ಐವರು ಸಚಿವರು ಲೆಕ್ಕವನ್ನೆಲ್ಲಾ ಕೊಟ್ಟಿದ್ದಾರೆ: ಸಚಿವ ಶ್ರೀರಾಮುಲು| ಪ್ರತಿಪಕ್ಷಗಳ ಟೀಕೆಗೆ ನಾನು ಮೌನವಾಗಿಲ್ಲ| ಪಂಚ ಸಚಿವರು ಉತ್ತರ ನೀಡಿದ್ದಾರೆ. ನಾನು ಉತ್ತರ ನೀಡಿಲ್ಲ ಅಂತ ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದರ್ಥವಲ್ಲ| ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ನನ್ನನ್ನು ಪಕ್ಷದಲ್ಲಿ ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬುದೆಲ್ಲಾ ಸುಳ್ಳು|
ಬಳ್ಳಾರಿ(ಜು.26): ರಾಜ್ಯ ಸರ್ಕಾರ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಖರೀದಿ ಮಾಡಿರುವ ಪ್ರತಿಯೊಂದು ಉಪಕರಣಗಳ ಲೆಕ್ಕಪತ್ರವನ್ನು ಇಟ್ಟಿದೆ. ನಮ್ಮ ಬಳಿ ಪೈಸಾ ಪೈಸಾ ಲೆಕ್ಕವಿದೆ. ಖರೀದಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿದ್ದು, ಈಗಾಗಲೇ ಸೂಕ್ತ ಉತ್ತರ ನೀಡಿದ್ದೇವೆ. ಒಳ್ಳೆಯ ಕೆಲಸಗಳು ಮಾಡುವಾಗ ವಿಘ್ನಗಳು, ಟೀಕೆಗಳು ಬರುವುದು ಸಹಜ. ಕೊರೋನಾ ವೈರಸ್ ಹಬ್ಬುತ್ತಿರುವ ಇಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ಆಡಳಿತಾರೂಢ ಸರ್ಕಾರದ ಜತೆ ಇದ್ದು ಸಹಕರಿಸಬೇಕಿತ್ತು. ಆದರೆ, ಅವರು ವಿನಾಕಾರಣ ಆರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಈ ರೀತಿಯಿಲ್ಲ. ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಆಡಳಿತ ಪಕ್ಷದ ಜತೆ ಪ್ರತಿಪಕ್ಷಗಳು ಸಹಕರಿಸುತ್ತಲೇ ಇದ್ದಾರೆ. ನಮ್ಮ ರಾಜ್ಯದಲ್ಲಿ ಮಾತ್ರ ಹೀಗಿದೆ ಎಂದರು.
ಬಳ್ಳಾರಿ: ಕೊರೋನಾ ಸೋಂಕಿತ ಮೂವರಿಗೆ ಹೆರಿಗೆ, ತಾಯಿ, ಮಕ್ಕಳು ಸುರಕ್ಷಿತ
ಪ್ರತಿಪಕ್ಷಗಳ ಟೀಕೆಗೆ ನಾನು ಮೌನವಾಗಿಲ್ಲ. ಪಂಚ ಸಚಿವರು ಉತ್ತರ ನೀಡಿದ್ದಾರೆ. ನಾನು ಉತ್ತರ ನೀಡಿಲ್ಲ ಅಂತ ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದರ್ಥವಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ನನ್ನನ್ನು ಪಕ್ಷದಲ್ಲಿ ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬುದೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದರು.