ಅಮ್ಮಾ, ಚಿನ್ನು ಕ್ಷಮಿಸಿ: ಹಾಸನದ ಯೋಧ ಹರಿಯಾಣದಲ್ಲಿ ಆತ್ಮಹತ್ಯೆ!

Published : Jun 09, 2019, 03:42 PM IST
ಅಮ್ಮಾ, ಚಿನ್ನು ಕ್ಷಮಿಸಿ: ಹಾಸನದ ಯೋಧ ಹರಿಯಾಣದಲ್ಲಿ ಆತ್ಮಹತ್ಯೆ!

ಸಾರಾಂಶ

ಅಮ್ಮಾ, ಚಿನ್ನೂ ನಾನು ನಿಮಗೇನಾದರೂ ನೋವು ಉಂಟು ಮಾಡಿದ್ದಾದರೆ ದಯವಿಟ್ಟು ಕ್ಷಮಿಸಿ! ಲವ್ ಯು ಅಮ್ಮಾ, ಲವ್ ಯು ಚಿನ್ನೂ. ಟೇಕ್ ಕೇರ್, ಐ ವಿಲ್ ಬಿ ಸೂನ್... ಹೀಗೆ ಡೆತ್ ನೋಟ್ ಬರೆದಿಟ್ಟು ಹಾಸನ ಮೂಲದ ಯೋಧ ಹರಿಯಾಣದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.

ಚಂಡೀಗಢ/ಹಾಸನ, (ಜೂನ್.09): ಹಾಸನದ ಆಲೂರು ತಾಲ್ಲೂಕಿನ ಕಾದಾಳು ಗ್ರಾಮದ ಮೋಹನ್‍ಕುಮಾರ್ (28) ಹರಿಯಾಣದ ಶಿರಸಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೋಹನ್‍ ಕುಮಾರ್ ಕಳೆದ 8 ವರ್ಷಗಳಿಂದ ಹರಿಯಾಣದ ಶಿರಸಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 

ಶುಕ್ರವಾರ ಡೆತ್ ನೋಟ್ ಬರೆದಿಟಿದ್ದ ಯೋಧ, ಶೌಚಗೃಹದಲ್ಲಿ ತನ್ನ ರೈಫಲ್ ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಧನ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.  

ಯೋಧನಿಗೆ ಕಳೆದ 3 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಶನಿವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು,  ಇಂದು (ಭಾನುವಾರ) ಸ್ವಗ್ರಾಮಕ್ಕೆ ಮೃತದೇಹ ಆಗಮಿಸಲಿದೆ. 

ಮೋಹನ್‍ ಕುಮಾರ್ ಸಾವಿನ ವಿಷಯ ಗೊತ್ತಾಗುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!