ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು: ಶಾಸಕ ವೆಂಕಟಶಿವಾರೆಡ್ಡಿ

By Kannadaprabha News  |  First Published Jun 3, 2023, 10:23 PM IST

ಸರ್ಕಾರವು ಪಟ್ಟಣಗಳ ಅಭಿವೃದ್ಧಿಗಾಗಿ ಕೋಟ್ಯಂತರ ರು.ಗಳ ಅನುದಾನ ನೀಡುತ್ತಿದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಎಚ್ಚರವಹಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.


ಕೋಲಾರ (ಜೂ.03): ಸರ್ಕಾರವು ಪಟ್ಟಣಗಳ ಅಭಿವೃದ್ಧಿಗಾಗಿ ಕೋಟ್ಯಂತರ ರು.ಗಳ ಅನುದಾನ ನೀಡುತ್ತಿದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. ಶ್ರೀನಿವಾಸಪುರದ ಪುರಸಭೆಯಲ್ಲಿ ಪುರಸಭಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. 

ಚುನಾವಣಾ ಪ್ರಚಾರಕ್ಕಾಗಿ ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ಪ್ರಚಾರ ಮಾಡಿದ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲ ಬಡವಾಣೆಗಳಲ್ಲಿ ಶುದ್ಧ ಕುಡಿಯುವ ನೀರು, ಬೀದಿಗಳು, ನೈರ್ಮಲ್ಯ ಸ್ವಚ್ಚತೆ, ಚರಂಡಿಗಳ ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿರುವ ಬಗ್ಗೆ ಸಾರ್ವಜನಿಕರು ಮೌಖಿಕಾವಾಗಿ ಮಾಹಿತಿ ನೀಡಿದ್ದರು. ತಕ್ಷಣ ಸ್ವಚ್ಛತಾ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Tap to resize

Latest Videos

ಪ್ರತಿ ವಾರ ಜನಸಂಪರ್ಕ ಸಭೆ ನಡೆಸುವೆ: ಶಾಸಕ ಎ.ಆರ್‌.ಕೃಷ್ಣಮೂರ್ತಿ

ಇ-ಖಾತೆ ಮಾಡಿಕೊಡಿ: ಸಾಮಾನ್ಯವಾಗಿ ಬಹುತೇಕ ಬಡಾವಣೆಗಳಲ್ಲಿ ಆಳವಡಿಸಿರುವ ಬೀದಿ ದೀಪಗಳು ಕಳಪೆ ಮಟ್ಟದ್ದಾಗಿದ್ದು, ದೀಪಗಳು ಮಂದ ಬೆಳಕು ನೀಡುತ್ತಿವೆ. ತಕ್ಷಣ ಬೀದಿ ದೀಪಗಳ ಆಳವಡಿಸಲು ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ದೂರವಾಣಿ ಮುಖಾಂತರ ಮಾತನಾಡಿ ಶೀಘ್ರವಾಗಿ ಬೀದಿ ದೀಪಗಳನ್ನು ಬದಲಿಸುವಂತೆ ಸೂಚಿಸಿದರು. ಪುರಸಭೆಗೆ ವ್ಯಾಪ್ತಿಗೆ ಬರುವ ಇ-ಖಾತೆಗಳನ್ನು ಮಾಡಿಕೊಡುವ ಸಮಯದಲ್ಲಿ ಹಣಕ್ಕಾಗಿ ಪೀಡಿಸದೆ, ಕಾನೂನು ರೀತಿ ಪಕ್ಷತೀತವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡುವಂತೆ ಸೂಚನೆ ನೀಡಿದರು.

ಶ್ರೀನಿವಾಸಪುರದ ರಾಜಾಜಿರಸ್ತೆ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯಲು ನಿಮ್ಮಿಂದಲೇ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಅದರ ಬಗ್ಗೆ ಗುತ್ತಿಗೆದಾರರಿಂದ ಮಾಹಿತಿ ಪಡೆದು ಮಾತನಾಡಿ, ಪುರಸಭೆ ಅಧಿಕಾರಿಗಳು ಶೀಘ್ರವಾಗಿ ನೀರಿನ ಪೈಪ್‌ಲೈನ್‌ ಆಳವಡಿಸುವಂತೆ ಸೂಚಿಸಿದರು. ಗುತ್ತಿಗೆದಾರಿಗೆ ಗುಣಮಟ್ಟದ ರಸ್ತೆ ಕಾಮಗಾರಿ ಮಾಡುವಂತೆ ತಿಳಿಸಿದರು. ಆಡಳಿತಾಧಿಕಾರಿ ಶರೀನ್‌ತಾಜ್‌, ಪುರಸಭೆ ಮುಖ್ಯಾಧಿಕಾರಿ ವೈ.ಎನ್‌.ಸತ್ಯನಾರಾಯಣ್‌, ಕಚೇರಿ ವ್ಯವಸ್ಥಾಪಕ ನವೀನ್‌ ಚಂದ್ರ, ಕಂದಾಯ ಅಧಿಕಾರಿಗಳಾದ ವಿ.ನಾಗರಾಜ್‌, ಎನ್‌.ಶಂಕರ್‌, ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್‌ ಇದ್ದರು.

ಆರೋಗ್ಯವಂತ ಸಮಾಜದ ಉಳಿವಿಗೆ ಪುಸ್ತಕ ಅಗತ್ಯ: ಸಿಎಂ ಸಿದ್ದರಾಮಯ್ಯ

ಬಡವರಿಗೆ ಸೌಲಭ್ಯ ತಲುಪಿಸದಿದ್ದರೆ ಕ್ರಮ: ಎಸ್‌ಸಿ, ಎಸ್‌ಟಿ, ಹಿಂದುಳಿದ ಸಮಾಜಗಳ ಬಡಜನತೆಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಳಂಬ, ವಂಚನೆ ಮಾಡುವುದು ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಎಚ್ಚರಿಕೆ ನೀಡಿದರು. ಹೊಗಳಗೆರೆ ತೋಟಗಾರಿಕೆ ಫಾರಂನಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಎಸ್‌.ಸಿ.ಎಸ್‌.ಟಿ, ಹಿಂದುಳಿದ ಅಲ್ಪ ಸಂಖ್ಯಾತರ ಸಮುದಾಯಗಳಿಗೆ ಅನ್ಯಾಯ ಆಗಿದೆ. ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಮುಂದೆ ಇಂತಹ ಕೃತ್ಯಗಳಿಗೆ ಅಧಿಕಾರಿಗಳು ಅವಕಾಶ ಕೊಡದೆ ಸೌಲಭ್ಯವನ್ನು ಪಕ್ಷಾತೀತವಾಗಿ ಅರ್ಹ ಬಡವರಿಗೆ ಹಂಚಿಕೆ ಮಾಡಬೇಕು ಎಂದು ಸೂಚಿಸಿದರು.

click me!