Heavy Rain: ಕೋಲಾರದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಳೆರಾಯ

By Govindaraj S  |  First Published Sep 7, 2022, 7:56 AM IST

ಹಲವಾರು ದಶಕಗಳಿಂದ ಕೋಲಾರ ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಅಂತ ಕರೆಯಲಾಗ್ತಿತ್ತು. ಜಿಲ್ಲೆಯ ಅಂತರ್ಜಲ ಮಟ್ಟ ಸಹ ಪಾತಾಳಕ್ಕೆ ಕುಸಿಯುವ ಸಾಕಷ್ಟು ಆತಂಕ ಸೃಷ್ಟಿ ಮಾಡಿತ್ತು. 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಸೆ.07): ಹಲವಾರು ದಶಕಗಳಿಂದ ಕೋಲಾರ ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಅಂತ ಕರೆಯಲಾಗ್ತಿತ್ತು. ಜಿಲ್ಲೆಯ ಅಂತರ್ಜಲ ಮಟ್ಟ ಸಹ ಪಾತಾಳಕ್ಕೆ ಕುಸಿಯುವ ಸಾಕಷ್ಟು ಆತಂಕ ಸೃಷ್ಟಿ ಮಾಡಿತ್ತು. ಕೆರೆಗಳ ನಾಡು ಅಂತಾನೂ ಕರೆಯಲ್ಪಟ್ಟಿದ್ದ ಕೋಲಾರ ಜಿಲ್ಲೆಯ ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿ, ದಶಕಗಳ ಕಾಲ ಖಾಲಿ ಮೈದಾನದಂತ್ತಾಗಿತ್ತು. ಮಳೆಗಾಗಿ ಜಿಲ್ಲೆಯ ಜನರು, ರೈತರು ಅದೆಷ್ಟು ಪೂಜೆ ಮಾಡಿದ್ರು ಸಹ ಈ ಫಲಿಸಿರಲಿಲ್ಲ. ಆದ್ರೀಗ ಜಿಲ್ಲೆಯ ಇಡೀ ಚಿತ್ರಣ ಸಂಪೂರ್ಣವಾಗಿ ಬದಲಾಗಿದ್ದು, ಸಾಕು ಸಾಕು ಅನ್ನುವಷ್ಟು ಮಳೆ ಸುರಿಯುವ ಮೂಲಕ ರೈತರ ಹಾಗೂ ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. 

Latest Videos

undefined

ಹೌದು! ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಈ ವರ್ಷ ದಾಖಲೆ ಪ್ರಮಾಣದಲ್ಲಿ  ವರುಣದೇವ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಬಿಡುವು ನೀಡದೆ ಸುರಿದ ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇತ್ತ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿ, ಕೋಡಿ ಹರಿಯುತ್ತಿದ್ದು ಅಕ್ಕಪಕ್ಕದ ಜಮೀನು ಹಾಗೂ ರಸ್ತೆಗಳ ಮೇಲೆ ಹರಿದು ರೈತರು ಹಾಗೂ ವಾಹನ ಸವಾರರನ್ನು ಕಷ್ಟಕ್ಕೆ ದೂಡಿದೆ. ರೈತರ ಹತ್ತಾರು ಎಕರೆ ಬೀನ್ಸ್, ಬಜ್ಜಿ ಮೆಣಸು, ಟೊಮೆಟೊ ತೋಟಗಳಲ್ಲಿ ಬೆಳೆನಾಶವಾಗಿದೆ.

Chikkaballapura News: ಜಿಲ್ಲೆಯಲ್ಲಿ ಬಡವರಿಗೆ ಭೂಮಿ ಹಂಚಿಕೆಗೆ ಮೀನಮೇಷ!

