Hampi Utsav 2023: ಜ.27ರಿಂದ 3 ದಿನ ಅದ್ಧೂರಿ ‘ಹಂಪಿ ಉತ್ಸವ’, ಸಿಎಂ ಬೊಮ್ಮಾಯಿ ಚಾಲನೆ

By Kannadaprabha News  |  First Published Dec 29, 2022, 6:30 AM IST

ಕೋವಿಡ್‌ ನಂತರ ಹಾಗೂ ವಿಜಯನಗರ ಜಿಲ್ಲೆ ರಚನೆ ನಂತರ ನಡೆಸುತ್ತಿರುವ ಉತ್ಸವ ಇದಾಗಿದೆ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ


ಸುವರ್ಣಸೌಧ(ಡಿ.29):  ನಾಡಿನ ಹೆಮ್ಮೆಯ ‘ಹಂಪಿ ಉತ್ಸವ’ ಬರುವ ಜನವರಿ 27ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬುಧವಾರ ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಹಂಪಿ ಉತ್ಸವದ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಜ. 27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಉದ್ಘಾಟಿಸಲಿದ್ದಾರೆ. ಕೋವಿಡ್‌ ನಂತರ ಹಾಗೂ ವಿಜಯನಗರ ಜಿಲ್ಲೆ ರಚನೆ ನಂತರ ನಡೆಸುತ್ತಿರುವ ಉತ್ಸವ ಇದಾಗಿದೆ ಎಂದರು.

ದಸರಾ ಮಾದರಿ ದೀಪಾಲಂಕಾರ:

Tap to resize

Latest Videos

undefined

ದಸರಾ ಮಾದರಿಯಲ್ಲಿ ಹಂಪಿ ಹಾಗೂ ಹೊಸಪೇಟೆಯಲ್ಲಿ ದೀಪದ ಆಲಂಕಾರ ಮಾಡಲಾಗುವುದು. ಹೊಸದಾಗಿ ದೀಪಾಲಂಕಾರ ಸಮಿತಿಯನ್ನು ರಚನೆ ಮಾಡಲಾಗಿದ್ದು ಸಮಿತಿಯ ಸದಸ್ಯರಿಗೆ ಹೊಸಪೇಟೆ, ಕಮಲಾಪುರ, ಹಂಪಿಯ ಮುಖ್ಯ ರಸ್ತೆ, ಪ್ರಮುಖ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲು ಯೋಜನೆ ತಯಾರಿಸಲು ಸೂಚಿಸಲಾಗಿದೆ ಎಂದರು.

KARNATAKA WINTER SESSION: ಒತ್ತುವರಿ ಸರ್ಕಾರಿ ಭೂಮಿ ಗುತ್ತಿಗೆಗೆ: ಮಸೂದೆಗೆ ಅಸ್ತು

ಸ್ಥಳೀಯ ಕಲಾತಂಡಗಳಿಗೆ ಹೆಚ್ಚಿನ ಆದ್ಯತೆಗೆ:

ಹಂಪಿ ಉತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿ ಸುಮಾರು 1036 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಗಿದ್ದು ಇದುವರೆಗೂ ಅವಕಾಶ ಸಿಗದ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.

ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾತಂಡಗಳಿಂದ ಹೊಸಪೇಟೆ ನಗರದಲ್ಲಿ ವಸಂತವೈಭವ ಮೆರವಣಿಗೆ ಕಾರ್ಯಕ್ರಮ, ತುಂಗಾನದಿಯ ತಟದಲ್ಲಿ ತುಂಗಾರತಿ, ವಿಜಯನಗರ ವೈಭವದ ಕುರಿತು ಸುಮಾರು 300 ಕಲಾವಿದರನ್ನೊಳಗೊಂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಹಂಪಿ ಬೈ ಸ್ಕೈ, ವಿಭಿನ್ನ ರೀತಿಯ ಫಲಪುಷ್ಪ ಪ್ರದರ್ಶನ, ಅಶ್ವದಳ ಪ್ರದರ್ಶನ, ಕುಸ್ತಿ ಹಾಗೂ ಇತರೆ ಗ್ರಾಮೀಣ ಕ್ರೀಡೆಗಳ ಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದರು.

click me!