Helicopter service : ಇನ್ನು ಬೆಂಗಳೂರಿಂದ ಕೊಡಗಿಗೆ ಒಂದೇ ಗಂಟೇಲಿ ಹೋಗಬಹುದು!

By Kannadaprabha News  |  First Published Dec 7, 2021, 7:26 AM IST
  • ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಹೆಲಿ ಟೂರಿಸಂಗೆ ಚಾಲನೆ ದೊರಕಿದೆ
  •  ಬೆಂಗಳೂರಿನಿಂದ ಕೊಡಗಿಗೆ ಹೆಲಿಕಾಫ್ಟರ್‌ ಮೂಲಕ ಮೂಲಕ ಒಂದೇ ತಾಸಿನಲ್ಲಿ ಕೊಡಗಿಗೆ 

 ಮಡಿಕೇರಿ(ಡಿ.07):  ಕೊಡಗು ಜಿಲ್ಲೆಯಲ್ಲಿ (Kodagu District) ಈಗಾಗಲೇ ಹೆಲಿ ಟೂರಿಸಂಗೆ (Heli Tourism) ಚಾಲನೆ ದೊರಕಿದೆ. ಇದೀಗ ಬೆಂಗಳೂರಿನಿಂದ(Bengaluru) ಕೊಡಗಿಗೆ ಹೆಲಿ ಕಾಫ್ಟರ್‌ ಮೂಲಕ ಮೂಲಕ ಒಂದೇ ತಾಸಿನಲ್ಲಿ ಕೊಡಗಿಗೆ ಆಗಮಿಸಬಹುದಾಗಿದೆ.  ನಾಪೋಕ್ಲು ಸಮೀಪದ ಕಕ್ಕಬ್ಬೆಯ ಖಾಸಗಿ ರೆಸಾರ್ಟ್‌ (Private Resort) ಒಂದರಲ್ಲಿ ಹೆಲಿಪ್ಯಾಡ್‌ (Helipad) ವ್ಯವಸ್ಥೆಯಿದ್ದು, ಈಗಾಗಲೇ ಮೂರು ಬಾರಿ ಬೆಂಗಳೂರಿನಿಂದ ಹೆಲಿಕಾಪ್ಟರ್‌ ಲ್ಯಾಂಡ್‌ ಆಗಿದೆ. ಕೊಡಗಿನಲ್ಲಿ (KOdagu) ಸತತ ಮಳೆಯ ಕಾರಣ ಹೆಲಿಕಾಪ್ಟರ್‌ ಹಾರಾಟಕ್ಕೆ ತೊಡಕುಂಟಾಗಿದೆ. ಬೆಂಗಳೂರಿನಿಂದ ಕೊಡಗಿಗೆ ಹೆಲಿಕಾಪ್ಟರ್‌ ಹಾರಾಟಕ್ಕೆ ಖಾಸಗಿ ಸಂಸ್ಥೆ ಅವಕಾಶ ಕಲ್ಪಿಸಿದೆ.

‘ಬೈ ಎ ಸೀಟ್‌’ ಆಧಾರದ ಮೇಲೆ ಕಾರ್ಯನಿರ್ವಹಿಸುವ ಹೊಸ ಸೇವೆ ಮಂಗಳವಾರ ಮತ್ತು ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಲಭ್ಯವಿರುತ್ತದೆ. ಬ್ಲೇಡ್‌ ನ್ಯೂಯಾರ್ಕ್ ಮತ್ತು ದೆಹಲಿ (Delhi) ಮೂಲದ ಸಾಹಸೋದ್ಯಮ ಬಂಡವಾಳ ಸಂಸ್ಥೆ ಹಂಚ್‌ ವೆಂಚರ್ಸ್‌ ಸಹಯೋಗದೊಂದಿಗೆ ಬ್ಲೇಡ್‌ ಇಂಡಿಯಾ (Blade India), ಅರ್ಬನ್‌ ಏರ್‌ ಮೊಬಿಲಿಟಿ ಪ್ಲಾಟ್‌ ಫಾರಂ ಈ ಹಾರಾಟ ರೂಪಿಸಿದೆ.