ಕೆಸಿ ವ್ಯಾಲಿ ನೀರಿನ ಕಾಲುವೆಗೆ ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ರೈತರು ಮನವಿ ಮಾಡಿದ್ರು ಅಧಿಕಾರಿಗಳು ಸ್ಪಂದಿಸದೇ, ಇದೀಗ ಬೆಳೆದ ಫಸಲು ನೀರು ಪಾಲಾಗಿದೆ. ಜಿಲ್ಲಾಧಿಕಾರಿ ವೆಂಕಟರಾಜ ಮಾಹಿತಿಯಂತೆ 300 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಅದರಲ್ಲಿ 128 ಹೆಕ್ಟೇರ್ ಟೊಮೆಟೊ, 50 ಹೆಕ್ಟೇರ್ ರಾಗಿ, 24 ಹೆಕ್ಟೇರ್ ವಿವಿಧ ಹೂ ತೋಟದ ಬೆಳೆ ಹಾನಿಯಾಗಿದೆ. ಉಳಿದಂತೆ 70 ಹೆಕ್ಟೇರ್ ಪ್ರದೇಶದ ಕ್ಯಾರೆಟ್, ಬೀನ್ಸ್, ಎಲೆಕೋಸು, ಬೀಟ್ರೋಟ್ ಬೆಳೆ ನಾಶವಾಗಿದೆ. ಅಂದಾಜು 2 ಕೋಟಿಗೂ ಹೆಚ್ಚಿನ ಮೌಲ್ಯ ರಷ್ಟು ಬೆಳೆಹಾನಿಯಾಗಿದೆ.

ತರಕಾರಿ ಬೆಳೆಗಳ ಜೊತೆ ಹೂವಿನ ಬೆಳೆ ಸಹ ನೆಲಕಚ್ಚಿದ್ದು,ಬೆಲೆ ಇದ್ರು ಸಹ ಉತ್ತಮ ಗುಣಮಟ್ಟದ ಹೂ ಬೆಳೆ ಇಲ್ಲದೆ ರೈತರೇ ತಮ್ಮ ಕೈಯಾರೆ ಕಿತ್ತಾಕುತ್ತಿದ್ದಾರೆ. ಈಗಾಗಿ ಕೋಲಾರದ ಹೂವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿಯಾಗಿತ್ತು. ಕನಕಾಂಬರ, ಮಲ್ಲಿಗೆ ಹೂವು ಒಂದೂವರೆ ಸಾವಿರ ರೂಪಾಯಿ ಗಡಿದಾಟಿತ್ತು. ಸೇವಂತಿಗೆ, ರೋಜ್ ಹೂಗಳು ಸಹ ಬೆಲೆ ಏರಿಕೆಯಾಗಿತ್ತು ಆದರೇ ಹೂವಿನಲ್ಲಿ ತೇವಾಂಶ ಹೆಚ್ಚಾಗಿ ಹೂವಿಗೆ ಬೇಡಿಕೆ ಕುಸಿತವಾಗಿದೆ. 

ಸಂವಿಧಾನ ಆಶಯಗಳನ್ನು ಇನ್ನೂ ಈಡೇರಿಸಿಲ್ಲ:ಡಾ. ಪರಮೇಶ್ವರ್‌

ಹಾಗಾಗಿ ಹಬ್ಬದ ಸಂದರ್ಭದಲ್ಲೂ ಸಹ ರೈತರಿಗೆ ಹಾಕಿರುವ ಬಂಡವಾಳ ಸಹ ಸಿಕ್ಕಿಲ್ಲ.ಇನ್ನು ಜಿಲ್ಲೆಯಲ್ಲಿ ನೂರಾರು ಕಿ.ಮಿನಷ್ಟು ರಸ್ತೆಗಳು ಕಿತ್ತೊಗಿದ್ದು ವಾಹನ ಸವಾರರು ಇನ್ನಿಲ್ಲದ ಪಡಬಾರದ ಕಷ್ಟ ಪಡ್ತಿದ್ದಾರೆ. ಹಳ್ಳಗಳಲ್ಲಿ ಬಿದ್ದು ಅದೆಷ್ಟೋ ವಾಹನ ಸವಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟಾರೆ ಈ ಬಾರಿ ಹಿಂದೆಂದೂ ಕಾಣದಂತೆ ರಣ ಭೀಕರ ಮಳೆ ಕೋಲಾರ ಜಿಲ್ಲೆಯಲ್ಲಿ ಸುರಿದಿದ್ದು, ಒಂದೂ ಕಡೆ ಜಿಲ್ಲೆಯ ಕೆರೆಗಳು ಭರ್ತಿಯಾಗಿ ಸಂತಸ ತಂದಿದ್ರೆ, ಮತ್ತೊಂದು ಕಡೆ ಮಳೆಯಿಂದಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬೆಳೆ ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟವಾಗಿದೆ.

click me!