ಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯಕ್ಕೆ ಹಸುಗೂಸು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ಪತಿ ಹಾಗೂ ತಂದೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತುಮಕೂರು : ಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯಕ್ಕೆ ಹಸುಗೂಸು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ಪತಿ ಹಾಗೂ ತಂದೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತುಮಕೂರಿನ ಕೋರಾ ಪೊಲೀಸ್ ಠಾಣೆಯಲ್ಲಿ ಪತಿ ಸಿದ್ದೇಶ್ ಹಾಗೂ ವಸಂತ ತಂದೆ ಚಿಕ್ಕಹುಲಿಯಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ತುಮಕೂರು ತಾಲೂಕಿನ ಸಿಡಿಪಿಒ ಶಶಿಧರ್ ಆದೇಶದ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಮೌಢ್ಯಾಚರಣೆಗೆ ಒಳಗಾಗಿ ಬಾಣಂತಿ ಹಾಗೂ ಹಸುಗೂಸನ್ನು ಕುಟುಂಬಸ್ಥರು ಊರಿನಿಂದ ಹೊರಗಿಟ್ಟಿದ್ದರು. ಮಳೆ, ಗಾಳಿ, ಚಳಿಗೆ ವೀಪರಿತ ಶೀತದಿಂದ ಹಸುಗೂಸು ಸಾವನ್ನಪ್ಪಿತ್ತು.
ಮಗು ಮೃತಪಟ್ಟಿದ್ದರೂ ಬಾಣಂತಿಯನ್ನು ಮನೆಗೆ ಬಿಟ್ಟು ಕೊಳ್ಳಲು ಕುಟುಂಬದವರು ಹಿಂದೇಟು ಹಾಕುತ್ತಿದ್ದರು. ಬುಧವಾರ ರಾತ್ರಿಯವರೆಗೆ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಕುಟುಂಬಸ್ಥರು ಆಕೆಯನ್ನು ಮನೆಗೆ ಬಿಟ್ಟು ಕೊಳ್ಳಲು ಹಿಂದೇಟು ಹಾಕಿದ್ದರು. ಗುರುವಾರ ಬೆಳಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕುಟುಂಬಸ್ಥರ ಮನವೊಲಿಸಿ ಬಾಣಂತಿಯನ್ನು ಮನೆಗೆ ಬಿಟ್ಟಿದ್ದರು. ಈ ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ ನ್ಯಾ.ನೂರುನ್ನೀಸಾ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಗೆ ಅರಿವು ಮೂಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೌಢ್ಯಾಚರಣೆಗೆ ಒಳಗಾಗಿ ಬಾಣಂತಿಯನ್ನು ಮನೆಗೆ ಬಿಟ್ಟುಕೊಳ್ಳಲು ಹಿಂದೇಟು ಹಾಕಿದ ಆರೋಪದಡಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಬೆತ್ತಲೆ ಪೂಜೆ ಎಂಬಭ್ರಮೆ
ಕೊಪ್ಪಳ: ಮುಗ್ದತೆ, ಮೌಢ್ಯ, ಭಕ್ತಿ ಇವುಗಳನ್ನೇ ಬಂಡವಾಳ ಮಾಡಿಕೊಂಡು ಸಮಾಜವನ್ನು ವಂಚಿಸುವ ದೊಡ್ಡ ಸಮೂಹವೇ ಇದೆ. ಅದೇ ರೀತಿ ತಮ್ಮ ಖುಷಿಗಾಗಿ ಮುಗ್ಧ ಬಾಲಕನನ್ನು ಬೆತ್ತಲೆ ಪೂಜೆ ಮಾಡುವಂತೆ ಪುಸಲಾಯಿಸಿ, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬೆತ್ತಲೆ ಪೂಜೆ ಮಾಡಿದರೆ ಬಡತನ ನಿವಾರಣೆ ಆಗುತ್ತದೆ, ತಂದೆಯ ಸಾಲ ತೀರುತ್ತದೆ ಮತ್ತು ಹಣ ಕೈಸೇರುತ್ತದೆ ಎಂದು ನಂಬಿಸಿ ಹುಡುಗ ಬೆತ್ತಲೆ ಸೇವೆ ಮಾಡುವಂತೆ ಮಾಡಿದ್ದಾರೆ. ನಂತರ ಅದರ ವಿರಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಹರಿ ಬಿಡಲಾಗಿದೆ. ಈ ಬಗ್ಗೆ ಬಾಲಕನ ಪೋಷಕರು ಕೊಪ್ಪಳದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ
ಇದನ್ನೂ ಓದಿ: ಹಾಲುಂಡು ಹೋಗೆ ನಾಗಮ್ಮ.. ಮಹಿಳೆಯರ ಮೇಲೆ ಪ್ರತ್ಯಕ್ಷವಾಯ್ತಾ ನಾಗದೇವತೆ, ವಿಡಿಯೋ ವೈರಲ್?
ಇತ್ತೀಚೆಗಷ್ಟೆ 16 ವರ್ಷದ ಬಾಲಕನ ತಂದೆ ಕೊಪ್ಪಳದಲ್ಲಿ ಮನೆ ಕಟ್ಟಿಸಿದ್ದರು. ಮನೆ ಕಟ್ಟಿಸಲು ಸಾಲ ಮಾಡಿದ್ದರು. ಆ ಸಾಲವನ್ನು ತೀರಿಸುವ ಸಲುವಾಗಿ ಮಗ ಹುಬ್ಬಳ್ಳಿಗೆ ಬಂದು ಕೆಲಸ ಮಾಡುತ್ತಿದ್ದ. ದಿನಗೂಲಿ ನೌಕರನಾಗಿ ಸಾಧ್ಯವಾದಷ್ಟು ಸಂಪಾದಿಸಿ ಮನೆಯ ಸಾಲ ತೀರಿಸಲು ಶ್ರಮಿಸುತ್ತಿದ್ದ. ಬಾಲಕ ತನ್ನ ಕಷ್ಟವನ್ನು ಕೆಲವರ ಬಳಿ ಹೇಳಿಕೊಂಡಿದ್ದಾನೆ. ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾದರೆ ಮಾಡಬೇಕು, ಇಲ್ಲವಾದರೆ ಸುಮ್ಮನಿರಬೇಕು. ಆದರೆ ಈ ಆರೋಪಿಗಳಾದ ಶರಣಪ್ಪ, ಮರಿಗೌಡ ಮತ್ತು ಶರಣಪ್ಪ ತಳವಾರ್ ಎಂಬುವವರು ಬಾಲಕನ ಅಮಾಯಕತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.