ಪರಂ - ರೆಡ್ಡಿ ನಡುವೆ ಮನಸ್ತಾಪಕ್ಕೆ ಕಾರಣವಾದ ಬೆಂಗಳೂರಿನ ಪ್ರತಿಷ್ಠಿತ ಹುದ್ದೆ ?

Published : Sep 21, 2018, 10:42 PM ISTUpdated : Sep 22, 2018, 03:17 PM IST
ಪರಂ - ರೆಡ್ಡಿ ನಡುವೆ ಮನಸ್ತಾಪಕ್ಕೆ ಕಾರಣವಾದ ಬೆಂಗಳೂರಿನ ಪ್ರತಿಷ್ಠಿತ ಹುದ್ದೆ ?

ಸಾರಾಂಶ

ಕಳೆದ ಕೆಲ ದಿನಗಳಿಂದ ಇಬ್ಬರು ನಾಯಕರು ಬೇರೆ-ಬೇರೆ ಆಗಿದ್ದರು ಎಂದು ಹೇಳಲಾಗುತ್ತಿದೆ.ಈ ಸಂಬಂಧ ಇಂದು ಡಾ.ಜಿ.ಪರಮೇಶ್ವರ್ ರವರೇ ರಾಮಲಿಂಗಾ ರೆಡ್ಡಿ ರವರಿಗೆ ಕರೆ ಮಾಡಿ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು[ಸೆ.21]: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ನಡುವೆ ಮನಸ್ತಾಪ ಸೃಷ್ಟಿಸಿತ್ತಾ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗಳಿಗೆ ಕಾರಣವಾಗ್ತಿದೆ.

ಕಳೆದ ಕೆಲ ದಿನಗಳಿಂದ ಇಬ್ಬರು ನಾಯಕರು ಬೇರೆ-ಬೇರೆ ಆಗಿದ್ದರು ಎಂದು ಹೇಳಲಾಗುತ್ತಿದೆ.ಈ ಸಂಬಂಧ ಇಂದು ಡಾ.ಜಿ.ಪರಮೇಶ್ವರ್ ರವರೇ ರಾಮಲಿಂಗಾ ರೆಡ್ಡಿ ರವರಿಗೆ ಕರೆ ಮಾಡಿ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.ಈ ಸಂದರ್ಭದಲ್ಲಿ ಮೇಯರ್ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ರಾಮಲಿಂಗಾ ರೆಡ್ಡಿ ರವರಿಗೆ ಪರಮೇಶ್ವರ್ ಕೋರಿದ್ದಾರಂತೆ.

ಆ ವೇಳೆ ತಮ್ಮ ಅಭ್ಯರ್ಥಿ ಗಂಗಾಂಬಿಕಾ ಮಲ್ಲಿಕಾರ್ಜುನ್ ರವರಿಗೆ ಮೇಯರ್ ಸ್ಥಾನ ನೀಡಬೇಕು.ಈ ಸಂಬಂಧ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವುದಾಗಿ ಪರಮೇಶ್ವರ್ ರವರಿಗೆ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಮಾತನಾಡಿದ ಪರಮೇಶ್ವರ್ ಪ್ರಸ್ತುತ ರಾಜಕೀಯ ವಿಚಾರಗಳನ್ನು ಚರ್ಚಿಸಿದ್ದಾಗಿ ತಿಳಿಸಿದ್ದಾರೆ. 

PREV
click me!

Recommended Stories

ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ
ನಾಳೆ ಅರ್ಧ ಬೆಂಗಳೂರಿಗೆ ನೀರು ಪೂರೈಕೆ ಸ್ಥಗಿತ: ಕಾವೇರಿ 5ನೇ ಹಂತದ ಪೈಪ್‌ಲೈನ್‌ನಲ್ಲಿ ಸೋರಿಕೆ!