Railway Bridge 'ಯಶವಂತಪುರ ವೃತ್ತದ ಸಮೀಪ 12 ಕೋಟಿ ರೂ.ವೆಚ್ಚದಲ್ಲಿ 4 ಪಥದ ರೈಲ್ವೆ ಸೇತುವೆ ನಿರ್ಮಾಣ'

Published : Dec 09, 2021, 11:09 PM IST
Railway Bridge 'ಯಶವಂತಪುರ ವೃತ್ತದ ಸಮೀಪ 12 ಕೋಟಿ ರೂ.ವೆಚ್ಚದಲ್ಲಿ 4 ಪಥದ ರೈಲ್ವೆ ಸೇತುವೆ ನಿರ್ಮಾಣ'

ಸಾರಾಂಶ

* ಯಶವಂತಪುರ ವೃತ್ತದ ಸಮೀಪ 12 ಕೋಟಿ ರೂ.ವೆಚ್ಚದಲ್ಲಿ 4 ಪಥದ ರೈಲ್ವೆ ಸೇತುವೆ * ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿಕೆ * ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ  ಅಶ್ವತ್ಥನಾರಾಯಣ 

ಬೆಂಗಳೂರು, (ಡಿ.09): ಮಲ್ಲೇಶ್ವರಂ(Malleshwaram) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಶವಂತಪುರ (Yashwanthpur) ವೃತ್ತದ ಸಮೀಪ ಇರುವ ರೈಲ್ವೆ ಸೇತುವೆಯನ್ನು 12 ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಹೇಳಿದ್ದಾರೆ. 

ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ರಸ್ತೆ, ಮೂಲಸೌಕರ್ಯ, ಬೃಹತ್ ನೀರುಕಾಲುವೆ ಮತ್ತು ಕೆರೆಗಳ ವಿಭಾಗಗಳಿಂದ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದ ಅವರು ಇಂದು(ಗುರುವಾರ) ಈ ತೀರ್ಮಾನ ತಿಳಿಸಿದರು. 

ಮುಂದಿನ ದಸರಾ ಹಬ್ಬಕ್ಕೆ ಬೆಂಗಳೂರು ಮೈಸೂರು ರಸ್ತೆ ಲೋಕಾರ್ಪಣೆ; 3 ಗಂಟೆ ಪ್ರಯಾಣ ಇನ್ನು 90 ನಿಮಿಷ!

ಸಭೆಯ ಬಳಿಕ ಮಾತನಾಡಿದ ಅವರು, ಈ ಸೇತುವೆಯ ಮರುನಿರ್ಮಾಣವು ಜನವರಿಯಲ್ಲಿ ಆರಂಭವಾಗಿ 2022ರ ಅಕ್ಟೋಬರಿನಲ್ಲಿ ಮುಗಿಯಲಿದೆ. ಇದರ ಜತೆಗೆ ಮಲ್ಲೇಶ್ವರಂ ಬಡಾವಣೆಯಲ್ಲಿರುವ ನಿರ್ಮಲಾ ಕಾನ್ವೆಂಟ್ ಬಳಿಯಲ್ಲೂ ಒಂದು ರೈಲ್ವೆ ಸೇತುವೆ(Railway Bridge) ನಿರ್ಮಿಸಲಾಗುವುದು ಎಂದು ಹೇಳಿದರು. 

ಮಿಕ್ಕಂತೆ, ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಮಿಲ್ಕ್ ಕಾಲೋನಿ ಸಂಪರ್ಕಕ್ಕೆ ರೈಲ್ವೆ ಅಂಡರ್ ಪಾಸ್, ಮೈಸೂರು ಲ್ಯಾಂಪ್ ಕಾರ್ಖಾನೆ ಪಕ್ಕದಿಂದ ಬ್ರಿಗೇಡ್ ಅಪಾರ್ಟ್ ಮೆಂಟ್ ನಡುವೆ ಸುಗಮ ಸಂಚಾರಕ್ಕೆ ರೈಲ್ವೆ ಕೆಳಸೇತುವೆ ಮತ್ತು ಇಡೀ ಸಂಪಿಗೆ ರಸ್ತೆಯನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ನುಡಿದರು. 

ಭಾರತೀಯ ವಿಜ್ಞಾನ ಮಂದಿರದ ಎದುರು ಮೇಖ್ರಿ ರಸ್ತೆಯ ಕಡೆಗೆ ಹೋಗುವ ರಸ್ತೆಯು ಈಗ ಕಿರಿದಾಗಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ಅಗಲೀಕರಣಕ್ಕೆ ವಿಜ್ಞಾನ ಮಂದಿರದ ಸ್ವಲ್ಪ ಭೂಮಿ ಬೇಕಾಗುತ್ತದೆ. ಈ ಸಂಬಂಧ ಆ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲು ಮುಖ್ಯ ಕಾರ್ಯದರ್ಶಿಗಳಿಗೆ  ಜವಾಬ್ದಾರಿ ವಹಿಸಲಾಗಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು. 

ಸಭೆಯಲ್ಲಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ದೀಪಕ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಬೆಂಗಳೂರು-ಮೈಸೂರು ರಸ್ತೆ
10 ಲೇನ್ ಬೆಂಗಳೂರು ಮೈಸೂರು ಎಕಾನಾಮಿಕ್ ಕಾರಿಡಾರ್ ಅತ್ಯಂತ ವೇಗದಲ್ಲಿ ನಿರ್ಮಾಣವಾಗುತ್ತಿದೆ. 2022 ಅಕ್ಟೋಬರ್ ತಿಂಗಳಲ್ಲಿ ಈ ರಸ್ತೆ ಕಾಮಾಗಾರಿ ಪೂರ್ಣಗೊಳ್ಳಲಿದೆ. ಈ ರಸ್ತೆಯಿಂದ ಎರಡು ನಗರಗಳ ಪ್ರಯಾಣ ಸಮಯ 3 ಗಂಟೆಯಿಂದ ಕೇವಲ 90 ನಿಮಿಷಕ್ಕೆ ಇಳಿಯಲಿದೆ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ. 

PREV
Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!