ರೈತರ ಹುತಾತ್ಮ ದಿನ; ಸಚಿವರಿಗೆ ಮಾಲಾರ್ಪಣೆ ಮಾಡಲು ಬಿಡದ ರೈತರು!

By Ravi NayakFirst Published Jul 21, 2022, 4:50 PM IST
Highlights

ಬಂಡಾಯದ ನಾಡು ನರಗುಂದದಲ್ಲಿ ರೈತರ ಹುತಾತ್ಮ ದಿನಾಚಣೆಗೆ ಸಚಿವ ಸಿ.ಸಿ.ಪಾಟೀಲ್‌ರ ಮಾಲಾರ್ಪಣೆ ಮಾಡಲು ಬಂದಿದ್ದಾಗ ವಿವಿಧ ಸಂಘಟನೆಗಳು ವಿರೋಧಿಸಿ ಅಡ್ಡಿ ಪಡಿಸಿದ ಘಟನೆ ನಡೆದಿದೆ.

ಗದಗ (ಜು.21): ಬಂಡಾಯದ ನಾಡು ನರಗುಂದ ಪಟ್ಟಣದಲ್ಲಿ ನಡೆದ 42 ನೇ ರೈತ ಹುತಾತ್ಮ ದಿನಾಚಣೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಿಗದಿಯಂತೆ 11: 30 ಕ್ಕೆ ಸಚಿವ ಸಿಸಿ ಪಾಟೀಲ್(C.C.Patiol) ಅವರು ಪಟ್ಟಣದ ಹುಬ್ಬಳ್ಳಿ ರಸ್ತೆ(Hubballi Road) ಬಳಿ ಇರುವ ವೀರ ಗಲ್ಲಿಗೆ ಮಾಲಾರ್ಪಣೆ ಮಡಲು ಬಂದಿದ್ರು.‌ ಪ್ರಚಾರ ವಾಹನ ಹಾಗೂ ಬೆಂಬಲಿಗರ ದಂಡಿನೊಂದಿಗೆ ಸಿಸಿ ಪಾಟೀಲರು ಆಗಮಿಸಿದ್ರು.. ಸಿಸಿ ಪಾಟೀಲರ ಪರ ಬೆಂಬಲಿಗರು ಘೋಷಣೆ ಕೂಗುತ್ತಿದ್ರು.. ಈ ಮೊದ್ಲೆ ವೀರಗಲ್ಲು ಬಳಿ ರಾಜ್ಯ ರೈತ ಸಂಘ(Rajya Raita Sangh) ಹಾಗೂ ಕನ್ನಡ ಪರ ಸಂಘಟನೆ(Kannada Sanghatane) ಕಾರ್ಯಕರ್ತರು ಜಮಾಯಿಸಿ ಸ್ಮಾರಕ ನಿರ್ಮಾಣಕ್ಕೆ ಪಟ್ಟ ಹಿಡಿದು ಕೂತಿದ್ದ ರೈತ್ರು, ಜನ ಪ್ರತಿನಿಧಿಗಳಿಗರ ಮಾಲಾರ್ಪಣೆ ಮಾಡಲು ಬಿಡಲ್ಲ ಅಂತಾ ಪಟ್ಟು ಹಿಡಿದಿದ್ರು.. ವೀರಗಲ್ಲಿನ ಅನತಿ ದೂರದಲ್ಲೇ ಸಚಿವರು ಕಾಯುತ್ತಿ ನಿಂತಿದ್ರು.. ನಂತ್ರ ಪೊಲೀಸರು ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಅವಕಾಶ ಮಾಡಿಕೊಟ್ರು..  ಬಿಜೆಪಿ ಕಾರ್ಯಕರ್ತರ ಹಾಗೂ ರೈತರ ತಳ್ಳಾಟ ನೂಕಾಟ ಮಧ್ಯೆ ಸಚಿವರು ಮಾಲಾರ್ಪಣೆ ಮಾಡಿ ನಡೆದ್ರು..

ರೈತರ ಹುತಾತ್ಮ ದಿನಾಚರಣೆಗೆ ಶಾಸಕ ಮುನೇನಕೊಪ್ಪ ಗೈರು! 

Latest Videos

ವೀರಗಲ್ಲಿನ ಗೇಟ್ ಕಿತ್ತಿದ್ದಕ್ಕೆ ರೈತರ ಆಕ್ರೋಶ:

1980 ನರಗುಂದ ರೈತ ಬಂಡಾಯದ ಹುತಾತ್ಮರ ಸ್ಮರಣಾರ್ಥ ಪಟ್ಟಣದಲ್ಲಿ ವೀರಗಲ್ಲು ನೆಡಲಾಗಿದೆ.. ವೀರಗಲ್ಲಿಗೆ ಅಳವಡಿಸಲಾದ ಗೇಟ್ ಕಿತ್ತು ಬಂದಿದೆ.. ಇದ್ರಿಂದ ಆಕ್ರೋಶಗೊಂಡಿರುವ ರೈತ್ರು ತಹಶೀಲ್ದಾರ್ ಎಡಿ ಆಮರವಾದಗಿ ಅವರನ್ನ ವಜಾ ಮಾಡ್ಬೇಕು ಅಂತಾ ಆಗ್ರಹಿಸಿದ್ರು.. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸಚಿವರನ್ನ ಮಾಲಾರ್ಪಣೆ ಮಾಡಲು ಬಿಡದೆ ರೈತರು ಆಕ್ರೋಶ ವ್ಯಕ್ತ ಪಡಿಸಿದ್ರು.. ವೀರಗಲ್ಲು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ, ವೀರಗಲ್ಲು ಇರುವ ಜಾಗದ ವಿವಾದ ಇದೆ.. ವೀರಗಲ್ಲು ಮರು ನಿರ್ಮಾಣ ಕಷ್ಟ ಸಾಧ್ಯ.. ಗೇಟ್ ಕಿತ್ತು ಬಂದ ವಿಚಾರ ನಿನ್ನೆ ಹೇಳಿದ್ರೆ ರಿಪೇರಿ ಮಾಡಿಸಿ ಕೊಡುತ್ತಿದ್ದೆ.. ಏಕಾ ಏಕಿ ಗೊಂದಲ ಸೃಷ್ಟಿಸಲಾಗಿದೆ ಅಂತಾ ಹೇಳಿದ್ರು..  

