ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆದ  ಸರ್ಕಾರಿ ನೌಕರರ ವೆಚ್ಚ ಭರಿಸಲಿದೆ ಕರ್ನಾಟಕ ಸರ್ಕಾರ

By Suvarna News  |  First Published Apr 1, 2021, 8:55 PM IST

ಸರ್ಕಾರಿ ನೌಕರರ ಹಿತ ಕಾಯಲು ಸರ್ಕಾರ ಬದ್ಧ/ ಕೊರೋನಾ ಕಾರಣಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ವೈದ್ಯಕೀಯ ವೆಚ್ಚ ಮರುಪಾವತಿ/ ದರ ನಿಗದಿ ಮಾಡಿ ಆದೇಶ  ಹೊರಡಿಸಿದ ಸರ್ಕಾರ


ಬೆಂಗಳೂರು ( ಏ. 01)  ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.  ಕೊರೋನಾ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರ ವೆಚ್ಚ ಪಾವತಿ ಮಾಡಲು ತೀರ್ಮಾನಿಸಿದೆ.

ಜನರಲ್ ವಾರ್ಡ್  10  ಸಾವಿರ ರೂ,  HDU ವಾರ್ಡ್ ನಲ್ಲಿ ಚಿಕಿತ್ಸೆ ಪಡೆದಿದ್ದರೆ ದಿನಕ್ಕೆ  12 ಸಾವಿರ ರೂ. , ವೆಂಟಿಲೇಟರ್ ರಹಿತ ಐಸೋಲೇಶನ್ ಪಡೆದಿದ್ದರೆ  15  ಸಾವಿರ ರೂ., ವೆಂಟಿಲೇಟರ್ ಸಹಿಯತ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆದಿದ್ದರೆ ದಿನಕ್ಕೆ   25  ಸಾವಿರ ರೂ. ಕ್ಲೇಮ್ ಮಾಡುವ ಅವಕಾಶ ಮಾಡಿಕೊಡಲಾಗಿದೆ.

Tap to resize

Latest Videos

undefined

ಕೊರೋನಾ ತಡೆಗೆ ಹೊಸ ನಿಯಮಾವಳಿ, ಏನೆಲ್ಲ ಬದಲಾವಣೆ? 

ಪಿಪಿಇ ಕಿಟ್ ಸೇರಿ ಇತರೆ ಕ್ಲೇಮ್ ಗಳಿಗೂ ಅವಕಾಶ ಮಾಡಿಕೊಡಲಾಗಿದೆ.  ಆಸ್ಪತ್ರೆ ಸೆರ ನಿಗದಿ ಮಾಡಿದಕ್ಕಿಂತ ಕಡಿಮೆ ಇದ್ದಾಗ ಕಡಿಮೆ ಮೊತ್ತ ಪಾವತಿಸಲಿದೆ. ಮುಂಗಡ ಪಾವತಿ ಅವಕಾಶ ಇಲ್ಲ ಎಂದು ತಿಳಿಸಿದೆ.

ಕೊರೋನಾ ನಿಯಂಯತ್ರಣಕ್ಕೆ ಏ. 1  ರಿಂದಲೇ ಹೊಸ ನಿಯಮಾವಳಿಗಳನ್ನು ಜಾರಿ ಮಾಡಲಾಗಿದೆ.  ಒಟ್ಟಿನಲ್ಲಿ ಸರ್ಕಾರಿ ನೌಕರರ ಹಿತ ಕಾಯುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದು ಅನೇಕರು ಸ್ವಾಗತ ಮಾಡಿದ್ದಾರೆ. 

 

 

 

click me!