ಭಾರೀ ಮಳೆ : ಮುನಿದ ಮಾರ್ಕಂಡೇಯ!

By Web DeskFirst Published Aug 8, 2019, 10:44 AM IST
Highlights

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತರಿವ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದೆ. 

ಬೆಳಗಾವಿ (ಆ.08): ಪಶ್ಚಿಮ ಘಟ್ಟದಲ್ಲಿ ಹೆಚ್ಚುತ್ತಿರುವ ಮಳೆಯಿಂದ ಮಾರ್ಕಂಡೇಯ ನದಿ ನೀರಿನ ಹರಿವು ಹೆಚ್ಚುತ್ತಿದೆ.

ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಮಾರ್ಕಂಡೇಯ ನದಿಗೆ ಹರಿಬಿಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಜಲಾಶಯದ ಕೆಲಭಾಗದ ಉಚಗಾಂವ, ಹಿಂಡಲಗಾ, ಅಂಬೇವಾಡಿ, ಕಡೋಲಿ, ಕಾಕತಿ, ಜಾಫರವಾಡಿ, ಗೌಂಡವಾಡ, ಬಿ.ಕೆ. ಕಂಗ್ರಾಳಿ ಮತ್ತು ಹೊನಗಾ ಗ್ರಾಮದ ಜಮೀನುಗಳನ್ನು ಈಗಾಗಲೇ ಬೃಹತ್‌ ಪ್ರಮಾಣದಲ್ಲಿ ಆವರಿಸಿಕೊಂಡಿದೆ. 

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಲ್ಲಿ ಅಂಬೇವಾಡಿ ಹಾಗೂ ಉಚಗಾಂವ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ನದಿ ದಡದ ಹತ್ತಿರ ಹಾಗೂ ತೆಗ್ಗು ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಸ್ಥರಿಗೆ ಎತ್ತರದ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. 

ಬೆಳಗಾವಿ ತಾಲೂಕಿನ ಬೆನಕಳ್ಳಿ ಸೇತುವೆ ಸಂಪೂರ್ಣ ಜಲಾವೃತವಾಗಿದ್ದರಿಂದ ರಾಕಸಕೊಪ್ಪ ಹಾಗೂ ಬೆಳಗುಂದಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿರುವುದರಿಂದ ನೀರು ರಸ್ತೆಯನ್ನೇ ಆವರಿಸಿಕೊಂಡಿದೆ.

click me!