ಮಹಾದಾಯಿ ಹೋರಾಟ ವೇದಿಕೆಯಲ್ಲಿ ಬೃಹತ್ ಸಮಾವೇಶ:

ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನಾ ಸಂಘಟನೆ, ಹಸಿರು ಸೇನೆ ಸೇರಿದಂತೆ ರಾಜ್ಯದ ವಿವಿಧ ರೈತ ಸಂಘಟನೆಗಳು ಬೃಹತ್ ಸಮಾವೇಶ ಮಾಡಿದ್ರು.. ಸಮಾವೇಶದಲ್ಲಿ ರೈತ ಪರ ಹಲವು ನಿರ್ಣಯ ಕೈಗೊಳ್ಳಲಾಯ್ತು.. 

ನರಗುಂದ: ಕುಂಟುತ್ತ ಎಂಟನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ..!

ನಿರ್ಣಯಗಳು:

  • ಮಹಾದಾಯಿ ವಿಚಾರವಾಗಿ ನ್ಯಾಯಾಧಿಕರಣ ಹಂಚಿಕೆ ಮಾಡಿರುವ 13.4 ಟಿಎಮ್ ಸಿ ನೀರನ್ನ ನೀಡುವ ಕುರಿತು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.. ಯೋಜನೆ ತಾರ್ಕಿಕ ಅಂತ್ಯ ಕಾಣುವ ವರೆಗೆ ಹೋರಾಟ ಮುಂದುವರೆಸುವುದು.. 
  • ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ, ಎಪಿಎಮ್ ಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆ ವಾಪಾಸ್ಸು ಪಡೆಯಬೇಕು.. 
  • 2003 ರ ವಿದ್ಯುತ್ ಕಾಯ್ದೆ ತಿದ್ದುಪಡಿ ಕರಡು ಮಂಡಿಸದಿರಲು ಸರ್ಕಾರ ನೀಡಿರುವ ಭರವಸೆ ಈಡೇರಬೇಕು.
  • ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ನಿರ್ಧಾರ ಕೈಗೊಳ್ಳಬೇಕು... 
  • ಕೃಷಿ ಪರಿಕರ, ಯಂತ್ರೋಪಕರಣ ಮೇಲೆ ವಿಧಿಸಿರುವ GST ಕೈ ಬಿಡಬೇಕು.. 
  • ಅತಿವೃಷ್ಟಿಯಿಂದಾದ ಹಾನಿ ಬಗ್ಗೆ ವಿವರ ಪಡೆದು ವೈಜ್ಞಾನಿಕವಾಗಿ ಪರಿಹಾರ ನೀಡಲು ಒತ್ತಾಯ. 
  • ನಕಲಿ ರೈತ ಹೋರಾಟಗಾರರ ಬಗ್ಗೆ ಸಮಾವೇಶದಲ್ಲಿ ಖಂಡನೆ.. ಹಸಿರು ಶಾಲು ವಾಪಾಸ್ ನೀಡುವಂತೆ ಎಚ್ಚರಿಕೆ..
  • ಕಬ್ಬು ಬಾಕಿ ಹಣ ಬಿಡುಗಡೆಗೆ ಒತ್ತಾಯ. 
  • ಗ್ರಹ ವಿದ್ಯುತ್ ಬಾಕಿ ಸಂಪೂರ್ಣ ಮನ್ನಾ ಮಾಡುವುದು.
  • ಎಲ್ಲ ಕೃಷಿ ಉತ್ಪನ್ನಗಳನ್ನ ಎಮ್ ಎಸ್ ಪಿ ದರದಲ್ಲಿ ಖರೀದಿಸಬೇಕು.. ಕಟಾವಿಗೆ ಮುಂಚಿತವಾಗಿ ಕೇಂದ್ರ ತೆರೆಯಬೇಕು..
  • ಬಾಕಿ ಇರುವ ವಿಮಾ ಬಿಡುಗಡೆ.
  • ಪ್ರತಿ ಲೀಟರ್ ಹಾಲಿಗೆ 45 ರೂಪಾಯಿನ್ನ ಉತ್ಪಾದಕರಿಗೆ ದೊರೆಯುವಂತೆ ಮಾಡಬೇಕು.‌

ಅನೇಕ ನಿರ್ಣಯಗಳನ್ನ ವೇದಿಕೆ ಮೂಲಕ ಮಾಡ್ಲಾಯ್ತು.. ಮಹಾದಾಯಿ ಕಳಸಾ ಬಂಡೂರಿ ಯೋಜನೆಗೆ ನಿರ್ಣಾಯಕ ಹೋರಾಟ ಮಾಡೋದಾಗಿಯೂ ರೈತ ಮುಖಂಡರು ಪಣ ತೊಟ್ಟಿದ್ದಾರೆ.. ಸಣ್ಣ ಗೊಂದಲದ ಮಧ್ಯೆ ಹೋರಾಟದ ಹೊಸ ಅಧ್ಯಾಯ ಆರಂಭವಾಗಿದೆ.

click me!