ಮೇಲಧಿಕಾರಿ ಕಿರುಕುಳ; ಆರೋಗ್ಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

By Kannadaprabha NewsFirst Published Sep 21, 2021, 8:52 AM IST
Highlights
  • ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಶುಶ್ರೂಷಕಿಯೊಬ್ಬರು ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಯತ್ನ
  • ಆರೋಗ್ಯ ಸಿಬ್ಬಂದಿ ಸೋಮವಾರ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ (.21): ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಶುಶ್ರೂಷಕಿಯೊಬ್ಬರು ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಆರೋಗ್ಯ ಸಿಬ್ಬಂದಿ ಸೋಮವಾರ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ತಾಲೂಕಿನ ನೂಲ್ವಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಐ. ಸೂಡಿ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ. ವಿಷ ಸೇವನೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಸೂಡಿ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಚೇತರಿಸಿಕೊಂಡಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಆರ್‌.ಎಸ್‌. ಹಿತ್ತಲಮನಿ ತಿಳಿಸಿದ್ದಾರೆ. 

ಶಾಲಾ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೋ.. ಮಕ್ಕಳು-ಪೋಷಕರು ಕಂಗಾಲು!

ನೂಲ್ವಿ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಗೀತಾ ನಾಯಕ್‌ ಅವರು ಕಿರುಕುಳ, ಮಾನಸಿಕ ಹಿಂಸೆ ಕೊಡುತ್ತಿದ್ದರು ಎಂದು ಸೂಡಿ ಡೆತ್‌ನೋಟ್‌ದಲ್ಲಿ ಬರೆದಿಟ್ಟಿದ್ದಾರೆ. ವೈದ್ಯಾಧಿಕಾರಿ ಕಿರುಕುಳ, ಮಾನಸಿಕ ಹಿಂಸೆ ಕುರಿತು ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೂ ಯಾವುದೇ ಕ್ರಮವಾಗಿರಲಿಲ್ಲ. ಬದಲಾಗಿ ಕಿರುಕುಳ ಮತ್ತಷ್ಟುಹೆಚ್ಚಾಯ್ತು. ಇನ್ನು ಮುಂದೆ ನನಗೆ ನ್ಯಾಯ ಸಿಗುವುದಿಲ್ಲ ಎಂದು ಗೊತ್ತಾಗಿ ಆತ್ಮಹತ್ಯೆ ದಾರಿ ಹಿಡಿದಿರುವುದಾಗಿ ಸೂಡಿ ಬರೆದುಕೊಂಡಿದ್ದರು.

click me!