ಶಹಾಪುರ: ಗ್ಯಾಸ್‌ ಸಿಲೆಂಡರ್‌ ಸ್ಫೋಟ, ಮಹಿಳೆಗೆ ಗಾಯ

Kannadaprabha News   | Asianet News
Published : Aug 03, 2020, 03:11 PM IST
ಶಹಾಪುರ: ಗ್ಯಾಸ್‌ ಸಿಲೆಂಡರ್‌ ಸ್ಫೋಟ, ಮಹಿಳೆಗೆ ಗಾಯ

ಸಾರಾಂಶ

ಮನೆಯಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಸ್ಫೋಟ| ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ನಡೆದ ಘಟನೆ| ಸ್ಫೋಟದ ಸದ್ದಿಗೆ ದಿಕ್ಕಾಪಾಲಾಗಿ ಓಡಿದ ಅಕ್ಕಪಕ್ಕದ ಮನೆಯ ಜನರು|

ಶಹಾಪುರ(ಆ.03): ತಾಲೂಕಿನ ಚಾಮನಾಳ ಗ್ರಾಮದ ನಾಗಮ್ಮ ಎನ್ನುವವರ ಮನೆಯಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಭಾನುವಾರ ಸ್ಫೋಟಗೊಂಡು, ನಾಗಮ್ಮ ಅವರ ತಾಯಿ ಭೀಮವ್ವ ತೀವ್ರವಾಗಿ ಗಾಯಗೊಂಡಿದ್ದು ಶಹಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸ್ಫೋಟದ ಸದ್ದಿಗೆ ಅಕ್ಕಪಕ್ಕದ ಮನೆಯ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವರು ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. 

ಮದ್ಯ ಸಿಕ್ಕಿಲ್ಲವೆಂದು ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಎಸ್ಕೇಪ್..!

ಅವಘಡದಲ್ಲಿ ನಾಗಮ್ಮ ಅವರಿಗೆ ಸೇರಿದ ಆಹಾರಧಾನ್ಯ, ಚಿನ್ನಾಭರಣ ಹಾಗೂ 25,000 ರು.ಗಳ ನಗದು ಸೇರಿದಂತೆ ಅಂದಾಜು 2 ಲಕ್ಷ ರು.ಗಳ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಹೊಲದ ಕಾಗದ ಪತ್ರಗಳೂ ಭಸ್ಮವಾಗಿವೆ.
 

PREV
click me!

Recommended Stories

ಕಾಫಿನಾಡಲ್ಲಿ ಹೊಸ ವರ್ಷದ ಸಂಭ್ರಮಕ್ಕೆ 'ಬ್ರೇಕ್' ಹಾಕುತ್ತಾ ಕಟ್ಟುನಿಟ್ಟಿನ ರೂಲ್ಸ್? ಪ್ರವಾಸಿಗರ ಹರಿವು ಇಳಿಮುಖ!
New Year 2026: ಕಾಫಿನಾಡಿಗರಿಗೆ ನಿರಾಸೆ ಮೂಡಿಸಿದ ಹೊಸ ವರ್ಷ, ಉದ್ಯಮಿಗಳಿಗೆ ಆತಂಕ!