ಮಾಜಿ ಸ್ವೀಕರ್ ಕ್ಷೇತ್ರದಲ್ಲಿ ಎಗ್ಗಿಲ್ಲದೆ ನಡೀತಿದೆ ಬೆಟ್ಟಿಂಗ್ ದಂಧೆ

Suvarna News   | Asianet News
Published : Feb 20, 2020, 03:11 PM IST
ಮಾಜಿ ಸ್ವೀಕರ್ ಕ್ಷೇತ್ರದಲ್ಲಿ ಎಗ್ಗಿಲ್ಲದೆ ನಡೀತಿದೆ ಬೆಟ್ಟಿಂಗ್ ದಂಧೆ

ಸಾರಾಂಶ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಕ್ಷೇತ್ರದಲ್ಲಿಯೇ ರಾಜಾರೋಷವಾಗಿ ಇಸ್ಪೀಟ್ ಅಡ್ಡೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕ್ರೀಡಾ ಹಾಗೂ ಹೋಟೆಲ್‌ ಕ್ಲಬ್ ನಡೆಸಲು ಅನುಮತಿ ಪಡೆದು ಗ್ಯಾಂಬ್ಲಿಂಗ್ ನಡೆಸಲಾಗುತ್ತಿದೆ.  

ಕೋಲಾರ(ಫೆ.20) : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಕ್ಷೇತ್ರದಲ್ಲಿಯೇ ರಾಜಾರೋಷವಾಗಿ ಇಸ್ಪೀಟ್ ಅಡ್ಡೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕ್ರೀಡಾ ಹಾಗೂ ಹೋಟೆಲ್‌ ಕ್ಲಬ್ ನಡೆಸಲು ಅನುಮತಿ ಪಡೆದು ಗ್ಯಾಂಬ್ಲಿಂಗ್ ನಡೆಸಲಾಗುತ್ತಿದೆ.

ಗಡಿ ಜಿಲ್ಲೆ ಕೋಲಾರದಲ್ಲಿ ಅಂತಾರಾಜ್ಯ ಮಟ್ಟದ ಹೈಟೆಕ್ ಇಸ್ಪೀಟ್ ಅಡ್ಡೆ ಕಾರ್ಯ ನಿರ್ವಹಿಸುತ್ತಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಲವೆಡೆ ಇಸ್ಪೀಟ್ ಅಡ್ಡೆ ತಲೆ ಎತ್ತಿದ್ದು ಹೆಚ್ಚಿನ ಜನ ಇಲ್ಲಿ ಸೇರುತ್ತಿದ್ದಾರೆ.

ಭೂಗರ್ಭದಿಂದ ಲೀಥಿಯಂ ಪಡೆವ ಕಾರ್ಯ ಶುರು: 50 ಎಕರೆ ಭೂಮಿ ಅಗೆತ

ರಾಯಲ್ಪಾಡು ಹೋಬಳಿಯ ಗುಂಟ್ಲಪಲ್ಲಿ ಬಳಿ ಹೈಟೆಕ್ ಗ್ಯಾಂಬ್ಲಿಂಗ್ ಅಡ್ಡೆ ಇದ್ದು, ಆಂಧ್ರ, ತಮಿಳುನಾಡು, ಬೆಂಗಳೂರಿನಿಂದಲೂ ಶ್ರೀಮಂತರು ಬಂದು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಆಂಧ್ರ ಮೂಲದ ಪ್ರವೀಣ್ ರೆಡ್ಡಿ ಹಾಗೂ ಮುದ್ದಿ ರೆಡ್ಡಿ‌ ಎಂಬುವವರಿಂದ ದಂಧೆ ನಡೆಯುತ್ತಿದ್ದಿ, ಕ್ರೀಡಾ ಹಾಗೂ ಹೋಟೆಲ್‌ ಕ್ಲಬ್ ನಡೆಸಲು ಅನುಮತಿ ಪಡೆದು ಗ್ಯಾಂಬ್ಲಿಂಗ್ ನಡೆಸಲಾಗುತ್ತಿದೆ. ಕೆಲ ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರು ಇದರಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ.

PREV
click me!

Recommended Stories

ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Discover Koppal: ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್: ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