ಕಾಫಿನಾಡಲ್ಲಿ ಪಾಸಿಟಿವ್ ಖಾತೆ ತೆಗೆದ ಕೊವಿಡ್, ನಾಲ್ವರಿಗೆ ಸೋಂಕು ದೃಢ!

By Ravi Janekal  |  First Published Dec 21, 2023, 1:20 PM IST

ಕಳೆದ ವಾರದಿಂದ ರಾಜ್ಯಾದ್ಯಂತ ಕೊವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಬೆಂಗಳೂರು, ರಾಮನಗರ, ಮಂಡ್ಯ ಪ್ರಕರಣಗಳು ಹೆಚ್ಚಾಗುವುದರ ಜೊತೆಗೆ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಕೊರೊನಾ ಮೊದಲ ಪಾಸಿಟಿವ್ ಖಾತೆ ತೆಗೆದು ಆತಂಕ ಮೂಡಿಸಿದೆ.


ಚಿಕ್ಕಮಗಳೂರು (ಡಿ.21):  ಕಳೆದ ವಾರದಿಂದ ರಾಜ್ಯಾದ್ಯಂತ ಕೊವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಬೆಂಗಳೂರು, ರಾಮನಗರ, ಮಂಡ್ಯ ಪ್ರಕರಣಗಳು ಹೆಚ್ಚಾಗುವುದರ ಜೊತೆಗೆ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಕೊರೊನಾ ಮೊದಲ ಪಾಸಿಟಿವ್ ಖಾತೆ ತೆಗೆದು ಆತಂಕ ಮೂಡಿಸಿದೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ‌ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿರುವ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್ ಮುಂದುವರಿಸಿರುವ ಆರೋಗ್ಯ ಇಲಾಖೆ. ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದ್ದ ನಾಲ್ವರು. ನಿನ್ನೆ ಕೊರೊನಾ ಟೆಸ್ಟ್ ಮಾಡಿಸಿದ್ದ 51 ಜನರ ಪೈಕಿ ನಾಲ್ವರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. 

Tap to resize

Latest Videos

undefined

 

ಶಬರಿಮಲೆಯಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ: ಸಚಿವ ರಾಜಣ್ಣ

ಇದೀಗ ಅವರ ನೇರ ಸಂಪರ್ಕದಲ್ಲಿದ್ದ ಇನ್ನು ಹಲವರಿಗೂ ಸೋಂಕು ತಗುಲಿರುವ ಭೀತಿ ಶುರುವಾಗಿದೆ. ಪಾಸಿಟಿವ್ ಬಂದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದವರಿಗೆ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಬೆಳಗ್ಗೆಯಿಂದ ಟೆಸ್ಟ್‌ ಮಾಡುತ್ತಿರುವ ಸಿಬ್ಬಂದಿ.  ಜ್ವರ, ಕೆಮ್ಮು, ನೆಗಡಿ, ಕೊರೊನಾ ಲಕ್ಷಣಗಳು ಕಂಡಬಂದ ಜನರು ಆಸ್ಪತ್ರೆಗೆ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಕೊರೊನಾ ವೈರಸ್‌ ಮುಗಿಯಿತು ಅನ್ನುವಷ್ಟರಲ್ಲಿ ಮತ್ತೆ ಬಂದು ವಕ್ಕರಿಸಿದೆ. ಇದು ನಾಲ್ಕನೆ ಅಲೆಗೆ ಕಾರಣವಾಗ್ತಾದ ಎಂಬ ಆತಂಕ ಸೃಷ್ಟಿಸಿದೆ. ಚಳಿಗಾಲ ಆಗಿರುವುದರಿಂದ ಸೋಂಕು ಹರಡುವ ವೇಗ ಹೆಚ್ಚಳವಾಗಿದೆ. 

ಕೊರೊನಾ ವೈರಸ್ ದಿನೇ ದಿನೇ ಹೆಚ್ಚಳ: 7 ಮಂದಿ ಐಸಿಯುನಲ್ಲಿ!

click me!