Tap to resize

Latest Videos

ಬ್ಲೇಡ್‌ ಇಂಡಿಯಾ ಡಿ. 18 2020 ರಂದು ಬೆಂಗಳೂರು, ಕೊಡಗು, ಕಬಿನಿ, ಮತ್ತು ಹಂಪಿಗಳನ್ನು ಒಳಗೊಂಡ ಖಾಸಗಿ ಚಾರ್ಟರ್‌ ಸೇವೆಗಳನ್ನು ಪ್ರಾರಂಭಿಸಿದೆ.ಬೆಂಗಳೂರಿನಿಂದ ಕೊಡಗಿಗೆ ಏಕಮುಖ ಪ್ರಯಾಣದ ದರವು ಪ್ರತಿ ಆಸನಕ್ಕೆ 16 ಸಾವಿರ ರು. ನಿಗದಿಪಡಿಸಲಾಗಿದೆ. ವಿವರಗಳಿಗೆ www.flyblade.in  ಲಾಗ್‌ ಇನ್‌ ಮಾಡಬಹುದಾಗಿದೆ.

ಕೊಡಗಲ್ಲಿ ಪ್ರವಾಸಿ ತಾಣಗಳ ದರ್ಶನ :    ಪ್ರಕೃತಿಯ ಸೊಬಗು, ಹಸಿರ ರಾಶಿ, ಗಿರಿ ಶಿಖರಗಳು ಅಂದಾಕ್ಷಣ ನೆನಪಾಗೋದು ಕರ್ನಾಟಕದ (Karnataka)  ಕಾಶಿ ,ಪುಟ್ಟ ಜಿಲ್ಲೆ ಕೊಡಗು. ಭೌಗೋಳಿಕ ವಿಸ್ತೀರ್ಣದಲ್ಲಿ ಚಿಕ್ಕ ಜಿಲ್ಲೆಯಾಗಿದ್ರು ತನ್ನ ಸೌಂದರ್ಯ ಸಿರಿಯ ಮೂಲಕ ಗಳಿಸಿರುವ ಖ್ಯಾತಿ ದೊಡ್ಡದು. ಕೊಡಗಿನ ಸೊಬಗನ್ನ ನೋಡುತ್ತಿದ್ರೆ ನಮಗೆ ನಾವೇ ಕಳೆದೋಗ್ಬಿಡ್ತೇವೆ. ಅದರಲ್ಲೂ ಮಂಜು ಮುಸುಕುವ ಸಮಯವಂತೂ ಅದ್ಬುತ. ಇಂಥ ಕೊಡಗನ್ನ ಆಕಾಶದಿಂದ ನೋಡಿದ್ರೆ ಹೇಗಿರುತ್ತೆ? ಹೌದು ಇದೀಗ ಮುಗಿಲೆತ್ತರದಿಂದ ಕೊಡಗಿನ ಸೊಬಗನ್ನ ತೋರಿಸಲಾಗುತ್ತದೆ. ಇಲ್ಲಿ ಹೆಲಿ ಟೂರಿಸಂ(Heli Tourism) ಆರಂಭ ಮಾಡಲಾಗಿದೆ. 

ಹೆಲಿ ಟೂರಿಸಂಗೆ ಪ್ರಸ್ತಾವನೆ :  ಪ್ರವಾಸಿ ಹಡಗುಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಬೇಕಾದರೆ ಮಂಗಳೂರಿನಿಂದ 150 ಕಿ.ಮೀ. ವ್ಯಾಪ್ತಿಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಿಗೆ ಹೆಲಿಕಾಪ್ಟರ್‌ ಸೇವೆ ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ(Karnataka Govt) ಸಲ್ಲಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ. ರಮಣ ತಿಳಿಸಿದ್ದಾರೆ.

