
ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಬೀದಿ-ಬದಿ ವ್ಯಾಪಾರಿ ಮೇಲೆ ಮನಸ್ಸೊಯಿಚ್ಚೆ ಹಲ್ಲೆಮಾಡಿ ಕೊಲೆ ಮಾಡಿರುವ ಘಟನೆ ನಿನ್ನೆ ಸಂಜೆ 7ಕ್ಕೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಹಲ್ಲೆಯ ತೀವ್ರತೆಗೆ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆಯಾದ ಕೆಲವೇ ಗಂಟೆಯಲ್ಲಿ ಸ್ಥಳಕ್ಕೆ ದಾವಿಸಿದ ಪೊಲೀಸ್‌ರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಮೊಟ್ಟೆ ತರಲು ಬಂದ ವಾಸಿಂ ಎಂಬ ಆರೋಪಿ 100 ರೂ., ನೀಡಿ 5 ಮೊಟ್ಟೆ ಕೇಳಿದ್ದಾನೆ. ನಂತರ 100 ಅಲ್ಲಾ 500 ಕೊಟ್ಟಿದ್ದೇನೆ ಎಂದು ಜಗಳಕ್ಕಿಳಿದಿದ್ದಾನೆ. ಅವನು ಹಾಗೂ ಅವನ ಜತೆ ಇದ್ದ ಮೂವರು ಸೇರಿ ಎದೆಗೆ ಕಾಲಿನಿಂದ ಒದ್ದು ಹಲ್ಲೆಗೈದ ನಾಲ್ವರು ಯುವಕರು ಕೊಲೆಗೈದಿದ್ದಾರೆ. ಶಿವಾಜಿ ರಾವ್ ಬೈರೋಜಿ (55) ಮೃತ ವ್ಯಕ್ತಿ.
ಈ ಹಿಂದೆ ಹೇಳಿಂದಂತೆ ಮೊಟ್ಟೆ ಖರೀದಿಸಲು ಅಂಗಡಿಗೆ ನಾಲ್ವರು ಮುಸ್ಲಿಂ ಯುವಕರು ಬಂದಿದ್ದಾರೆ. ನಾವು ಕೊಟ್ಟಿದ್ದು ₹500 ಎಂದು ವಾಸೀಮ್ ಜಗಳ ತೆಗೆದಿದ್ದಾನೆ. ಇಲ್ಲ ಕೊಟ್ಟಿದ್ದು ₹100 ಎಂದಿದ್ದಕ್ಕೆ ಮೃತ ಶಿವಾಜಿರಾವ್ ಮಗನ ಜೊತೆ ಗಲಾಟೆ ಮಾಡಿದ್ದರು. ಮಗನ ಜೊತೆ ಗಲಾಟೆ ಬಿಡಿಸಲು ಬಂದಾಗ ತಂದೆ ಮೇಲೆ ಆ ಯುವಕರು ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ವಾಸೀಮ್ ಮುಲ್ಲಾ,ಸರ್ಪರಾಜ್ ಮುಲ್ಲಾ,ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ಆರೋಪಿಗಳಾಗಿದ್ದಾರೆ.
ಶಿವಾಜಿರಾವ್ ಮೃತದೇಹವನ್ನು ಮರೋಣತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆ ಬಗ್ಗೆ ಶಿವಾಜಿರಾವ್ ಮಗ ಭರತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಐಜಿ ರವಿಕಾಂತೇಗೌಡ ಹಾಗೂ ಎಸ್ಪಿ ಯಶೋದಾ ವಂಟಗೋಡಿ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಸಧ್ಯ ಈ ಘಟನೆಯಿಂದಾಗಿ ರಟ್ಟಿಹಳ್ಳಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿದೆ. ಸಧ್ಯಕ್ಕೆ ರಟ್ಟಿಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.
ಘಟನೆ ಕುರಿತು ಮಾತನಾಡಿದ ಹಾವೇರಿ ಎಸ್ ಪಿ ಯಶೋಧಾ ವಂಟಗೋಡಿ, ಈ ಪ್ರಕರಣದಲ್ಲಿ ನಾಲ್ವರ ಮೇಲೆ ಕಂಪ್ಲೇಂಟ್ ಆಗಿತ್ತು. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾ. ಅವನನ್ನೂ ಕೂಡಾ ಬಂಧಿಸುತ್ತೇವೆ ಎಂದು ಖಡಕ್ ಮಾತನ್ನು ಆಡಿದ್ದಾರೆ. ಆರೋಪಿಗಳಾದ ವಾಸಿಂ, ಸರ್ಪರಾಜ್, ಸಾಧಿಕ್ ಬಂಧಿಸಲಾಗಿದೆ. ಸಿರಾಜ್ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಮೃತ ಶಿವಾಜಿ ರಾವ್ ಗೂಡಂಗಡಿ ಇಟ್ಟುಕೊಂಡು ಜೀವನ ಸಾಗಿಸಿದ್ದರು.ಈ ವೇಳೆ ಗಲಾಟೆ ಆಗಿ ತಳ್ಳಾಟ ಆಗಿದೆ. ಈ ಹಿನ್ನೆಲೆಯಲ್ಲಿ ಗಲಾಟೆ ವೇಳೆ ಶಿವಾಜಿ ರಾವ್ ತಳ್ಳಿದ್ದಕ್ಕೆ ಕೆಳಗೆ ಬಿದ್ದಿದಾರೆ. ಶಿವಾಜಿ ರಾವ್ ಸ್ಥಳದಲ್ಲೇ ಅನ್ ಕಾನ್ಸಿಯಸ್ ಆಗಿದ್ದಾರೆ. ಮುಂದೆ ಆಸ್ಪತ್ರೆಗೆ ದಾಖಲಿಸಿದಾಗ ಅವರು ಮೃತ ಪಟ್ಟಿರೋದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಲ್ವರು ಆರೋಪಿಗಳು ಸ್ವಂತ ಅಣ್ಣ ತಮ್ಮಂದಿರಾಗಿದ್ದಾರೆ. ಆರೋಪಿಗಳ ಅಪ್ಪ ಹಾಗೂ ಮೃತ ಪಟ್ಟ ಶಿವಾಜಿ ರಾವ್ ಇಬ್ಬರೂ ಪರಸ್ಪರ ಗೊತ್ತಿರೋರೇ ಆಗಿದ್ದಾರೆ. ತಳ್ಳಾಟದಲ್ಲಿ ಈ ತರ ಡೆತ್ ಆಗಿದೆ, ಇದು ಕಮ್ಯುನಲ್ ಅಟೆಂಪ್ಟ್ ಅಲ್ಲ ಎನ್ನುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಮೃತ ಶಿವಾಜಿ ರಾವ್ ದೇಹದ ಮೇಲೆ ಮೇಲ್ಮೋಟಕ್ಕೆ ಎಲ್ಲೂ ಗಾಯಗಳಿಲ್ಲ ಅಂತ ಮಾಹಿತಿ ಇದೆ. ಪಿಎಂ ವರದಿ ಬಂದ ಮೇಲೆ ಎನಾಗಿದೆ ಎಂದು ಗೊತ್ತಾಗಲಿದೆ. ಪೊಲೀಸ್‌ರು ತನಿಖೆ ಮುಂದುವರೆಸಿದ್ದಾರೆ.