ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಉತ್ತರ ಕನ್ನಡದಲ್ಲಿಯೂ ಕೂಡ ವರುಣವ ಅಬ್ಬರ ಜೋರಾಗಿದ್ದು, ಗುಡ್ಡವೊಂದು ಕುಸಿತು ಸಂಚಾರ ಸ್ಥಗಿತವಾಗಿದೆ.
ಕಾರವಾರ [ಜು.11] : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಲೆನಾಡು ಕರಾವಳಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಯಿಂದ ಯಲ್ಲಾಪುರ ಹಾಗೂ ಅಂಕೋಲ ಮಾರ್ಗಮಧ್ಯೆ ಇರುವ ಗುಡ್ಡ ಕುಸಿದಿದು ಸಂಪರ್ಕ ಕಡಿತವಾಗಿದೆ.
undefined
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗುಡ್ಡ ಕುಸಿತವಾಗಿದೆ. ವಾಹನವೊಂದರ ಮೇಲೆ ಮಣ್ಣು ಕುಸಿದಿದ್ದು, ಅಂಕೋಲಾ - ಯಲ್ಲಾ ಪುರ ನಡುವೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಸ್ಥಳಕ್ಕೆ ಅಂಕೋಲಾ ಮತ್ತು ಯಲ್ಲಾಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.