Gadag: ಒಂದು ರೂಪಾಯಿಗೆ ಕೆ.ಜಿ ಟೊಮೆಟೋ: ರಸ್ತೆಗೆ ಸುರಿದು ರೈತರ ಆಕ್ರೋಶ

By Govindaraj SFirst Published Aug 4, 2022, 6:42 PM IST
Highlights

ಟೊಮೆಟೋ ಬೆಲೆ ದಿಢೀರ್ ಕುಸಿತದಿಂದ ಆಕ್ರೋಶಗೊಂಡ ರೈತರು ಲಕ್ಷ್ಮೇಶ್ವರ ಬಸ್ ನಿಲ್ದಾಣದ ಎದುರಿನ ರಾಜ್ಯ ಹೆದ್ದಾರಿ ಬಂದ್ ಮಾಡಿ, ರಸ್ತೆಗೆ ಟೊಮೆಟೋ ಸುರಿದು ಆಕ್ರೋಶ ವ್ಯಕ್ತಪಡಿಸಿದರು. 

ಗದಗ (ಆ.04): ಟೊಮೆಟೋ ಬೆಲೆ ದಿಢೀರ್ ಕುಸಿತದಿಂದ ಆಕ್ರೋಶಗೊಂಡ ರೈತರು ಲಕ್ಷ್ಮೇಶ್ವರ ಬಸ್ ನಿಲ್ದಾಣದ ಎದುರಿನ ರಾಜ್ಯ ಹೆದ್ದಾರಿ ಬಂದ್ ಮಾಡಿ, ರಸ್ತೆಗೆ ಟೊಮೆಟೋ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನಂತರ ಬಡವರು, ಸ್ಥಳೀಯರು ಟೊಮೆಟೋ ಹೆಕ್ಕಿದ ಪ್ರಸಂಗವೂ ನಡೀತು. ಮಾರ್ಕೆಟ್‌ನಲ್ಲಿ ಕೆಜಿ ಟೊಮೆಟೋಗೆ 10/20 ರೂಪಾಯಿ ದರ ಇದೆ. ಆದರೆ ರೈತರಿಂದ 25 ಕೆಜಿ ಟೊಮೆಟೋಗೆ 30 ರೂಪಾಯಿಯಂತೆ ಖರೀದಿ ಮಾಡಲಾಗುತ್ತಿದೆ. 

ಇದರಿಂದ ರೈತರು ಟೊಮೆಟೋ ಕಟಾವು ಮಾಡಿ, ಮಾರ್ಕೆಟ್‌ಗೆ ಸಾಗಿಸಿದ ಹಣವೂ ಕೈಗೆ ಸೇರ್ತಿಲ್ಲ. ಹೀಗಾಗಿ ಕಂಗಾಲಾಗಿದ್ದ ರೈತರು ದಿಢೀರ್ ಪ್ರತಿಭಟನೆ ನಡೆಸಿ, ಕೆಲ ಕಾಲ ರಸ್ತೆ ಬಂದ್ ಮಾಡಿದರು. ಟೊಮೆಟೋ ಬೆಳೆಯೋದಕ್ಕೆ ಎಕರೆಗೆ 15 ಸಾವಿರ ರೂಪಾಯಿ ಹಣ ಖರ್ಚು ಮಾಡಲಾಗುತ್ತಿದೆ. ಕಟಾವು ಮಾಡಲು 200 ರೂಪಾಯಿ ಕೂಲಿ ನೀಡಿ ಬಾಕ್ಸ್ ಒಂದಕ್ಕೆ 10 ರೂಪಾಯಿ ನೀಡಿ ಮಾರ್ಕೆಟ್‌ಗೆ ಸಾಗಾಟ ಮಾಲಾಗುತ್ತದೆ. ಆದರೆ ಕಟಾವು ಮಾಡಿಣ ಹಣವೂ ಹಿಂದುರುಗದ ಸ್ಥಿತಿ ಎದುರಾಗಿದೆ. 

