ಗದಗ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ತನಗೆ, ಇಬ್ಬರು ಅಪ್ರಾಪ್ತ ಯುವಕರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಸಾವಿಗೆ ಶರಣಾಗಿದ್ದಾಳೆ.
ಗದಗ (ಜ.16): ಪ್ರತಿನಿತ್ಯ ಶಾಲೆಗೆ ಹೋಗುವಾಗ, ಬರುವಾಗ ಇಬ್ಬರು ಅಪ್ರಾಪ್ತ ಯುವಕರು ಬರುವಾಗ ತನಗೆ ಕಿರುಕುಳ ನೀಡುತ್ತುದ್ದರೆಂದು ಆರೋಪಿಸಿ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಣಗಾರ ಕಾಲೋನಿಯಲ್ಲಿ ನಡೆದಿದೆ. ಅಪ್ರಾಪ್ತರ ಕಿರುಕುಳದಿಂದ ಬೇಸತ್ತು ಖುಷಿ (15) ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಇನ್ನು ಬಾಲಕಿ 9ನೇ ತರಗತಿ ಓದುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾಳೆ. ಇನ್ನು ತನ್ನ ಸಾವಿಗೆ ಇಬ್ಬರು ಅಪ್ರಾಪ್ತ ಬಾಲಕರು ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಮಾಡಿದ್ದಳು. ಆದರೆ, ಇದನ್ನು ಮನೆಯವರು ನಿರ್ಲಕ್ಷ್ಯ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು ಮತ್ತೊಬ್ಬ ಟೆಕ್ಕಿ ಸಾವು; ಮಾವನ ಕಾಮದಾಟಕ್ಕೆ ಬಲಿಯಾದ ಮದುವೆಯಾಗದ ಸೊಸೆ!
ಇನ್ನು ಮನೆಯವರು ತನ್ನ ಮಾತನ್ನು ಗಂಭೀರವಾಗಿ ಪರಿಗಣಿಸದ ಕಾರಣ, ಬಾಲಕಿ ಮತ್ತೆ ಮನೆಯಲ್ಲಿ ಈ ವಿಚಾರ ಹೇಳಿರಲಿಲ್ಲ. ಪುನಃ ಆಕೆ ಪ್ರತಿನಿತ್ಯ ಶಾಲೆಗೆ ಹೋಗುವಾಗ ಇಬ್ಬರು ಬಾಲಕರು ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಮೃತ ಬಾಲಕಿಯ ತಂದೆ-ತಾಯಿ ಹಾಗೂ ಪೋಷಕರು ಕಿರುಕುಳ ನೀಡುತ್ತಿದ್ದ ಬಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ಪಾಲಕರ ದೂರು ಆಧರಿಸಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.