ಪ್ರವಾಸಿ ತಾಣಗಳಿಗೆ ಹೆಲಿಕಾಪ್ಟರ್‌ ಸೇವೆಯಿಂದ ಎನ್‌ಎಂಪಿಟಿಗೆ ಹೆಚ್ಚಿನ ಪ್ರವಾಸಿ ಹಡಗುಗಳನ್ನು ನಿರೀಕ್ಷಿಸಬಹುದಾಗಿದೆ. ಈ ಕುರಿತು ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುಳ್ಯದಲ್ಲಿ ಭೀಕರ ಅಪಘಾತ, ಕೊಡಗಿನ ಕುಟುಂಬದ ನಾಲ್ವರ ದುರ್ಮರಣ

ಹಡಗುಗಳ ಮೂಲಕ ಬರುವ ಪ್ರಯಾಣಿಕರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರೇ ಆಗಿರುತ್ತಾರೆ. ಎನ್‌ಎಂಪಿಟಿಯಿಂದ ಪ್ರವಾಸಿ ಸ್ಥಳಗಳಿಗೆ ಹೋಗಿ ವಾಪಸ್‌ ಬರಲು ಒಂದೆರಡು ದಿನಗಳೇ ಬೇಕಾಗುತ್ತವೆ. ಅಷ್ಟುಸಮಯ ಅವರಲ್ಲಿ ಇರುವುದಿಲ್ಲ. ಹೆಲಿ ಟೂರಿಸಂ ಸೇವೆ ಆರಂಭಿಸಿದರೆ ಎಲ್ಲ ಪ್ರವಾಸಿ ತಾಣಗಳಿಗೆ ತೆರಳಿ ಇಲ್ಲಿನ ವೈವಿಧ್ಯತೆಗಳ ಪರಿಚಯ ಮಾಡಿಸಬಹುದು. ಇದರಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ ಎಂದರು.

ಕರಿದ ಅಡುಗೆ ಎಣ್ಣೆ ಕೊಡಿ, ಬಯೋ ಡೀಸೆಲ್‌ ಒಯ್ಯಿರಿ!

ಕಳೆದ ವರ್ಷ ಒಟ್ಟು 26 ಪ್ರವಾಸಿ ಹಡಗುಗಳು ಎನ್‌ಎಂಪಿಟಿಗೆ ಬಂದಿದ್ದವು. ಈ ಬಾರಿ 23 ಹಡಗುಗಳು ತಮ್ಮ ಭೇಟಿಯನ್ನು ಖಚಿತಪಡಿಸಿವೆ. ವರ್ಷದ ಮೊದಲ ಕ್ರೂಸ್‌ ಹಡಗು ನ.4ರಂದು ಬಂದರಿಗೆ ಬರಲಿದ್ದು, ಈ ವರ್ಷ 26ಕ್ಕೂ ಹೆಚ್ಚಿನ ಪ್ರವಾಸಿ ಹಡಗುಗಳನ್ನು ನಿರೀಕ್ಷೆ ಮಾಡಲಾಗಿದೆ ಎಂದು ಎ.ವಿ. ರಮಣ ತಿಳಿಸಿದರು.

ಪ್ರವಾಸಿ ಸಂಚಾರಕ್ಕೆ ವಿಶೇಷ ವ್ಯವಸ್ಥೆ: ಎನ್‌ಎಂಪಿಟಿಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಬಂದರಿನಲ್ಲಿ ಪ್ರವಾಸಿಗರ ಸಂಚಾರಕ್ಕೆ ವಿಶೇಷವಾದ ಗೇಟ್‌ ಮತ್ತು ರಸ್ತೆ ನಿರ್ಮಿಸುವ ಯೋಜನೆಯಿದೆ. ಪ್ರವಾಸಿಗರಿಗೆ ಪ್ರೀಪೇಯ್ಡ್‌ ಟ್ಯಾಕ್ಸಿ ಕೌಂಟರ್‌ ತೆರೆಯಲಾಗುವುದು. ನ.4ರಂದು ಮೊದಲ ಪ್ರವಾಸಿ ಹಡಗು ಬಂದರಿಗೆ ಬರುವಾಗ, ಪ್ರವಾಸಿಗರಿಗೆ ಉತ್ತಮ ಭಾವನೆ ಮೂಡಿಸಲು ಬಂದರಿನ ಮಲ್ಯ ಗೇಟಿನ ದಟ್ಟಣೆಯನ್ನು ಇತರ ಗೇಟ್‌ಗಳಿಗೆ ತಿರುಗಿಸಲಾಗುತ್ತದೆ ಎಂದರು.

