ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನ ಆರಂಭ

By Kannadaprabha News  |  First Published Feb 11, 2024, 10:37 AM IST

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಭಾರತೀಯ ಜನತಾ ಪಾರ್ಟಿ ದೇಶಾದ್ಯಂತ ಹಮ್ಮಿಕೊಂಡಿರುವ ಗ್ರಾಮ ಚಲೋ ಅಭಿಯಾನಕ್ಕೆ ನಗರದ 1ನೇ ವಾರ್ಡ್ ವ್ಯಾಪ್ತಿಯ ಮರಳೇನಹಳ್ಳಿ ಬೂತ್ ಸಂಖ್ಯೆ.1ರಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಪ್ರವಾಸಿ ಕಾರ್ಯಕರ್ತರಾಗಿ ಬೂತ್‌ಗೆ ಭೇಟಿ ನೀಡಿದರು.


  ತುಮಕೂರು :  ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಭಾರತೀಯ ಜನತಾ ಪಾರ್ಟಿ ದೇಶಾದ್ಯಂತ ಹಮ್ಮಿಕೊಂಡಿರುವ ಗ್ರಾಮ ಚಲೋ ಅಭಿಯಾನಕ್ಕೆ ನಗರದ 1ನೇ ವಾರ್ಡ್ ವ್ಯಾಪ್ತಿಯ ಮರಳೇನಹಳ್ಳಿ ಬೂತ್ ಸಂಖ್ಯೆ.1ರಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಪ್ರವಾಸಿ ಕಾರ್ಯಕರ್ತರಾಗಿ ಬೂತ್‌ಗೆ ಭೇಟಿ ನೀಡಿದರು.

ನಂತರ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ 3 ದಿನಗಳ ಕಾಲ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ತುಮಕೂರು ನಗರದಲ್ಲಿ ಎಲ್ಲ ವಾರ್ಡ್ ಮತ್ತು ಬೂತ್‌ಗಳಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದರು.

Tap to resize

Latest Videos

undefined

ದೇಶಾದ್ಯಂತ ಕೈಗೊಳ್ಳಲಾಗಿರುವ ಗ್ರಾಮ ಚಲೋ ಅಭಿಯಾನಕ್ಕೆ ರಾಜ್ಯದಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಚಾಲನೆ ಕೊಟ್ಟಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರು, ಶಾಸಕರು ಅಭಿಯಾನದಲ್ಲಿ ಪ್ರತಿ ಬೂತ್‌ನಲ್ಲಿ ಪ್ರವಾಸಿ ಕಾರ್ಯಕರ್ತರಾಗಿ ಭಾಗವಹಿಸುತ್ತಿದ್ದಾರೆ ಎಂದರು.

ನಾನು ಸಹ ಮುಂದಿನ 3 ದಿನಗಳ ಕಾಲ ಗ್ರಾಮ ಚಲೋ ಅಭಿಯಾನದಲ್ಲಿ ನಿರಂತರವಾಗಿ ಪಾಲ್ಗೋಳ್ಳುತ್ತೇನೆ. ಎಲ್ಲಾ ವರ್ಗದ ಜನರನ್ನು ಈ ಮೂರು ದಿನದ ಅಭಿಯಾನದಲ್ಲಿ ಮಾತನಾಡಿಸಿ ಬಿಜೆಪಿ ದೇಶಕ್ಕೆ ಏಕೆ ಅನಿವಾರ್ಯವಾಗಿದೆ ಎಂಬ ಅಂಶವನ್ನು ಬೂತ್‌ನ ವಿವಿಧ ಸಮಾಜದ ಮುಖಂಡರನ್ನು ಭೇಟಿ ಮಾಡಿ, ಮನವರಿಕೆ ಮಾಡಿಕೊಡುವ ಜತೆಗೆ ಬಿಜೆಪಿ ಕಾರ್ಯಕರ್ತರು ಎಲ್ಲ ಗ್ರಾಮಗಳ ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಲಾಗುವುದು ಎಂದರು

2024 ರಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂಬ ಧ್ಯೇಯದೊಂದಿಗೆ, ಗೋಡೆಯ ಬರಹ ಬರೆಯುವ ಮುಖಾಂತರ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಕರಪತ್ರವನ್ನು ಮನೆ ಮನೆಗೆ ತಲುಪಿಸಿ, ಗ್ರಾಮ ಚಲೋ ಅಭಿಯಾನದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಇಂದ್ರಕುಮಾರ್‌, ಮರಳೇನಹಳ್ಳಿ ಬೂತ್ ಅಧ್ಯಕ್ಷ ಚೇತನ್ ಕುಮಾರ್‌, ದಾಸಣ್ಣ, ಕಾರ್ತಿಕ್, ರಕ್ಷಿತ್, ಪ್ರೀತಂ ಜೈನ್, ಶಿವಕುಮಾರ್‌, ಶಿವಣ್ಣ, ವೀರಭದ್ರಯ್ಯ, ಉಮೇಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

click me!