ನದಿಯಲ್ಲಿ ತೇಲಿ ಬಂದು ಗ್ರಾಮದ ಬಳಿ ಶವವೊಂದು ಸಿಲುಕಿಕೊಂಡಿತ್ತು. ಆ ಶವದ ಬಳಿ 1 ಕೆಜಿಗೂ ಅತ್ಯಧಿಕ ಪ್ರಮಾನದ ಬಂಗಾರವಿತ್ತು
ಅಥಣಿ (ಅ.09): ನದಿಯಲ್ಲಿ ತೇಲಿ ಬಂದ ಮೃತದೇಹದ ಬಳಿ 1.5 ಕೆಜಿ ಬಂಗಾರ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವರಕೋಡ ಗ್ರಾಮದ ಕೃಷ್ಣಾ ನದಿಯಲ್ಲಿ ಅ. 4 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೃಷ್ಣಾ ನದಿಯಲ್ಲಿ ತೇಲಿಬಂದ ಮೃತದೇಹವು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ ತಾಲೂಕಿನ ಪಾಟಗಾಂವ ಗ್ರಾಮದ ಸಾಗರ ಪಾಟೀಲ (30) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ನದಿಯಲ್ಲಿ ತೇಲಿಬಂದ ಮೃತದೇಹ ಅವರಕೋಡ ಗ್ರಾಮದ ದಡದಲ್ಲಿ ಸಿಕ್ಕಿರುವುದನ್ನು ಗಮನಿಸಿದ ಗ್ರಾಮಸ್ಥರು ಈ ವಿಷಯವನ್ನು ಅಥಣಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹಾವೇಣಿ ಆಟವಾಡುತ್ತಿದೆ ಚಿನ್ನದ ದರ: ಇಲ್ಲಿದೆ ಅ.08ರ ಗೋಲ್ಡ್ ರೇಟ್! .
ಈ ವೇಳೆ ಶವದ ಜೊತೆಗೆ 1.5 ಕೆಜಿಯ ಗಟ್ಟಿಬಂಗಾರ ಕೂಡ ಪತ್ತೆಯಾಗಿದೆ. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ. ಮಾತ್ರವಲ್ಲ, ಮೃತಪಟ್ಟವ್ಯಕ್ತಿಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಲಯ ಡಿವೈಎಸ್ಪಿ ಗಿರೀಶ ವಿ.ಎಸ್. ಕೂಡ ಮಾಹಿತಿ ನೀಡಿದ್ದಾರೆ. ಆದರೆ, ಇದು ಕೊಲೆಯೋ ಹೇಗೆ ಎಂಬುವುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.