ಡ್ರೆಜ್ಜಿಂಗ್‌ ಸಮೀಕ್ಷೆ ಪೂರ್ಣ:  ಬಂದರಿನಲ್ಲಿ ಹೂಳೆತ್ತುವ (ಡ್ರೆಜ್ಜಿಂಗ್‌) ಸಮೀಕ್ಷೆ ಬಹುಪಾಲು ಪೂರ್ಣಗೊಂಡಿದೆ. ಡ್ರೆಜ್ಜರ್‌ ವಿಶಾಖಪಟ್ಟಣಂನಿಂದ ಮಂಗಳೂರಿಗೆ ಹೊರಟಿದ್ದು, ಅಕ್ಟೋಬರ್‌ ಮಧ್ಯ ಭಾಗದಿಂದ ಹೂಳೆತ್ತುವ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು.

ಶೇ.11 ಸರಕು ನಿರ್ವಹಣೆ ಕುಸಿತ :  ಮಾರ್ಚ್ ಏಪ್ರಿಲ್‌ ತಿಂಗಳಲ್ಲಿ ಮಂಗಳೂರಿನಲ್ಲಿ ನೀರಿನ ಕೊರತೆಯಿಂದಾಗಿ ಎಂಆರ್‌ಪಿಎಲ್‌ ಭಾಗಶಃ ಸ್ಥಗಿತಗೊಂಡಿದ್ದರಿಂದ ಎನ್‌ಎಂಪಿಟಿಯ ಸರಕು ನಿರ್ವಹಣೆ ಕಳೆದ ವರ್ಷಕ್ಕಿಂತ ಶೇ.11ರಷ್ಟುಕುಸಿತ ಕಂಡಿದೆ. ಭೂಕುಸಿತ ಮತ್ತು ಪ್ರತಿಕೂಲ ಹವಾಮಾನವು ಒಳನಾಡಿನಿಂದ ರಸ್ತೆ ಮೂಲಕ ಆಗಮಿಸುವ ಸರಕುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದೂ ಇದಕ್ಕೆ ಕಾರಣವಾಗಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ವರ್ಷದ ಗುರಿ ಸಂಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಎ.ವಿ. ರಮಣ ತಿಳಿಸಿದರು.

ಸ್ವಚ್ಛತಾ ಕಾರ್ಯ :  ಮಹಾತ್ಮಾ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರಧಾನಮಂತ್ರಿ ಕರೆಯ ಮೇರೆಗೆ ಎನ್‌ಎಂಪಿಟಿ ವತಿಯಿಂದ ವಿವಿಧೆಡೆ ಸ್ವಚ್ಛತಾ ಶ್ರಮದಾನಗಳು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅ.2ರಂದು ಈ ಸ್ವಚ್ಛತಾ ಪಖ್ವಾಡಾ ಸಮಾರೋಪ ನಡೆಯಲಿದೆ. ನಂತರ ಪಣಂಬೂರು ಬೀಚ್‌ನಲ್ಲಿ ಬೀಚ್‌ ಕ್ಲೀನಿಂಗ್‌ ನಡೆಯಲಿದೆ. ಸ್ವಚ್ಛತಾ ಕಾರ್ಯಕ್ರಮ ಇಲ್ಲಿಗೇ ನಿಲ್ಲುವುದಿಲ್ಲ. ಪ್ರತಿ ಹದಿನೈದು ದಿನಗಳಿಗೊಮ್ಮೆ ಅಭಿಯಾನ ಮುಂದುವರಿಯಲಿದೆ ಎಂದು ಹೇಳಿದರು.

click me!