ಬಣ್ಣ ಅಲ್ಲ ಸೆಗಣಿ ಎರಚಿ ಇಲ್ಲಿ ಹಬ್ಬ ಆಚರಿಸ್ತಾರೆ: ರೈತರ ಮಕ್ಕಳ ಸೆಗಣಿಯಾಟ

ಕೋಲಾರ, ಚಿಕ್ಕಬಳ್ಳಾಪುರ ಮಾದರಿಯಲ್ಲಿ ಟೊಮೆಟೋ ಖರೀದಿಗೆ ಒತ್ತಾಯ: ಲಕ್ಷ್ಮೇಶ್ವರ ಮಾರುಕಟ್ಟೆಗೆ ಸುತ್ತಲ ಜಿಲ್ಲೆಯ ರೈತರು ಟೊಮೆಟೋ ಮಾರಾಟಕ್ಕೆ ತರುತ್ತಾರೆ. ಹೆಚ್ಚುವರಿ ಟೊಮೆಟೋ ಮಾರುಕಟ್ಟೆಗೆ ಬಂದಾಗ ದಿಢೀರ್ ಬೆಲೆ ಕುಸಿತವಾಗುತ್ತೆ. ಸ್ಥಳೀಯವಾಗಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಿ, ಕೋಲಾರ ಚಿಕ್ಕಬಳ್ಳಾಪುರ ಮಾದರಿಯಲ್ಲಿ ಟೊಮೆಟೋ ಖರೀದಿಸಬೇಕಾಗಿದೆ. 25 ಕೆಜಿ ಟೊಮೆಟೋಗೆ ಕನಿಷ್ಠ 300 ರೂಪಾಯಿ ಬೆಲೆ ನಿಗದು ಮಾಡಿ ಖರೀದಿಬೇಕು ಅಂತಾ ರೈತ ಮುಖಂಡ ಮಹೇಶ್ ಹೊಗೆಸೊಪ್ಪಿನ್ ಆಗ್ರಹಿಸಿದ್ದಾರೆ. 

ಉತ್ತರ ಕರ್ನಾಟಕದ ರೈತರ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದ್ದು, ರೈತರ ಸಹನೆ ಕಳೆದುಕೊಂಡು ಬೀದಿಗಿಳಿದರೆ ಯಾವ ಸರ್ಕಾರವು ಉಳಿಯುವುದಿಲ್ಲ ಎಂದು ರೈತ ಹೋರಾಟಗಾರ ಮಹೇಶ್ ಎಚ್ಚರಿಕೆ ನೀಡಿದ್ದು, ತೋಟಗಾರಿಕಾ ಇಲಾಖೆಯವರು ಕೂಡಲೇ ಮಧ್ಯ ಪ್ರವೇಶಿಸಿ ರೈತರ ನೆರವಿಗೆ ಧಾವಿಸಿದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೇ ಆಗಸ್ಟ್  8ರಂದು ರೈತರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಬಂದ್ ಕರೆ ನೀಡಲಾಗುವುದು ಎಂದು ಹೇಳಿದರು.

ಟೊಮೆಟೋಗೆ ಬೆಂಬಲ ಬೆಲೆ ನೀಡಲು ಒತ್ತಾಯ: ಜಿಲ್ಲೆಯಲ್ಲಿನ ರೈತರು ಹಾಗೂ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ರಸಾಯನಿಕ ಗೊಬ್ಬರ ಬಳಸಿ ಬೆಳೆದ ಟೊಮೆಟೋ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ಕುಸಿದ ಕಾರಣದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ಗೆ ಟೊಮೆಟೋ ನೀಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಟೊಮೆಟೋಗೆ ಬೆಂಬಲ ಬೆಲೆ ನೀಡಬೇಕೆಂದರು. ಜಿಲ್ಲೆಯಲ್ಲಿ ಎಚ್‌ ಎಂ ವ್ಯಾಲಿ ಮತ್ತು ಕೆ ಸಿ ವ್ಯಾಲಿ ನೀರು ಮೊದಲನೆಯ ಹಂತದಲ್ಲಿ ಕೆರೆಗಳು ತುಂಬಿವೆ. ಆದರೆ ಎರಡನೇ ಹಂತದ ಕೆರೆಗಳನ್ನು ತುಂಬಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

Gadag: ಭೀಷ್ಮಕೆರೆ ಜಂಟಿ ಸರ್ವೇಗೆ ಹೈಕೋರ್ಟ್‌ ಮಹತ್ವದ ಆದೇಶ!

ಪಿ ನಂಬರ್‌ ತೆಗೆಯಲು ಮನವಿ: ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳ ಕುಂದುಕೊರತೆಗಳು ಮತ್ತು ಪಹಣಿಯಲ್ಲಿ ಪಿ ನಂಬರ್‌ ತೆರವು ಮಾಡುವುದರ ಬಗ್ಗೆ ಮತ್ತು ಬಗರು ಹುಕುಂ ಸಾಗುವಳಿ ಕಮಿಟಿ ಬಗ್ಗೆ ಒತ್ತು ನೀಡಬೇಕು ಹಾಗೂ ಕೊಟ್ಟು ಗಮನಹರಿಸಬೇಕು ಹಾಗೂ ರೈತರಿಗೆ ಸಮರ್ಪಕವಾಗಿ ರಸಗೊಬ್ಬರಗಳು ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

click me!