ವೀರಶೈವ ಧರ್ಮದಲ್ಲಿ ಜಾತಿ ಬೇಧವಿಲ್ಲ. ಲಿಂಗಬೇಧವಿಲ್ಲ: ನಿಜಗುಣ ದೇವರು| ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದ ಸಭಾಭವನದಲ್ಲಿ ವೀರಶೈವ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರ ಜಯಂತಿ|
ಮುಧೋಳ(ಮಾ.10): ವೀರಶೈವ ಧರ್ಮದಲ್ಲಿ ಜಾತಿ ಬೇಧವಿಲ್ಲ. ಲಿಂಗಬೇಧವಿಲ್ಲ ಎಂದು ನಗರದ ಗವಿಮಠ-ವಿರಕ್ತಮಠದ ನಿಜಗುಣ ದೇವರು ಹೇಳಿದ್ದಾರೆ.
ಸ್ಥಳೀಯ ವೀರಶೈವ ಕಲ್ಯಾಣ ಮಂಟಪದ ಸಭಾಭವನದಲ್ಲಿ ವೀರಶೈವ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರ ಜಯಂತಿ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಕಸಬಾಜಂಬಗಿ ಹಿರೇಮಠದ ರಾಜಶೇಖರ ದೇವರು, ಲೋಕಾಪೂರ ಹಿರೇಮಠದ ಚಂದ್ರಶೇಖರ ಸ್ವಾಮಿಜಿಯವರು ಜಯಂತ್ಯುತ್ಸವದ ಆಚರಣೆ ಹಾಗೂ ರೇಣುಕಾಚಾರ್ಯರು ವೀರಶೈವ ಸಮಾಜಕ್ಕೆ ನೀಡಿದ ಕೋಡುಗೆಗಳ ಕುರಿತು ಮಾತನಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವೀರಶೈವ ಮಹಾಸಭೆಯ ತಾಲೂಕು ಘಟಕದ ಅಧ್ಯಕ್ಷ ಸಿದ್ದು ಕಾಳಗಿ ಹಾಗೂ ವೀರಶೈವ ಸೇವಾ ಸಮಿತಿಯ ಅಧ್ಯಕ್ಷ ರಾಚಪ್ಪಣ್ಣ ಕರೆಹೊನ್ನ ಜಯಂತ್ಯುತ್ಸವ ಕುರಿತು ಸಾಂದರ್ಭಿಕವಾಗಿ ಮಾತನಾಡಿದರು.
ಈ ವೇಳೆ ಜಂಗಮ ಸಮಾಜದ ಅಧ್ಯಕ್ಷ ಅಲ್ಲಯ್ಯ ದೇವರಮನಿ, ಪ್ರಕಾಶ ವಸ್ತ್ರದ, ಬಿ.ಕೆ.ಹಿರೇಮಠ, ಎಮ್.ಎಮ್. ಕಾಖಂಡಕಿ, ಕುಮಾರ ಕೋಣ್ಣೂರಮಠ, ರೇಣಯ್ಯ ನಿಂಗೊಳ್ಳಿ , ಬಸವರಾಜ ಮಠದ, ರುದ್ರಯ್ಯ ಮಠದ, ಕುಮಾರ ಮಠದ,ಮಳಯ್ಯ ವಸ್ತ್ರದ, ಈರಯ್ಯ ಗೋವಿಂದಪುರಮಠ, ಆರ್.ಮಠದ,ಸುರೇಶ ಹಿರೇಮಠ, ಹಾಗೂ ಮಹಿಳಾ ಘಟಕದ ಅಧ್ಯಕ್ಷರು,ಸರ್ವಸದಸ್ಯರು ಸೇರಿದಂತೆ ತಾಲೂಕಿನ ಸುತ್ತಮತ್ತಲಿನ ವೀರಶೈವ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.