
ಕೋಲಾರ(ಜೂ.06): ಎಂಟಿಬಿ ನಾಗರಾಜ್,ಆರ್.ಶಂಕರ್ ಹಾಗು ಹೆಚ್.ವಿಶ್ವನಾಥ್ ಅವರಿಗೆ ಎಂಎಲ್‌ಸಿ ಟಿಕೆಟ್ ಕೊಡಬೇಕು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಆಗ್ರಹ ಪಡಿಸಿದ್ದಾರೆ.
ನ್ಯಾಯಬದ್ದವಾಗಿ ಮೂವರಿಗೂ ಟಿಕೆಟ್ ಕೊಡಬೇಕು. ಸರ್ಕಾರ ರಚನೆಯಾಗಲು 18 ಜನರ ಪಾತ್ರ ಅತಿಮಖ್ಯ.ಯಡಿಯೂರಪ್ಪ ಅವರು ತಪ್ಪುವುದಿಲ್ಲ. ಒಂದು ಬಾರಿ ಯಡಿಯೂರಪ್ಪ ಅವರು ನುಡಿದರೆ ಅದು ಖಂಡಿತ ಆಗುತ್ತೆ, ಈ ಮೂವರಿಗೂ ಎಂಎಲ್‌ಸಿ ಟಿಕೆಟ್ ಕೊಡೊದಾಗಿ ಹೇಳಿದಾರಂತೆ, ಅದರಂತೆ ಕೊಡ್ತಾರೆಂಬ ನಂಬಿಕೆಯಿದೆ ಎಂದರು.
ಇವರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ
ಪಕ್ಷಾಂತರ ಮಾಡದೆ ಇದ್ದಿದ್ದರೆ ಇವತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರ್ತಿರಲಿಲ್ಲ.ವಿರೋದ ಪಕ್ಷದಲ್ಲಿ ಕೂತಿರಬೇಕಿತ್ತು. ಕಾರಣಾಂತರದಿಂದ ಎಲೆಕ್ಷನ್ ನಲ್ಲಿ ಸೋತಿದ್ದಾರೆ, ಮತ್ತೆ ಆಯ್ಕೆಯಾದರೆ ಸರ್ಕಾರಕ್ಕೆ ಮತ್ತಷ್ಟುಬಲ ಬರುತ್ತೆ ಎಂದು ಅವರು ಹೇಳಿದರು.
ಎಂಟಿಬಿಗೆ ಮುನಿಸ್ವಾಮಿ ಬೆಂಬಲ
ಎಂಟಿಬಿ ನಾಗರಾಜ್ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತು ಬಿಜೆಪಿಗೆ ಬಂದಿದ್ದು,ವಿಧಾನಪರಿಷತ್ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಿ ಅವರನ್ನು ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಪಕ್ಷದ ಅಧ್ಯಕ್ಷರು, ಸಿಎಂ ಮೇಲೆ ಒತ್ತಡ ತರಲಾಗುತ್ತಿರುವುದಾಗಿ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಟಮಕ ಬಡಾವಣೆಯಲ್ಲಿನ ನಗರಸಭೆ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಒಲವು ಎಂಟಿಬಿ ನಾಗರಾಜ್ ಕಡೆಗೆ ಇದ್ದು, ಪಕ್ಷದ ಮೂಲ ಕಾರ್ಯಕರ್ತರ ಮನವೊಲಿಸಿ ಅವರಿಗೂ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದ ಅವರು, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಮಂಡ್ಯ: ಕೆಎಂಎಫ್ ನಿರ್ದೇಶಕ ಸ್ಥಾನ ಜೆಡಿಎಸ್ ತೆಕ್ಕೆಗೆ
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ,ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ದೇವರಾಜ್, ನಗರಸಭೆ ಆಯುಕ್ತ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.