ಕೊರೋನಾ ಕಾಟ: ಅತಿಥಿ ಶಿಕ್ಷಕರ ಸ್ಥಿತಿ ಶೋಚನೀಯ, ವೇತನ ನೀಡಲು ಆಗ್ರಹ

By Kannadaprabha NewsFirst Published May 28, 2020, 7:28 AM IST
Highlights

ವೇತನ ನೀಡಲು ಶಿಕ್ಷಕರಿಂದ ಜಿಲ್ಲಾಧಿಕಾರಿಗೆ ಮನವಿ| ಕೋವಿಡ್‌-19 ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್‌ ಇರುವುದರಿಂದ ಶಾಲೆಗಳ ರಜೆಯಿಂದಾಗಿ ಅತಿಥಿ ಶಿಕ್ಷಕರುಗಳಿಗೆ ಗೌರವಧನ ನೀಡಲಾಗುತ್ತಿಲ್ಲ| ಅತಿಥಿ ಶಿಕ್ಷಕರುಗಳಿಗೆ ಜೀವನ ನಿರ್ವಹಣೆಗೆ ಹಾಗೂ ಕುಟುಂಬ ನಿರ್ವಹಣೆಗೆ ಬಹಳ ತೊಂದರೆ| ಎರಡು ತಿಂಗಳುಗಳಿಂದ ವೇತನವಿಲ್ಲದೆ ಅತಿಥಿ ಶಿಕ್ಷಕರುಗಳಿಗೆ ಜೀವನ ಸಾಕಾಗಿ ಹೋಗಿದೆ|

ಹುಬ್ಬಳ್ಳಿ(ಮೇ.28): ಸರ್ಕಾರದ ನಾನಾ ಇಲಾಖೆಗಳ ಅಡಿ ನೇಮಿಸಿಕೊಂಡಿರುವ ಅತಿಥಿ ಶಿಕ್ಷಕರು ಸದ್ಯ ಸಂಕಷ್ಟದಲ್ಲಿದ್ದು, ಅವರಿಗೆ ಸರ್ಕಾರ ವೇತನ ನೀಡಬೇಕು ಎಂದು ಆಗ್ರಹಸಿ ಶಿಕ್ಷಕ ವೀರಣ್ಣ ಗರಗ ಸೇರಿದಂತೆ ಇತರ ಶಿಕ್ಷಕರು ಜಿಲ್ಲಾಧಿಕಾರಿಗಳ ಮೂಲಕ ಇತ್ತೀಚೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲೆಗಳು, ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರುಗಳ ಪರಿಸ್ಥಿತಿ ಶೋಚನೀಯವಾಗಿದೆ.

ಪ್ಯಾಕೇಜ್‌ನ ಪರಿಹಾರ ಶೀಘ್ರ ಬಿಡುಗಡೆ: ಸಚಿವ ಜಗದೀಶ ಶೆಟ್ಟರ್‌

ಕೋವಿಡ್‌-19 ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್‌ ಇರುವುದರಿಂದ ಶಾಲೆಗಳ ರಜೆಯಿಂದಾಗಿ ಅತಿಥಿ ಶಿಕ್ಷಕರುಗಳಿಗೆ ಗೌರವಧನ ನೀಡಲಾಗುತ್ತಿಲ್ಲ. ಹೀಗಾಗಿ ಅತಿಥಿ ಶಿಕ್ಷಕರುಗಳಿಗೆ ಜೀವನ ನಿರ್ವಹಣೆಗೆ ಹಾಗೂ ಕುಟುಂಬ ನಿರ್ವಹಣೆಗೆ ಬಹಳ ತೊಂದರೆಯಾಗಿದೆ. ಎರಡು ತಿಂಗಳುಗಳಿಂದ ವೇತನವಿಲ್ಲದೆ ಅತಿಥಿ ಶಿಕ್ಷಕರುಗಳಿಗೆ ಜೀವನ ಸಾಕಾಗಿ ಹೋಗಿದೆ. ಉನ್ನತ ವಿದ್ಯಾಭ್ಯಾಸ ಹೊಂದಿಯೂ ಸಮಾಜದಲ್ಲಿ ನಿಕೃಷ್ಟಮಟ್ಟದಲ್ಲಿ ಜೀವನ ನಡೆಸುವ ಪರಿಸ್ಥಿತಿ ಅತಿಥಿ ಶಿಕ್ಷಕರದಾಗಿದೆ. ಯಾವುದೇ ಇಎಸ್‌ಐ, ಪಿಎಫ್‌ ಸೌಲಭ್ಯಗಳಿಲ್ಲದೆ ಜೀತದ ರೀತಿಯಲ್ಲಿ ಕೆಲಸ ಮಾಡುವುದು ಅತಿಥಿ ಶಿಕ್ಷಕರುಗಳಿಗೆ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಉದ್ಯೋಗ ಸಿಗದೆ ನಿರುದ್ಯೋಗಿ ಆಗಬೇಕಾಗುತ್ತದೆ. ಇದರಿಂದಾಗಿ ಅತಿಥಿ ಶಿಕ್ಷಕರುಗಳಿಗೆ ಜೀವನದ ಮೇಲೆ ಜಿಗುಪ್ಸೆ ಉಂಟಾಗಿದೆ. 

ಸರ್ಕಾರವು ಅತಿಥಿ ಶಿಕ್ಷಕರುಗಳ ಪರಿಸ್ಥಿತಿ ಗಮನಿಸುತ್ತಿಲ್ಲ. ಅತಿಥಿ ಶಿಕ್ಷಕ ಎಂಬ ಪದನಾಮ ಕಟ್ಟಿ ಅತಿಥಿ ಶಿಕ್ಷಕರ ತಿಥಿಯನ್ನು ಸರ್ಕಾರ ಮಾಡುತ್ತಿದೆ. ವರ್ಷ ಪೂರ್ತಿ ವೇತನ ಅತಿಥಿ ಶಿಕ್ಷಕರುಗಳಿಗೆ ದೊರೆಯುತ್ತಿಲ್ಲ. 9 ತಿಂಗಳ ಗೌರವಧನ ನೀಡಿ ಅತಿಥಿ ಶಿಕ್ಷಕರನ್ನು ಸೇವೆಯಿಂದ ಕೈಬಿಡಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅತಿಥಿ ಶಿಕ್ಷಕರುಗಳಿಗೆ ಶಾಲೆಗಳು ಪ್ರಾರಂಭವಾಗುವವರೆಗೂ ವೇತನ ನೀಡಬೇಕು. ಯಾವುದೇ ಜನಪ್ರತಿನಿಧಿಗಳು ಅತಿಥಿ ಶಿಕ್ಷಕರ ಪರಿಸ್ಥಿತಿಯನ್ನು ಗಮನಿಸುತ್ತಿಲ್ಲ ಎಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.

click me!