಗಮನಹರಿಸಬೇಕು ಹಾಗೂ ರೈತರಿಗೆ ಸಮರ್ಪಕವಾಗಿ ರಸಗೊಬ್ಬರಗಳು ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.